ಕಲ್ಪನೆಯ ಅಲೆಯಲ್ಲಿ
ನೀನೊಮ್ಮೆ ಸಿಗಬೇಕಿತ್ತು ಗೆಳೆಯಾ
ನನ್ನ ಕಲ್ಪನೆಯಲ್ಲಿ ಕೈಜಾರಿ ಹೋಗುವ ಮುನ್ನ||
ಭಾವನೆಗೆ ಬಣ್ಣ ತುಂಬಿ
ಕಂಡ ಕನಸು ನನಸಾಗುವ ಮುನ್ನ
ಮನದ ಹೂಬನದಿ ಆಸೆ ಅರಳಿಸಿ
ಪರಿಮಳ ಸೂಸುವ ಮುನ್ನ ||
ಕವಿತೆ ತುಂಬ ನೀನೇ ತುಂಬಿ
ಭಾವ ಉಕ್ಕಿ ಹರಿವ ಮುನ್ನ
ಹಕ್ಕಿಯಂತೆ ರೆಕ್ಕೆ ಬಿಚ್ಚಿ
ಅಂಬರವ ಚುಂಬಿಸುವ ಮುನ್ನ||
ಒಲವು ಮಾಗಿ ಚೆಲುವು ತೂಗಿ
ಭಾವ ಬಲಿಯದ ಮುನ್ನ
ಗೆಲುವು ಸಿಕ್ಕಿತೆಂಬ ಭ್ರಮೆಯು
ಮನದಿ ಮರೆಯಾಗುವ ಮುನ್ನ||
ಮನದ ದುಗುಡ ದೂರ ಮಾಡಿ
ಕಣಕಣದಿ ಬೇರೆಯುವ ಮುನ್ನ
ಕಲ್ಪನೆಯ ಕಡಲ ಅಲೆಯಲ್ಲಿ
ತೇಲಿ ಹೋಗುವ ಮುನ್ನ||
–ಸವಿತಾ ಮಾಟೂರು ಇಲಕಲ್ಲ