ಜೀವಜಲ
ಜಗವೆಲ್ಲ ಆವರಿಸಿರುವ
ಜಲವು
ಸಕಲ ಜೀವರಾಶಿಗಳಿಗು
ಅಮೃತ ಚೇತನವು
ಸಸ್ಯ ಸಂಕುಲಕೆ
ಜೀವ ರಾಗದ ಸುಧೆಯು
ಧರೆಯಿಂದ ಆಗಸಕೆ
ಆಗಸದಿಂದ ಧರೆಗೆ
ಮೋಡ ಮಳೆಯಾಗಿ
ಸುರಿಯುವುದು ವರ್ಷಧಾರೆ
ಶಿವನ ಜಡಯಿಂದ ಇಳಿದು
ನದಿ ಹಳ್ಳ ತೊರೆಯಾಗಿ
ಧುಮ್ಮಿಕ್ಕಿ ಸಾಗರವ ಸೇರಿ
ಮತ್ತೆ ಆವಿಯಾಗಿ
ಸೇರುವುದು ಆಗಸವ
ಈ ಪರಿ ಸೃಷ್ಟಿ ವಿಸ್ಮಯ
ಜಲಚಕ್ರದ ತಿರುಗುವಿಕೆಯಿದು ನಿರಂತರ
ಕೆರೆಯಲಿ ಶೇಖರವಾಗಿ
ಅಣೆಕಟ್ಟುಗಳಲಿನಿಂತು
ನಲ್ಲಿಯಲ್ಲಿ ಧುಮುಕಿ ಬರುವ
ನೀರನ್ನು ಕಾದಿರೀಸೋಣವೆ
ನಾಳೆಗಾಗಿ ಒಂದಷ್ಟು ಎಂದು
ನಮ್ಮ ಅರಿವಿನ ಲಾಕರ್ ನಲ್ಲಿ.
-ಡಾ. ನಿರ್ಮಲ ಬಟ್ಟಲ