ಭಾವೈಕ್ಯ ಶ್ರೀ ಪ್ರಶಸ್ತಿ ಗೆ ಪಂಪಯ್ಯಸ್ವಾಮಿ ಆಯ್ಕೆ

ಭಾವೈಕ್ಯ ಶ್ರೀ ಪ್ರಶಸ್ತಿ ಗೆ ಪಂಪಯ್ಯಸ್ವಾಮಿ ಆಯ್ಕೆ

e-ಸುದ್ದಿ ಮಹಾಲಿಂಗಪುರ

ಮಸ್ಕಿ ತಾಲೂಕಿನ ಪಂಪಯ್ಯಸ್ವಾಮಿ ಅವರಿಗೆ ಪ್ರಸಕ್ತವರ್ಷದ ಭಾವೈಕ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವದು ಎಂದು ಮಹಾಲಿಂಗಪುರದ ಶಾಂತಿ ಸಂದೇಶ ಸಂಸ್ಥೆಯ ಅಧ್ಯಕ್ಷ ಹುಮಾಯೂನ್ ಸುತಾರ ತಿಳಿಸಿದ್ದಾರೆ.

ಮಹಾಲಿಂಗಪುರದ ಕೌಜಲಗಿ‌ ನಿಂಗಮ್ಮ ರಂಗ ಮಂದಿರದಲ್ಲಿ‌ ಮಾ.೨೦. ಭಾನುವಾರ ಪ್ರಶಸ್ತಿ ಪ್ರಧಾನ ನಡೆಯಲಿದೆ.
ಕಳೆದ ಎರಡು ವರ್ಷಗಳಿಂದ ಕರೊನಾ ಹಿನ್ನಲೆಯಲ್ಲಿ ಶಾಂತಿ ಸಂದೇಶ ಪ್ರಶಸ್ತಿ ಸಮಾರಂಭ ನಡೆಸಿರಲಿಲ್ಲ. ಈ‌ ವರ್ಷ ಕರೊನಾ ಕಡಿಮೆಯಾಗಿರುವದರಿಂದ ಸಮಾರಂಭ ಹಮ್ಮಿಕೊಳ್ಳಲಾಗಿದೆ.
೨೦೨೦ ನೇ ಸಾಲಿಗೆ ಮಹಾಲಿಂಗ ಪುರದ ದಿ.ಮಲ್ಲಪ್ಪಣ್ಣ ಶಿರೋಳ (ಮರೋಣತ್ತರ) ಆಯ್ಕೆ‌ಮಾಡಲಾಗಿದೆ. ೨೦೨೧ ನೇ ಸಾಲಿಗೆ ಇಬ್ರಾಹಿಂ ಸುತಾರ ಅವರಿಗೆ ಭಜನೆ ಕಲಿಸಿದ ಮತ್ತು ಅವರ ನಿರರ್ಗಳ ಮಾತಿಗೆ ಕಾರಣರಾದ ದಿ.ಗುರುಪಾದಪ್ಪ ಕಕಮರಿ ಅವರ ಪುತ್ರಿ ಭಜನಾ ಕಲಾವಿದೆ ಮಹಾಲಿಂಗಪುರದ ಮೈತ್ರಾದೇವಿ ಕದ್ದಿಮನಿ ಅವರಿಗೆ ಶಾಂತಿ ಸಂದೇಶ ಪ್ರಶಸ್ತಿ ಪ್ರಧಾನ ಮಾಡಲಾಗುವದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಂಪಯ್ಯಸ್ವಾಮಿ ಉವಾಚ

ಇಬ್ರಾಹಿಂ ಸುತಾರ ಅವರ ಒಡನಾಡಿಯಾದ ಪಂಪಯ್ಯ ಸಾಲಿಮಠ ಅವರಿಗೆ ಈವರ್ಷ ಕೊಡ ಪ್ರಶಸ್ತಿ ಕೊಡುವಾಗ ಇಬ್ರಾಹಿಂ ಸುತಾರ ಲಿಂಗೈಕ್ಯರಾಗಿರುವದು ಪಂಪಯ್ಯ ಸಾಲಿಮಠ ಅವರಿಗೆ ಸಮಾದಾನ ವಿಲ್ಲದಿದ್ದರು ಸುತಾರ ಅವರ ಸ್ಥಾಪಿಸಿದ ಭಾವೈಕ್ಯ ಶ್ರೀ ಪ್ರಶಸ್ತಿ ಸ್ವೀಕರಿಸಿ ಸುತಾರ ಅವರ ಕೆಲಸ ಮುಂದುವರಿಸಿಕೊಂಡು ಹೋಗುವ ಮೂಲಕ ಸುತಾರ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಪ್ರಯತ್ನಿಸುವದಾಗಿ ಪಂಪಯ್ಯ ಸಾಲಿಮಠ ತಿಳಿಸಿದ್ದಾರೆ.

Don`t copy text!