ಸಾಂಸ್ಕೃತಿಕ ನಗರ‌ ಮಸ್ಕಿ ರಾಯಚೂರು ಜಿಲ್ಲೆಗೆ ಮಾದರಿ- ಪ್ರತಾಪಗೌಡ ಪಾಟೀಲ

ಸಾಂಸ್ಕೃತಿಕ ನಗರ‌ ಮಸ್ಕಿ ರಾಯಚೂರು ಜಿಲ್ಲೆಗೆ ಮಾದರಿ- ಪ್ರತಾಪಗೌಡ ಪಾಟೀಲ

e-ಸುದ್ದಿ ಮಸ್ಕಿ

ಇತಿಹಾಸದಲ್ಲಿ ಮಾಸಂಗಿಪುರ ಎಂದು ಕರೆಸಿಕೊಂಡು ಈಗ ಮಸ್ಕಿ ಎಂಬ ಹೆಸರಿನಿಂದ ಚಾಲ್ಲಿಯಲ್ಲಿರುವ ಈ ಊರು ರಾಯಚೂರು ಜಿಲ್ಲೆಯ ಸಾಂಸ್ಕೃತಿಕ ನಗರವಾಗಿ ಹೊರಹೊಮ್ಮಿದೆ. ಮಸ್ಕಿಯಲ್ಲಿ ವರ್ಷದುದ್ದಕ್ಕೂ‌ ನಿರಂತರವಾಗಿ ಸಾಹಿತ್ಯ, ಸಂಗೀತ, ಕಲೆ, ಧಾರ್ಮಿಕ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ನಡೆಯುವ ಮೂಲಕ ಇಲ್ಲಿನ ಜನರು ಸದಾ ಜಾಗೃತರಾಗಿರುತ್ತಾರೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದ ಗಚ್ಚಿನಮಠದ ಸಭಾ ಭವನದಲ್ಲಿ ಮಸ್ಕಿ ತಾಲೂಕ ಕಸಾಪ ಪದಾಧಿಕಾರಿಗಳು ಪದಗ್ರಹಣ ಹಾಗೂ ಕಾರ್ಯಚಟುವಟಿಕೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ‌ವಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಗಚ್ಚಿನ ಹಿರೇಮಠದ ಷ.ಬ್ರ.ಶ್ರೀ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಕನ್ನಡದ ಕೆಲಸಗಳು ನಿರಂತರವಾಗಿ ನಡೆಯಬೇಕು. ಅದಕ್ಕಾಗಿ ಕಸಾಪ ಘಟಕಕ್ಕೆ ಶ್ರೀ ಮಠ ಸದಾ ಬೆಂಗಾವಲಾಗಿ ನಿಲ್ಲುತ್ತದೆ ಎಂದರು.
ಪತ್ರಕರ್ತ ಹಾಗೂ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರೇಶ ಸೌದ್ರಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ಹಾದಿಯ ಕುರಿತು, ಅದರ ಇತಿಹಾಸ, ರಾಯಚೂರು ಜಿಲ್ಲಾ ಕಸಾಪ ಕ್ಕೆ ಪಂಪಯ್ಯ ಶೆಟ್ಟಿ, ಶರಣೇಗೌಡ ಸಿಂಧನೂರು, ಮಹಾಂತೇಶ ಮಸ್ಕಿ, ಡಾ.ಬಸವಪ್ರಭು ಪಾಟೀಲ ಅವರ ನೇತೃತ್ವದಲ್ಲಿ ಹೆಚ್ಚು ಸಾಹಿತ್ಯ ಚಟುವಟಿಕೆಗಳು ನಡೆದು ರಾಜ್ಯದಲ್ಲಿ ರಾಯಚೂರು ಜಿಲ್ಲೆಯ ಸಾಹಿತ್ಯ ಸಂಘಟನೆಯ ಕೊಡುಗೆ ಕುರಿತು ಮಾತನಾಡಿದರು.


ಪ್ರಸ್ತುತ ಕಸಾಪ ಮಸ್ಕಿ ಘಟಕದ ಅಧ್ಯಕ್ಷರಾದ ಶ್ರೀ ಆದಪ್ಪ ಹೆಂಬಾ ಅವರು ವಿಶಿಷ್ಟವಾಗಿ ಸಾಹಿತ್ಯಿಕ ಕಾರ್ಯಗಳನ್ನು ಮಾಡುತ್ತಾರೆ ಎಂಬ ಭರವಸೆಯಿದೆ ಎಂದುಆಶಯ ವ್ಯಕ್ತಪಡಿಸಿದರು.
ಕಸಾಪ ಜಿಲ್ಲಾ ಅಧ್ಯಕ್ಷರಾದ ಶ್ರೀ ರಂಗಣ್ಣ ಪಾಟೀಲ್ ಅಳ್ಳುಂಡಿ ಅವರು ಶ್ರೀ ಆದಪ್ಪ ಹೆಂಬಾ ಅವರಿಗೆ ಧ್ವಜ ಹಸ್ತಾಂತರಿಸಿ ಶುಭ ಹಾರೈಸಿದರು.ಕಸಾಪ ಮಸ್ಕಿ ಅಧ್ಯಕ್ಷರಾದ ಆದಪ್ಪ ಹೆಂಬಾ ಅವರು ಪರಿಷತ್ ಸದಸ್ಯರನ್ನು ಪರಿಚಯ ಮಾಡಿಸಿದರು.

ವರದೇಂದ್ರ ಕೆ ಮಸ್ಕಿಯವರ
“ಹರಿದ ಹೊಕ್ಕಳ ಬಳ್ಳಿ” ಕೃತಿಯನ್ನು
ಶ್ರೀ ಪ್ರತಾಪಗೌಡ ಪಾಟೀಲ್ ಬಿಡುಗಡೆ ಮಾಡಿದರು.

ದೇವರಾಜ ಜಿ ಸಿ ಘಂಟಿ ಅವರ “ನನ್ನ ಅವ್ವ” ಕವನ ಸಂಕಲನವನ್ನು
ಉಪನ್ಯಾಸಕ ಹಾಗೂ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ ಬಿಡುಗಡೆ ಮಾಡಿ ಮಾತನಾಡಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಸ್ಕಿ ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಹಾಗೂ ಮಸ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಬಸವಶ್ರೀ ಅವರನ್ನು ಸನ್ಮಾನಿಸಿದರು.
ಉಪನ್ಯಾಸಕಾರರಾಗಿ ಆಗಮಿಸಿದ ಸಿಂಧನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಸಿ.ಬಿ. ಚಿಲ್ಕರಾಗಿ ಮಾತನಾಡಿ ಸಾಹಿತ್ಯದ ಬೆಳವಣಿಗೆ.
ಮಕ್ಕಳಿಗೆ ಮಾತೃಭಾಷೆಯ ಶಿಕ್ಷಣದ ಅವಶ್ಯಕತೆ, ಕಲಿಕಾ ಸಾಮರ್ಥ್ಯ, ಭಾಷಾ ಜ್ಞಾನ ಕುರಿತು ವಿವರಿಸಿದರು.
ಸಿಂಧನೂರು ಕಸಾಪ ಅಧ್ಯಕ್ಷ ಪಂಪಯ್ಯ ಸಾಲಿಮಠ ಮಾತನಾಡಿದರು.
ಮಧ್ಯಾಹ್ನದ ಅವಧಿಯಲ್ಲಿ, “ಹರಿದ ಹೊಕ್ಕಳ ಬಳ್ಳಿ”, ಕೃತಿಯ ಅವಲೋಕನವನ್ನು ಶ್ರೀ ಶಶಿಕಾಂತ ಕಾಡ್ಲೂರ್ ಅವರು ಮಾಡಿದರೆ,
“ನನ್ನ ಅವ್ವ” ಕೃತಿಯ ಅವಲೋಕನವನ್ನು ಶ್ರೀ ಶಂಕರ್ ಎಲ್ ಸಕ್ರಿ ಅವರು ನೆರವೇರಿಸಿದರು.
ನಂತರದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಯುವಕರು ಮಹಿಳಾ ದಿನಾಚರಣೆ ಅಂಗವಾಗಿ ನೀಡಿದ ವಿಷಯ “ಮಹಿಳೆ”ಯ ಕುರಿತಾಗಿ ಕವಿತೆ ವಾಚಿಸಿದರು. ಕವಿಗೋಷ್ಠಿಯ ಅಧ್ಯಕ್ಷರಾದ ಶ್ರೀ ಗುಂಡುರಾವ್ ದೇಸಾಯಿ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ, ತಾವು ಬರೆದ ಕವಿತೆಗಳನ್ನು ಕವಿಗಳು ಪುನರಾವಲೋಕನಗೊಳಿಸಿ ಉತ್ತಮವಾದ ಕಾವ್ಯ ರಚನೆಗೆ ಅಣಿಯಾಗಬೇಕೆಂದು ಯುವ ಕವಿಗಳಿಗೆ ಕಿವಿ ಮಾತು ಹೇಳಿದರು.

ಪ್ರಾರ್ಥನೆ ಶ್ರೀಮತಿ ನಿರ್ಮಲಾ ಮತ್ತು ಸಂಗಡಿಗರಿಂದ ನಾಡಗೀತೆ ಶ್ರೀಮತಿ ರೋಹಿಣಿ ಮತ್ತು ಸಂಗಡಿಗರಿಂದ ಭುವನೇಶ್ವರಿ ಮಾತೆಗೆ‌ ಪುಷ್ಪಾರ್ಪಣೆ.ನಡೆಯಿತು

ವಿದ್ಯಾವತಿ ಎಲ್ ವನಕಿ, ಅಮರೇಗೌಡ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

Don`t copy text!