ವನಿತಾ ಉತ್ಕರ್ಷಕ ಮಹಿಳಾ ಮಂಡಳದಲ್ಲಿ ಮಹಿಳಾ ದಿನಾಚರಣೆ
(ಚಿತ್ರದಲ್ಲಿ ಇರುವವರು- ಶ್ರೀಮತಿ ಪೂಣಿ೯ಮಾ ಯಾದಗಿರಿ,ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ, ಶ್ರೀಮತಿ ಮೀನಾಕ್ಷಿ ಸಾವಳಗಿ, ಶ್ರೀಮತಿ ಶಾಂತಾಬಾಯಿ ಕೌತಾಳ,ಶ್ರೀಮತಿ ರಮಾಬಾಯಿ ಕುಲಕರ್ಣಿ.)
e-ಸುದ್ದಿ ವಿಜಯಪುರ
ನಗರದ ಸ್ಟೇಶನ್ ರಸ್ತೆಯಲ್ಲಿರುವ ವನಿತಾ ಉತ್ಕರ್ಷಕ ಮಹಿಳಾ ಮಂಡಳದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು .ಹಿರಿಯ ಮಹಿಳಾ ಸಾಹಿತಿಯಾದ ಶ್ರೀಮತಿ .ಪ್ರಭಾವತಿ ಎಸ್ ದೇಸಾಯಿ ಹಾಗೂ ಹಿರಿಯ ವಿದೂಷಕಿ ಹಾಗೂ ಗಮಕ ಗಾಯಕಿ ಶ್ರೀಮತಿ ಶಾಂತಾಬಾಯಿ ಕೌತಾಳ ಅವರನ್ನು ಸನ್ಮಾನಿಸಿದರು.
ಮಂಡಳದ ಕಾರ್ಯದರ್ಶಿಗಳಾದ ಶ್ರೀಮತಿ ಭಾಗ್ಯಲಕ್ಷ್ಮಿ ಉ ಸಿಂದಗಿಕರ್ ಅವರು ಸಭಿಕರನ್ನು ಸ್ವಾಗತಿಸಿ ಮಂಡಳ ನಡೆದು ಬಂದ ದಾರಿಯ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು.
ಉಧ್ಘಾಟಕರಾಗಿ ಆಗಮಿಸಿದ ಶ್ರೀಮತಿ ಮೀನಾಕ್ಷಿ ಸಾವಳಗಿ ಯವರನ್ನು ಶ್ರೀಮತಿ ಮಮತಾ ಎನ್ ದೇಸಾಯಿಯವರು ಪರಿಚಯಿಸಿದರು,ಉಧ್ಘಾಟನೆ ಮಾಡಿದ ಮೀನಾಕ್ಷಿ ಸಾವಳಗಿಯವರು ಮಹಿಳೆಯರಿಗೆ ಇರುವ ಕಾನೂನು ಅನುಕೂಲಗಳನ್ನು ವಿಸ್ತಾರವಾಗಿ ಮಾತನಾಡಿ ನಾವು ನಮ್ಮ ಭಾರತೀಯ ಸಂಸ್ಕೃತಿ ಯನ್ನು ಮರೆಯ ಬಾರದು ತಾಯಿಂದಿರು ಮಕ್ಕಳಿಗೆ ಹಿಂದೂ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕೆಂದು ಹೇಳಿದರು.
ಸನ್ಮಾನಿತರಾದ ಶ್ರೀಮತಿ ಪ್ರಭಾವತಿ ಎಸ್ ದೇಸಾಯಿಯವರ ಪರಿಚಯವನ್ನು ಡಾ.ಶ್ರೀದೇವಿ ಕಿ ಚಿಲ್ಲಾಳಶೆಟ್ಟಿ ಯವರು ಮಾಡಿದರು. ಪ್ರಭಾವತಿ ದೇಸಾಯಿಯವರು ಮಹಿಳೆಯರು ಮನೆ,ಮಕ್ಕಳು,ಗಂಡಂದಿರ ಏಳಿಗಾಗಿ ಮತ್ತು ಸಮಾಜಕ್ಕಾಗಿ ದಿನವಿಡಿ ಗಂಧದ ಕೊರಡಿನಂತೆ ಜೀವನ ಸವಿಸುತ್ತಾರೆ,ಆದರೆ ತಮಗಾಗಿ ಸಮಯವನ್ನು ಇಟ್ಟುಕೊಳ್ಳುವದಿಲ್ಲ, ಪ್ರತಿಯೊಬ್ಬ ಮಹಿಳೆ ತನಗಾಗಿ ಒಂದು ತಾಸು ಮೀಸಲಾಗಿಟ್ಟುಕೊಂಡು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಮನೆಯಲ್ಲಿ ಲಿಂಗ ಭೇದಮಾಡದೆ ಮಕ್ಕಳನ್ನು ಬೆಳೆಸಬೇಕೆಂದು ಹೇಳಿ ತಾವು ರಚಿಸಿದ ಮಹಿಳಾ ಸಂವೇದನನೆಯ ಒಂದು ಗಜಲ್ ವಾಚನ ಮಾಡಿದರು.
ಸನ್ಮಾನಿತರಾದ ಶ್ರೀಮತಿ ಶಾಂತಾಬಾಯಿ ಕೌತಾಳ ಅವರನ್ನು ಡಾ.ಅರ್ಚಚನಾ ವಿ.ಸಿಂದಗಿಕರ್ ಅವರು ಪರಿಚಯ ಮಾಡಿದರು,ಶಶಿಕಲಾ ಶಿಲೇದಾರ ಅವರು ಪುಷ್ಪ ಹಾಗು ಪುಸ್ತಕನೀಡಿ ಗೌರವಿಸಿದರು.ಶಾಂತಾಬಾಯಿ ಕೌತಾಳ ಅವರು ತಮ್ಮಕಾಲದ ಬದುಕು ಮತ್ತು ಈಗಿನ ಕಾಲದ ಮಹಿಳೆಯರ ಬದುಕಿನ ಬಗ್ಗೆ ಮಾತನಾಡಿದರು.
ಇನ್ನೊಬ್ಬ ಅಥಿತಿಗಳಾದ ಶ್ರೀಮತಿ ಗೌರಮ್ಮ ರೆಡ್ಡಿ ಯವರು ಹೆಣ್ಣು ಮಕ್ಕಳಿಗೆ ವಿದ್ಯೆ ವಿನಯ ಕಲಿಸ ಬೇಕು,ವಿದ್ಯೆ ಕಲಿತಿದ್ದೇನೆಂದು ಅಹಂ ದಲ್ಲಿ ನೌಕರಿ ಮಾಡುವುದರಿಂದ ಸಂಸಾರದಲ್ಲಿ ಬಿರುಕು ಬಿಡುವ ಸಾಧ್ಯತೆ ಇರುತ್ತದೆ ಅವಶ್ಯಕತೆ ಇದ್ದವರು ಮಾಡಿರೆಂದು ಹೇಳಿದರು,ವೇದಿಕೆಯ ಮೇಲೆ ಹಿರಿಯರಾದ ಶ್ರೀಮತಿ ರಮಾಬಾಯಿ ಕುಲಕಣಿ೯ ಯವರು ಉಪಸ್ಥಿತರಿದ್ದರು.
ಮಹಿಳೆರಿಗಾಗಿ ಒಳಾಂಗಣ ಕ್ರೀಡೆಗಳನ್ನು ಆಯೋಜಿಸಿದ್ದು ,ವಿಜಯಿತರಿಗೆ ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು ಭರತ ನಾಟ್ಯ ಕಲಾವಿದೆಯರಾದ ಕು.ಭವಾನಿ ಕುಲಕರ್ಣಿ, ಕು. ಮಹೇಳ್ವರಿ ಮುತ್ತಿನ ಅವರು ತಮ್ಮ ಭರತ ನಾಟ್ಯ ಕಲೆಯನ್ನು ಪ್ರದಶಿ೯ಸಿ ಸಭಿಕರಿಗೆ ರಂಚಿಸಿದರು.
ಕಾರ್ಯಕ್ರಮದ ಮತ್ತು ಮಂಡಳದ ಅದ್ಯಕ್ಷರಾದ ಶ್ರೀಮತಿ ಪೂಣಿ೯ಮಾ ಯಾದಗಿರಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಹಿಳಾ ದಿನಾಚರಣೆ ಎಂದು ಮತ್ತು ಹೇಗೆ ಪ್ರಾರಂಭವಾಯಿತೆಂದು ವಿವರಿಸಿದರು.
ಕಾರ್ಯಕ್ರಮದ ವಂದನಾರ್ಪಣೆಯನ್ನು ಮಂಡಳದ ಉಪಾಧ್ಯಕ್ಷ ರಾದ ಶ್ರೀಮತಿ ಕಾಮಾಕ್ಷಿ ವ ಚಿಲ್ಲಾಳಶೆಟ್ಟಿ ಯವರು ಮಾಡಿದರು
ಕಾರ್ಯಕ್ರಮ ದಲ್ಲಿ ಸಭಿಕರಾಗಿ,ಅರ್ಪಣಾ ಸಿದ್ಧಾಂತಿ,ಲಕ್ಷ್ಮಿ, ಬಾಡಗಂಡಿ ಮೇಡಂ,ಲತಾ ಕುಲಕರ್ಣಿ, ಗಿರುಗಾಂವಕರ ಬಳಗ,ಶೈಲಾ ಪಾಟೀಲ,ಸೀಮಾ,ವೈಶಾಲಿ,ಶೆಟ್ಟಿ ಕುಟುಂಬ,ಹಿರೇಮಠ ಕುಟುಂಬ,ಮುಂತಾದ ಅನೇಕ ಮಹಿಳೆಯರು ಉಪಸ್ಥಿತರಿದ್ದರು.