ಆಕರ್ಷಣೆ

ಆಕರ್ಷಣೆ

ಈ ಪದದ ಅರ್ಥ = 1. ಸೆಳೆಯುವುದು : ಸೆಳೆತ. 2. ಮನಸ್ಸನ್ನು ಸೆಳೆಯುವಿಕೆ : ಗಮನವನ್ನು ತನ್ನತ್ತ ಎಳೆಯುವಿಕೆ. 3. ಸುಲಿಗೆ

ಪ್ರಪಂಚದ ಬಹುತೇಕ ಕೆಲಸಗಳು ನಡೆಯುವುದು ಈ ಆಕರ್ಷಣೆಯಿಂದ ಎಂದರೆ ತಪ್ಪಾಗದು. ಮೊದಲಿಗೆ ಸೃಷ್ಟಿ ಕಾರ್ಯ ಆರಂಭವಾಗುವುದೇ ಆಕರ್ಷಣೆಯಿಂದ, ಮನುಷ್ಯನ ಮನಸ್ಸು ಎತ್ತ ಕಡೆಗೆ ಆಕರ್ಷಿತವಾಗುತ್ತದೆಯೋ ಅದರ ಸುತ್ತಲೂ ಮನಸು ಸುತ್ತುತ್ತ ಇರುತ್ತದೇ.

ಸಣ್ಣ ವಯಸ್ಸಿನಿಂದ ನಮ್ಮ ಮನಸ್ಸಿಗೆ ಹಿಡಿಸುವಂತಹ ಪದಾರ್ಥವನ್ನು ಬಳಸುತ್ತೇವೆ. ನಮ್ಮ ಗಮನ ಸೆಳೆದವರ ಜೊತೆಗೆ ಸಂಬಂಧ ಬೆಳೆಸುತ್ತೇವೆ.

ಆಕರ್ಷಣೆ ಮೊದಲ ಹೆಜ್ಜೆಯ ನಂತರ ಸಂಬಂಧ ಆರಂಭವಾಗುತ್ತದೆ. ಒಂದು ವಸ್ತುವಿನ ಬಗ್ಗೆ ಆಕರ್ಷಣೆ ಉಂಟಾದ ಸಮಯದಲ್ಲಿ ಅದನ್ನು ಪಡೆಯಲು ಪ್ರಯತ್ನಿಸುತ್ತೇವೆ.

ಸಾಮಾನ್ಯವಾಗಿ ಮನುಷ್ಯರನ್ನು ಸೆಳೆಯುವುದು ಅಂದವಾದ ರೂಪ, ಸುಂದರ ಕಣ್ಣು, ಮುಕ್ತವಾದ ನಗು. ಸಣ್ಣ ಮಕ್ಕಳಿಂದ ಮುದುಕರವರೆಗೂ ಆಕರ್ಷಸುವ ವಿಷಯಗಳಾಗಿವೆ.

ನಮ್ಮ ಸ್ವಭಾವಕ್ಕೆ ತಕ್ಕ ಆಕರ್ಷಣೆ ನಮ್ಮ ಜೀವನದಲ್ಲಿ ಕಾಣುತ್ತೇವೆ. ಕೆಲವರು ಪುಸ್ತಕಗಳಿಗೆ ಆಕರ್ಷಿತರಾದರೆ, ಕೆಲವರು ಸಂಗೀತಕ್ಕೆ ಮತ್ತು ಕೆಲವರು ನೃತ್ಯ ಹೀಗೆ ಜನರ ಆಕರ್ಷಣೆಯ ವಸ್ತು ವಿಷಯ ಬದಲಾಗುತ್ತಿರುತ್ತದೆ.

ಆಕರ್ಷಣೆಗೆ ಒಳಗಾಗುವುದು ಮತ್ತು ಪಡೆಯುವುದು ಒಂದು ವಿಷಯವಾದರೆ ಆ ಆಕರ್ಷಣೆಯನ್ನು ಸದಾ ಕಾಲ ಹಸಿರಾಗಿ ಇಟ್ಟು ಕೊಳ್ಳುವುದು ಬಹಳ ಮಹತ್ವದ್ದು. ಮನುಷ್ಯನ ರೂಪದ ಆಕರ್ಷಣೆ ಇರುವವರೆಗೂ, ಗುಣದ ಆಕರ್ಷಣೆ ನಮ್ಮೊಂದಿಗೆ ಪ್ರೀತಿಯಿಂದ ಇರುವವರೆಗೂ, ಎಂದೂ ಮುಗಿಯದ ಆಕರ್ಷಣೆ ಇರುವುದು ಪ್ರಕೃತಿಯೊಳಗೆ ಮಾನವ ನಿರ್ಮಿತ ಪ್ರಪಂಚದಲ್ಲಿ ಒಂದಲ್ಲ ಒಂದು ದಿನ ಬೇಸರ ತರಿಸುತ್ತದೆ.

ಮನುಷ್ಯರಲ್ಲಿ ಮಕ್ಕಳು ಚಂದ ಎನಿಸುತ್ತಾರೆ ದೊಡ್ಡವರಾಗುತ್ತ ಅವರ ಬಗೆಗೆ ಆಕರ್ಷಣೆ ಕಮ್ಮಿ, ಯೌವನದ ಯುವಕ-ಯುವತಿಯರು ಜನರನ್ನು ಆಕರ್ಷಿಸಿರಬಹುದು ಆದರೆ ಅತೀ ಹೆಚ್ಚು ಆಕರ್ಷಣೀಯವಾದದ್ದು ಆತ್ಮ, ಉತ್ತಮ ಗುಣ. ನಾವು ಎಷ್ಟೇ ಗುಣವಂತರಾಗಿದ್ದರೂ ನಮ್ಮಲ್ಲಿ ಉಂಟಾಗುವ ಸ್ವಾರ್ಥ ನಮ್ಮ ಆಕರ್ಷಣೆಯನ್ನು ಕಡಿಮೆ ಮಾಡಬಹುದು ಆದರೆ ನಿರಂತರ ಆಕರ್ಷಣೀಯವಾದುದು ದೇವರು ನಿರ್ಮಿಸಿದ ಪ್ರಕೃತಿ, ಆ ಪ್ರಕೃತಿ ನಿರ್ಮಿಸಿದ ಪರಮಾತ್ಮ. ತಿಳಿದಷ್ಟು ಬೇಸರ ಉಂಟು ಮಾಡದೇ ಹೊಸ ಹೊಸ ರೂಪ ತೋರುವ ಭಗವಂತನ ಆಕರ್ಷಣೆ ನಮಗೆ ಆತ್ಮದ ಉನ್ನತಿ ಮತ್ತು ಉದ್ಧಾರದ ಮಾರ್ಗದರ್ಶಿಯಾಗಿದೆ.

ಬಾಹ್ಯ ರೂಪ ಹಾವ ಭಾವ ಪ್ರದರ್ಶಿಸುವ ಸಿನೆಮಾ ನಟ, ನಾಯಕರು ಅಥವಾ ಸಾಮಾನ್ಯ ಜನರ ಮೋಹಕ್ಕೆ ಒಳಗಾಗದೆ, ನಿರಂತರ ನಮ್ಮ ಜೊತೆಗಿದ್ದು ನಮ್ಮ ಒಳಿತು ಕೆಡುಕಿನಲ್ಲಿ ಕಾಪಾಡುವ ಭಗವಂತನತ್ತ ಆಕರ್ಷಿತರಾಗೋಣ

ಮಾಧುರಿ ಬೆಂಗಳೂರು

Don`t copy text!