ಸಡಗರದಿಂದ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭ

ಸಡಗರದಿಂದ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭ

ವರದಿ -ವೀರೇಶ ಅಂಗಡಿ ಗೌಡರು

e- ಸುದ್ದಿ ಲಿಂಗಸುಗೂರು

ತಾಲೂಕಿನ ಗೌಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ನಡೆದ 7 ನೇ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೊಡಿಗೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಚಂದ್ರು ಬಡಿಗೇರ ರವರು ಚಾರ್ಮಿನಾರ್ ಗೆ ಹೇಗೆ ನಾಲ್ಕು ಕಂಬಗಳಿವೆಯೋ ಅದೇ ರೀತಿ ಶಾಲೆಯ ಉತ್ತಮ ಅಭಿವೃದ್ಧಿಗೆ ಬಾಲಕ,ಪಾಲಕ, ಶಿಕ್ಷಕ,ಚಾಲಕ ಎಂಬ ನಾಲ್ಕು ಅಂಶಗಳು ಅತ್ಯಂತ ಪ್ರಮುಖವಾದವು.

ಪಾಲಕರು ಹೋಲ, ಗದ್ದೆಗಳ ಮೇಲೆ ತೋರಿಸುವ ಕಾಳಜಿಯನ್ನು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಹೆಚ್ಚಾಗಿ ತೋಡಗಿಸಬೇಕಾಗಿದೆ . ಮಕ್ಕಳು ಕೇವಲ ಅಂಕ ಗಳಿಕೆಗಾಗಿ ಶಿಕ್ಷಣ ಪಡೆಯದೇ ಮೌಲ್ಯಗಳ ಬೆಳಗಿಸಿ ಕೊಳ್ಳುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ . ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದ್ದು ಓದಿನ ಕಡೆಗೆ ಗಮನಹರಿಸಬೇಕು. ಶಿಕ್ಷಕರು ಸಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಶ್ರಮಿಸಬೇಕಾಗಿದೆ ಎಂದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪತ್ರಕರ್ತ ಗುರುರಾಜ ನಾಯಕ ನಮ್ಮ ಶಾಲೆಯ ಶಿಕ್ಷಕರು ಉತ್ತಮ ರೀತಿಯಲ್ಲಿ ಶಿಕ್ಷಣ ನೀಡುತ್ತಿದ್ದು . ಶಾಲೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಗ್ರಾಮದ ಹಿರಿಯರ ಸಹಕಾರದೊಂದಿಗೆ ಶ್ರಮಿಸೋಣ ಎಂದು ಹೇಳಿದರು.

ಶಾಲೆಯ ಸಹ ಶಿಕ್ಷಕರಾದ ಅಮರಯ್ಯ ಸ್ವಾಮಿಯವರು ಮಾತನಾಡಿ ಶಾಲೆಗೆ ಇತ್ತಿಚಿನ ದಿನಗಳಲ್ಲಿ ದಾನಿಗಳು ಹೆಚ್ಚಾಗುತ್ತಿದ್ದು ಶಾಲೆಗೆ ಮೂಲ ಸೌಕರ್ಯ ಒದಗಬೇಕಾದರೆ ಗ್ರಾಮಸ್ಥರ ಸಹಕಾರದಿಂದ ಮಾತ್ರ ಸಾಧ್ಯ ಎಂದರು. ಈ ಸಂದರ್ಭದಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಚಂದ್ರು ಬಡಿಗೆರ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ, ಚಂದ್ರು ಕಬ್ಬಲಿಗರ, ಸಿ.ಆರ್.ಸಿ ರಜಾಕ್ , ಹಾಗೂ ಶಾಲೆಯಲ್ಲಿ ಓದಿ ಪಿಎಸ್ಐ ಹುದ್ದೆಗೆ ನೇಮಕಾತಿ ಹೊಂದಿದ ಗ್ರಾಮದ ಮಹಾಂತೇಶ ಬಡಿಗೇರ, ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿದ್ಯಾವತಿ, ನಿವೃತ್ತ ಮುಖ್ಯೋಪಾಧ್ಯಾಯ ಯಲ್ಲಪ್ಪ ಅಲಬನೂರು ದಂಪತಿಗಳಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ವಿವಿಧ ದೇಶಭಕ್ತಿ ಗೀತೆಗಳ ಗಾಯನ,ನಾಟಕ, ಮನೊರಂಜನಾ ಕಾರ್ಯಕ್ರಮಗಳು ಜರುಗಿದವು. ಶಾಲೆಯಲ್ಲಿಂದು ಹಬ್ಬದ ವಾತಾವರಣವೇ ಕಂಡು ಬಂದಿತು. ಕಾರ್ಯಕ್ರಮದ ನಿರೂಪಣೆಯನ್ನು ದೈಹಿಕ ಶಿಕ್ಷಕಿ ನಾಗಮ್ಮ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶಂಕರಗೌಡ ಪೋ.ಪಾ. ತಾ.ಪಂ.ಮಾಜಿ ಸದಸ್ಯ ರಾಜಾ ಶೆತುರಾಮ್ ನಾಯಕ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಮರಪ್ಪ ಬಂಡೇಬಾವಿ, ಗ್ರಾಮ ಪಂಚಾಯಿತಿ ಸದಸ್ಯ ರಮೇಶ ಅಗಸಿಮನಿ, ಅಮರೇಶ ಬಡಿಗೆರ,ಥ ಗ್ರಾಮಸ್ಥರಾದ ರಾಚಯ್ಯ ಸ್ವಾಮಿ ಗಣಾಚಾರಿ,ರಾಜಾ ಲಕ್ಷಣ ನಾಯಕ, ಯಮನೂರಪ್ಪ ಗಾಳಿ,ದುರುಗಣ್ಣ ನಾಯಕ, ಚಂದ್ರುಭವಾನಿ, ಮಾಳಿಂಗರಾಯ, ಸೇರಿದಂತೆ ಪಾಲಕರು ಗ್ರಾಮಸ್ಥರು, ಶಾಲಾ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.

Don`t copy text!