ಹಟ್ಟಿ ಚಿನ್ನದ ಗಣಿಯಲ್ಲಿ ಡಾ. ಪುನಿತ್ ರಾಜ್ ಕುಮಾರ್ ಜನ್ಮದಿನಾಚರಣೆ

ಹಟ್ಟಿ ಚಿನ್ನದ ಗಣಿಯಲ್ಲಿ ಡಾ. ಪುನಿತ್ ರಾಜ್ ಕುಮಾರ್ ಜನ್ಮದಿನಾಚರಣೆ

e-ಸುದ್ದಿ ಲಿಂಗಸುಗೂರು 

 

ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗ ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿ ಮತ್ತು ಹಟ್ಟಿ ಪಟ್ಟಣದ ನಾಗರಿಕರ ಸಂಯುಕ್ತಾಶ್ರಯದಲ್ಲಿ ಹಟ್ಟಿ ಚಿನ್ನದ ಗಣಿ ಕ್ರಿಡಾ ಸಂಸ್ಥೆಯಲ್ಲಿ ಡಾ:ಪುನೀತ್ ರಾಜಕುಮಾರ್ ರವರ 47 ನೇ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಹುಟ್ಟು ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಅನ್ನಸಂತರ್ಪಣೆ ಕಾರ್ಯಕ್ರಮ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಯರಡೋಣ ಸಿದ್ದರಾಮೇಶ್ವರ ಮಠದ ಪರಮಪೂಜ್ಯ ಶ್ರೀ ,ಶ್ರೀ, ಮುರುಗರಾಜೇಂದ್ರ ಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ,ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾದ ಮಾನಪ್ಪ ಡಿ. ವಜ್ಜಲ ,ಜೆಡಿಎಸ್ ರಾಜ್ಯ ಮುಖಂಡ ಸಿದ್ದು ವೈ ಬಂಡಿ ಜ್ಯೋತಿ ಬೆಳಗಿ ಪುನೀತ್ ರಾಜ್ ಕುಮಾರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಬೃಹತ್ ಕೇಕ್ ಕಟ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಮಾನಪ್ಪ.ಡಿ.ವಜ್ಜಲ್ ಪುನೀತ್ ರಾಜಕುಮಾರ್ ರವರು ತಮಗಾಗಿ ಬದುಕದೆ ಅನಾಥರಿಗೆ, ವೃದ್ಧರಿಗೆ, ಅಸಹಾಯಕರಿಗೆ , ಹಿಂದುಳಿದ ವರ್ಗದ ಬಡಜನತೆಯ ಆಶಾಕಿರಣವಾಗಿದ್ದರು ಪುನೀತರು ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಇಡಿ ಸಮಾಜಕ್ಕೆ ಶಕ್ತಿಯಾಗಿದ್ದರು. ನಾನೂ ಕೂಡಾ ಅವರ ಅಪ್ಪಟ ಅಭಿಮಾನಿಯಾಗಿರುವೆ ಅವರು ಹಾಕಿಕೊಟ್ಟ ಸ್ವಾಭಿಮಾನಿ ಬದುಕಿನಲ್ಲಿ ನಾವೆಲ್ಲರೂ ನಡೆಯೋಣ, ಅವರ ಆದರ್ಶ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಂಪನಿಯ ಮುಖ್ಯ ವೈದ್ಯಾಧಿಕಾರಿ ಪಟ್ಟಣದ ಅಭಿಮಾನಿ ಬಳಗದ ವತಿಯಿಂದ ಮುಂದಿನ ದಿನಗಳಲ್ಲಿ ನೇತ್ರದಾನ ಅಂಗಾಂಗ ದಾನ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು .ಕಂಪನಿ ಸಿಬ್ಬಂದಿ ವರ್ಗ ಹಾಗೂ ಪಟ್ಟಣದ ಅಭಿಮಾನಿಗಳು ಸೇರಿದಂತೆ 50 ಕ್ಕೂ ಹೆಚ್ಚು ಜನ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತ ದಾನ ಮಾಡಿದರು . ಸಾವಿರಾರು ಜನ ಅನ್ನಸಂತರ್ಪಣೆಯ ಕಾರ್ಯಕ್ರಮದಲ್ಲಿ ಭೋಜನ ಸವಿದರು. ಅಭಿಮಾನ ಬಳಗದವತಿಯಿಂದ ನಡೆದ ಸಂಗೀತ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿತು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸಿದ್ದು ವೈ ಬಂಡಿ, ಪಾಮಯ್ಯ ಮುರಾರಿ,ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ ಜೆರಬಂಡಿ, ವೀರನಗೌಡ ಪಾಟೀಲ್ ಲೆಕ್ಕಿಹಾಳ್, ಡಾ: ಶಿವಬಸಪ್ಪ ಹೆಸರೂರು, ಗಿರಿ ಮಲ್ಲನಗೌಡ ಪಾಟೀಲ್, ಗುಂಡಪ್ಪ ಗೌಡ ಗುರಿಕಾರ್,ಶಂಕರ ಗೌಡ ಬಳಗಾನೂರು,ಹನುಮಂತ ರೆಡ್ಡಿ ಸೇರಿದಂತೆ ಚಿನ್ನದ ಗಣಿ ಕಂಪನಿಯ ಅಧಿಕಾರಿಗಳು,ಹಿರಿಯ ಮುಖಂಡರು ಹಾಗೂ ಪುನೀತ್ ರಾಜಕುಮಾರ್ ಅಭಿಮಾನ ಬಳಗದವರು ಉಪಸ್ಥಿತರಿದ್ದರು.

Don`t copy text!