ಇಲಕಲ್ಲನಲ್ಲಿ ಇಂದು ಜಾನಪದ ಸಂಭ್ರಮ ಕಾರ್ಯಕ್ರಮ
e-ಸುದ್ದಿ ಇಲಕಲ್ಲ
ಕನ್ನಡ ಜಾನಪದ ಪರಿಷತ್ತು ತಾಲೂಕು ಘಟಕ ಇಲಕಲ್ಲ ಸಂಯುಕ್ತ ಆಶ್ರಯದಲ್ಲಿ ಜಾನಪದ ಸಂಭ್ರಮ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಾ.27 ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಇಲಕಲ್ಲ ನಗರದ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ದಾಸೋಹ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಗುರುಮಹಾಂತ ಸ್ವಾಮಿಗಳು ಇಲ್ಕಲ್ , ಪರಮಪೂಜ್ಯ ಶ್ರೀ ಡಾಕ್ಟರ್ ಬಸವಲಿಂಗ ಮಹಾಸ್ವಾಮಿಗಳು ವಿಜಯಮಹಾಂತೇಶ ತೀರ್ಥ- ಶಿರೂರು, ಪರಮಪೂಜ್ಯ ಶ್ರೀ ಬಸವಾರ್ಯ ತಾತನವರು ಸುಕ್ಷೇತ್ರ ಸಜ್ಜಲಗುಡ್ಡ-ಕಂಬಳಿಹಾಳ ಇವರುಗಳು ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಡಾ. ಎಸ್ ಬಾಲಾಜಿ ಬೆಂಗಳೂರು ಅವರು ಉದ್ಘಾಟಿಸಲಿದ್ದಾರೆ. ಬಾಗಲಕೋಟೆಯ ಹಿರಿಯ ಸಾಹಿತಿಗಳಾದ ಡಾ. ಪ್ರಕಾಶ್ ಗ.ಖಾಡೆ ಅವರು ಸಹೃದಯಿ ಶರಣ ಹಸ್ತಪ್ರತಿ ಬಿಡುಗಡೆ ಮಾಡುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಜಾನಪದ ಪರಿಷತ್ ಬಾಗಲಕೋಟೆ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ.ಎಂ.ಸಾವಕಾರ ವಹಿಸುವರು. ಇಲಕಲ್ಲಿನ ರಾಜ್ಯಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತರಾದ ಶ್ರೀರಾಮನಗೌಡ ಆರ್.ಸಂದಿಮನಿ ವಿಶೇಷ ಉಪನ್ಯಾಸ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪ್ರೋ.ಕೆ.ಎಸ್ ಕೌಜಲಗಿ ವಿಭಾಗೀಯ ಸಂಚಾಲಕರು ಕಿತ್ತೂರು ಕರ್ನಾಟಕ ಕನ್ನಡ ಜಾನಪದ ಪರಿಷತ್ ಬೆಳಗಾವಿ, ಡಾ.ಶರಣಪ್ಪ ಗೋನಾಳ ವಿಭಾಗೀಯ ಸಂಚಾಲಕರು ಕಲ್ಯಾಣ ಕರ್ನಾಟಕ ರಾಯಚೂರು, ಇಲಕಲ್ಲ ನಗರದ ನಗರಸಭೆ ಅಧ್ಯಕ್ಷರಾದ ಮಂಜುನಾಥ ಮ.ಶಟ್ಟರ್, ಇಲಕಲ್ಲ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ಪ್ರವೀಣ ಹೂಲಗೇರಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದರು ಭಾಗವಹಿಸುವರು.
ಇಲಕಲ್ಲ ತಾಲೂಕು ಜಾನಪದ ಪರಿಷತ್ ಅಧ್ಯಕ್ಷರಾದ ಶ್ರೀ ಚನ್ನಬಸಪ್ಪ ಲೆಕ್ಕಿಹಾಳ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಜಾನಪದ ಕಲಾ ತಂಡಗಳು, ಕಲಾವಿದರು ಭಾಗವಹಿಸಲಿದ್ದಾರೆ.
ಇಲಕಲ್ಲ ತಾಲೂಕಾ ನೂತನ ಪದಾಧಿಕಾರಿಗಳು
ಅಧ್ಯಕ್ಷ- ಶ್ರೀ ಚನ್ನಬಸವ ಲೆಕ್ಕಿಹಾಳ
ಕಾರ್ಯದರ್ಶಿ- ಶ್ರೀಕಾಂತ ಚಿತ್ತರಗಿ
ಖಜಾಂಚಿ- ಎಂ.ಆರ್.ಪಾಟೀಲ
ಸಂಚಾಲಕರಾಗಿ- ಮಲ್ಲಯ್ಯ ಗಣಾಚಾರಿ, ಪ್ರವೀಣ ಕುಮಾರ ಮುದಗಲ್ಲ
ಜಂಟಿ ಕಾರ್ಯದರ್ಶಿ – ಜಿ.ಜಿ.ರೇಷ್ಮಿ
ಸಂಘಟನಾ ಕಾರ್ಯದರ್ಶಿ- ಮಾರ್ತಂಡರಾವ್ ಜೋಷಿ, ಮಹಾಂತೇಶ ಹೋಕ್ರಾಣಿ,
ಮಹಿಳಾ ಪ್ರತಿನಿಧಿಗಳಾಗಿ- ಶ್ರೀಮತಿ ಸವಿತಾ ಮಾಟೂರು, ಶ್ರೀಮತಿ ಸಾವಿತ್ರಿ ಬೆಲ್ಲದ,
ಪತ್ರಿಕಾ ಪ್ರತಿನಿಧಿಗಳಾಗಿ- ಮಹಾಂತೇಶ ಗೊರಜನಾಳ, ಗುರು ಗಾಣಿಗೇರ
ಸದಸ್ಯರಾಗಿ- ಶಶಿಕಾಂತ ಬಂಡರಗಲ್ಲ, ಬಸವರಾಜ ಚಳಗೇರಿ, ರಾಮಕೃಷ್ಣ ಹಂಚಾಟಿ, ಶರಣಬಸವ ನೀರಲಕೇರಿ, ಮಾನಪ್ಪ ಬಡಿಗೇರ, ದತ್ತಪ್ಪ ಚಿಲ್ಲಾಳ, ಈರಣ್ಣ ಕುಂದರಗಿಮಠ, ಎಚ್.ಬಿ.ಕಂಬಳಿ, ಬಸವರಾಜ ಬಾದವಾಡಗಿ, ಶ್ರೀ ಕಾಂತ ಮುರಾ, ಅಯ್ಯಪ್ಪ ಹುನುಗುಂದ, ಮಹೇಶ ವಾಲಿಕಾರ, ಚಿದಾನಂದ ಭಜಂತ್ರಿ, ಸಂಗಮೇಶ ಕಂಠಿ ಆಯ್ಕೆಯಾಗಿದ್ದಾರೆ.