ಜಗತ್ತಿನಲ್ಲಿ ಪ್ರಥಮವಾಗಿ ಮಹಿಳಾ ಹಕ್ಕುಗಳ ಪರವಾಗಿ ಧ್ವನಿಯೆತ್ತಿದವರು ಕನ್ನಡ ನಾಡಿನ ಶರಣರು

ಜಗತ್ತಿನಲ್ಲಿ ಪ್ರಥಮವಾಗಿ ಮಹಿಳಾ ಹಕ್ಕುಗಳ ಪರವಾಗಿ ಧ್ವನಿಯೆತ್ತಿದವರು ಕನ್ನಡ ನಾಡಿನ ಶರಣರು

e-ಸುದ್ದಿ ಬೈಲಹೊಂಗಲ

ಸರ್ವಕಾಲಿಕ ಸತ್ಯದ ಮಾನವ ಮತ್ತು ಮಹಿಳಾ ಹಕ್ಕುಗಳನ್ನು ಪ್ರಥಮವಾಗಿ ಜಗತ್ತಿಗೆ ಪರಿಚಯಿಸಿದ ಶರಣಸಾಹಿತ್ಯ ಪ್ರಚಾರಕ್ಕೆ ಕಂಕಣಬದ್ಧರಾಗಿ ಎಂದು ಬೆಳಗಾವಿ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಹೇಳಿದರು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಪತ್ರಿಬಸವೇಶ್ವರ ಅನುಭವ ಮಂಟಪದಲ್ಲಿ ಕದಳಿ ಮಹಿಳಾ ವೇದಿಕೆಯ ತಾಲೂಕ ಘಟಕದ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಿ ಮಾತನಾಡಿದರು.

ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ ಬೆಳೆದನು ಅಸಂಖ್ಯಾತರೆಲ್ಲರ ಕರುಣದೊಳಗೆ 
ಭಾವ ಎಂಬ ಹಾಲು ಸುಜ್ಞಾನವೆಂಬ ತುಪ್ಪ ಪಾರಮಾರ್ಥ ಎಂಬ ಸಕ್ಕರೆಯಿಕ್ಕಿದರೂ ನೋಡಾ. ಇಂತಿಪ್ಪ  ತ್ರಿವಿಧಾಮೃತವನನು ದಣಿಯಲೆರೆದು ಸಲುಹಿದೆರನ್ನ 
ವಿವಾಹ ಮಾಡಿದಿರಿ,ಸಯವಪ್ಪ ಗಂಡಂಗೆ ಕೊಟ್ಟಿರಿ, ಕೊಟ್ಟ ಮನೆಗೆ ಕಳುಹಲೆಂದು 
ಅಸಂಖ್ಯಾತ ರೆಲ್ಲರೂ ನೆರೆದು ಬಂದಿರಿ 
ಅಪ್ಪ ಬಸವಣ್ಣ ಮೆಚ್ಚಲು ಒಗೆತನವ ಮಾಡುವೆ.
ಚೆನ್ನಮಲ್ಲಿಕಾರ್ಜುನನ ಕೈಹಿಡಿದು 
ಮಂಡೆಗೆ ಹೂವು ತರುವೆನಲ್ಲದೆ  ಹುಲ್ಲ ತಾರೆನು,
 ನಿಮ್ಮ ಅಡಿದಾವರೆಗಳಿಗೆ ಶರಣು ಶರಣಾರ್ಥಿಗಳು”

ಎಂಬ ವಚನ ಬೋಧಿಸಿ ಪದಗ್ರಹಣ ಮಾಡಿದರು.

ಕದಳಿಯೆಂಬುದು ಭೌತಿಕವಾಗಿ ಬಾಳೆ ಗಿಡ, ಒಮ್ಮೆ ಫಲ ಕೊಟ್ಟರೆ ಅದರ ಆಯುಷ್ಯ ಮುಗಿಯಿತು, ಅಂದರೆ ಮುಕ್ತಿ ಪಡೆಯಿತು. ಹಾಗೆ ಮಾನವ ಬಾಳೆಗಿಡದ ಹಾಗೆ ಮುಕ್ತಿಯ ಫಲವನ್ನು ಬಯಸಬೇಕು. ಅಕ್ಕಮಹಾದೇವಿ ಯೋಗಿಕ ಮಾರ್ಗಕ್ಕೆ ತನುವೇ ಕದಳಿ ಯಾಗಿತ್ತು. ಈ ಕಾಯ ಕದಳಿ ಬಗ್ಗೆ ಅರಿಯಿರೆಂದು  ಬೆಳಗಾವಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಶ್ರೀಮತಿ ಸುನಂದಾ ಎಮ್ಮಿ ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.

ಕದಳಿ ಎಂಬುದು ತನು, ಕದಳಿವೆಂಬುದು ಮನ,
ಕದಳಿ ಎಂಬುದು ವಿಷಯಂಗಳು
ಕದಳಿ ಎಂಬುದು ಭವಘೋರಾರಣ್ಯ,
ಈ ಕದಳಿ ಎಂಬುದು ಗೆದ್ದು ತವೆ ಬದುಕಿ ಬಂದು
ಕದಳಿಯ ಬನದಲ್ಲಿ ಭವಹರನ ಕಂಡೆನು.
ಭವಗೆಟ್ಟು ಬಂದ ಮಗಳೆಂದು 
ಕರುಣದಿ ತೆಗೆದು ಬಿಗಿದಪ್ಪಿದಡೆ
ಚೆನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ ಅಡಗಿದೆನು

ಕದಳಿ ಎಂಬುದು ತನು, ಕದಳಿವೆಂಬುದು ಮನ,

ಕದಳಿ ಎಂಬುದು ವಿಷಯಂಗಳು

ಕದಳಿ ಎಂಬುದು ಭವಘೋರಾರಣ್ಯ,

ಈ ಕದಳಿ ಎಂಬುದು ಗೆದ್ದು ತವೆ ಬದುಕಿ ಬಂದು

ಕದಳಿಯ ಬನದಲ್ಲಿ ಭವಹರನ ಕಂಡೆನು.

ಭವಗೆಟ್ಟು ಬಂದ ಮಗಳೆಂದು 

ಕರುಣದಿ ತೆಗೆದು ಬಿಗಿದಪ್ಪಿದಡೆ

ಚೆನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ ಅಡಗಿದೆನು.”

ಈ ವಚನ ವಿವರಿಸಿ ಸಾಮೂಹಿಕವಾಗಿ ಸಭಿಕರಿಗೆ ಬೋಧಿಸಿ ಸಭೆ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಂಗಳ ಮೆಟಗುಡ್ ಮಾತನಾಡಿ ವಿಶ್ವಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರ ಎಂದರು.

ಪ್ರಾಸ್ತಾವಿಕ ಮಾತನಾಡಿದ ಕದಳಿ ಮಹಿಳಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ಕಾರ್ಯದರ್ಶಿ ಗೌರಿ ಕರ್ಕಿ ಮಾತನಾಡಿ ಸ್ತ್ರೀ-ಸ್ವಾತಂತ್ರ್ಯದ ಹಕ್ಕು ಪ್ರತಿಪಾದಿಸಿ ಜಯಗಳಿಸಿದ ಜಗನ್ಮಾತೆ ಅಕ್ಕಮಹಾದೇವಿಯವರ ತತ್ವಗಳನ್ನು ಪಾಲಿಸಿ ಮಹಿಳೆಯರೆಲ್ಲರೂ ಸಂಘಟಿತರಾಗೋಣ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಈಶ್ವರ ಹೋಟಿ ತಾಯಿಂದಿರು ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ ಕೊಟ್ಟರೆ ಮುಂಬರುವ ದಿನಗಳಲ್ಲಿ ಮಹಿಳೆಯರ ದೌರ್ಜನ್ಯ ದುರ್ಘಟನೆ ಗಳನ್ನು ತಡೆಯಬಹುದು ಎಂದರು. ಸಂಪಗಾವಿಯ ಬಾಲ ವಿಜ್ಞಾನಿ ಸ್ವಾತಿ ಮೈಲೇರಿ ಇವರನ್ನು ಸನ್ಮಾನಿಸಲಾಯಿತು.

ಬೆಳ್ಳೇರಿ ಡಾ. ಬಸವಾನಂದ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಮಾತನಾಡಿದರು. ಅಖಿಲಭಾರತ ವೀರಶೈವ ಮಹಾಸಭೆ ತಾಲೂಕು ಘಟಕದ ಅಧ್ಯಕ್ಷ ಡಾ.  ಎ.ಎನ್.ಬಾಳಿ ಅತಿಥಿಗಳಾಗಿ ಆಗಮಿಸಿದ್ದರು.

ಬೈಲಹೊಂಗಲದ ಮೀನಾಕ್ಷಿ ಕುಸೋಮಣ್ಣವರ, ಸವದತ್ತಿಯ ಅನಸೂಯಾ ಕಿಟದಾಳ, ಗೋಕಾಕದ ಜಯಶ್ರೀ ಚುನಮರಿ, ಖಾನಾಪುರದ ಅನ್ನಪೂರ್ಣ ಗಣಾಚಾರಿ, ಹಾರೂಗೇರಿ ಅನಸೂಯಾ ಮುಳವಾಡ, ಚೆನ್ನಮ್ಮನ ಕಿತ್ತೂರಿನ ರಂಜನಾ ಬುಲಬುಲೆ, ಬೆಳಗಾವಿಯ ಶೈಲಜಾ ಹಿರೇಮಠ, ನಿಪ್ಪಾಣಿಯ ವಿದ್ಯಾವತಿ ಜನವಾಡೆ, ಹುಕ್ಕೇರಿಯ ಸಂಗೀತಾ ಕುಂಬಾರ ಹೀಗೆ ತಾಲೂಕ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು

ಸುವರ್ಣ ಬಿಜಗುಪ್ಪಿ , ಹಿರಿಯ ಸಾಹಿತಿ ಅನ್ನಪೂರ್ಣ ಕನೋಜ, ಗೀತಾ ದೇವಿ ಬೇವಿನಗಿಡದ, ಪಾರ್ವತಿ ಕುಲಕರ್ಣಿ, ಗಂಗಮ್ಮ ಮೆಳವಂಕಿ, ನಿರ್ಮಲಾ ಕೋಟೂರ, ಪಾರ್ವತಿ ವಾಲಿ, ಶಾರಕ್ಕ ಹರಕುಣಿ ಕಲಾವತಿ ಕಡಕೋಳ, ವಿಜಯಾ ಹಾಲಬಾವಿ, ಶ್ರೀಮತಿ ತಡಸಲ, ಅವರಾದಿ, ಮುಳಕೂರ.

ಶಿವಾನಂದ ಕೂಡಸೋಮಣ್ಣವರ, ಚಂದ್ರಣ್ಣ ಕೊಪ್ಪದ, ಅಶೋಕ ಮೆಳವಂಕಿ, ದುಂಡಯ್ಯ ಕುಲಕರ್ಣಿ, ಮೋಹನ್ ಪಾಟೀಲ್, ಸಂತೋಷ್ ಕೊಳವಿ, ಶಿವಲೀಲಾ ಹುಲಿಕಟ್ಟಿ ಮುರಗೋಡದ ಬಸವ ಮಹಾಮನೆ ಅಕ್ಕನ ಬಳಗ ಚಿಕ್ಕೊಪ್ಪ ಅಕ್ಕನ ಬಳಗ ಬೆಳಗಾವಿ ಪ್ರಭುದೇವ ಮಾತ್ರ ಮಂಡಳಿ ಬೈಲಹೊಂಗಲದ ಮೂರುಸಾವಿರ ಅಕ್ಕನ ಬಳಗ  ಉಪಸ್ಥಿತರಿದ್ದರು.

ಮೀನಾಕ್ಷಿ ಕುಡುಸೋಮಣ್ಣವರ ಸ್ವಾಗತಿಸಿದರು. ಗೀತಾ ಅರಳಿಕಟ್ಟಿ ಪರಿಚಯಿಸಿದರು. ಗಿರಿಜಾ ದೇವಲತ್ತಿ ವಂದಿಸಿದರು. ವಿದ್ಯಾ ನೀಲಪ್ಪ ನವರ, ರಾಜೇಶ್ವರಿ ದ್ಯಾಮನಗೌಡರ ನಿರೂಪಿಸಿದರು. ಅಜಗಣ್ಣ ಹಾಗೂ ಮುಕ್ತಾಯಕ್ಕ ಬಳಗದವರು ದಾಸೋಹ ಗೈದರು.

Don`t copy text!