ಜೀವ ಜಲ
ಜೀವಜಲವಿದು ಜೀವಕುಲಕೆಲ್ಲ
ಸೃಷ್ಟಿಯಕೊಡುಗೆ ಸರಿಸಾಟಿ ಬೇರಿಲ್ಲ..
ಬೀಜವಂಕುರಿಸೆ ಭ್ರೂಣವು ಬೆಳೆಯೆ
ಜೀವ ಸಾಕಾರವಾಗುಳಿಯೆ
ಜೀವದ್ರವ್ಯದಲಿ ಬೇಕುಜಲಮೊದಲು
ಜಲಬೇಕುಸಸಿಯು ಬೆಳೆದುಮರವಾಗಲು…
ಮಣ್ಣಿನ ಕಣಕಣದಿ ಸೇರಿಮಳೆನೀರು
ತಾಯೊಡಲತುಂಬಿಹುದು ಇಂಗಿದಾನೀರು
ಕೆರೆಬಾವಿಹೊಳೆಹಳ್ಳ ತುಂಬಿ ತುಳುಕಿಹವು
ಪಶುಪಕ್ಷಿಪ್ರಾಣಿಗಳು ಸಂತಸದಿನಲಿದಿಹವು…
ಸ್ವಾರ್ಥದುರಾಸೆಗಳಬೆನ್ನೇರಿಮನುಜ
ಕಡಿದು ಮರಗಳ ನೆಲವ ಬರಡಾಗಿಸಿಟ್ಟ
ಹನಿನೀರಿಗಾಗಿ ಬಾಯ್ಬಿಡುತಲಿಂದು
ಮೋಡಗಳೆಡೆ ನೋಡಿ ಪ್ರಾರ್ಥಿಸುತಿರುವ…
ಕಳೆದ ಕಾಲವು ಮತ್ತೆ ಬರಲಹುದೇ?
ಅರಿತುನಡೆಯಬೇಕಿದೆ ಇಂದು ನಾವು
ಜೀವಜಲವಿದು ಅಮೃತದಸಮಾನ
ಉಳಿಸಿ ಬೆಳೆಸಬೇಕಿದೆ ಅಂತರ್ಜಲ ಜೋಪಾನ..!!
–ಹಮೀದಾಬೇಗಂ ದೇಸಾಯಿ. ಸಂಕೇಶ್ವರ.