ಹುನುಕುಂಟಿ ಗ್ರಾಮದಲ್ಲಿ ಹಸಿರು ಸೇನೆ ರೈತಸಂಘದ ಗ್ರಾಮ ಘಟಕ ಸ್ಥಾಪನೆ..

ಹುನುಕುಂಟಿ ಗ್ರಾಮದಲ್ಲಿ ಹಸಿರು ಸೇನೆ ರೈತಸಂಘದ ಗ್ರಾಮ ಘಟಕ ಸ್ಥಾಪನೆ..

 

e-ಸುದ್ದಿ  ಲಿಂಗಸುಗೂರು

ತಾಲ್ಲೂಕಿನ ಮಾವಿನಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುನುಕುಂಟಿ ಗ್ರಾಮದಲ್ಲಿ  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಬಡಗಲಪುರ ನಾಗೇಂದ್ರ ಬಣ) ಗ್ರಾಮ ಘಟಕವನ್ನು ರಾಜ್ಯ ಉಪಾಧ್ಯಕ್ಷರಾದ ಅಮರಣ್ಣ ಗುಡಿಹಾಳ ನೆತೃತ್ವದಲ್ಲಿ ಸ್ಥಾಪಿಸಲಾಯಿತು.

ಕಾರ್ಯಕ್ರಮವನ್ನು ಮಹಾತ್ಮ ಗಾಂಧಿಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು. ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸ್ಥಾಪಿಸಿದ ಗ್ರಾಮ ಘಟಕ ನಾಮ ಫಲಕವನ್ನು ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲರು ಅನಾವರಣ ಗೊಳಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಮರಣ್ಣ ಗುಡಿಹಾಳ ಅವರು ಶೊಕಿಗಾಗಿ ಹಸಿರು ಶಾಲನ್ನು ಹಾಕಿಕೊಳ್ಳಬೇಡಿ ರೈತರಿಗೆ ಸಮಸ್ಯೆಗಳು ಬಂದಾಗ ಒಗ್ಗಟ್ಟಿನಿಂದ ಹೋರಾಟ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಸಂಘಟನೆ ರೈತ ವರ್ಗದ ಪರವಾಗಿ ಕೇಲಸ ಮಾಡಬೇಕು. ರೈತ ಹೋರಾಟದ ಸಂದರ್ಭದಲ್ಲಿ ರೈತ ಸಂಘದ ಸದಸ್ಯರು ಯಾವುದೇ ರೀತಿಯ ದುರ್ವರ್ತನೆ ತೋರದೆ ಅಧಿಕಾರಿಗಳೊಂದಿಗೆ ಸೌಜನ್ಯ ರಿತಿಯಿಂದ ವರ್ತಿಸಬೇಕು ಎಂದು ಕಿವಿಮಾತು ಹೇಳಿದರು.

ನೂತನವಾಗಿ ಸ್ಥಾಪಿತವಾದ ರೈತ ಸಂಘಕ್ಕೆ ಪ್ರತಿಜ್ಞಾ ವಿಧಿ ಬೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯತ್ವವನ್ನು ಹೊಂದಿದ್ದು ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರದ ವ್ಯವಸ್ಥೆಯನ್ನು ಸಹಿಸುವದಿಲ್ಲಾ ಹಾಗೂ ರೈತರಿಗೆ ಮತ್ತು ಕಾರ್ಮಿಕರಿಗೆ ಅನ್ಯಾಯವಾದಾಗ ಪ್ರಮಾಣ ಪೂರ್ವಕವಾಗಿ ಪ್ರತಿಭಟಿಸುತ್ತೆನೆ.

ಯಾವುದೇ ಸಂದರ್ಭದಲ್ಲಿಯೂ ಕರ್ನಾಟಕ ರಾಜ್ಯ ರೈತ ಸಂಘವನ್ನು ಗೌರವದಿಂದ ಧರ್ಮದಿಂದ ಕಾಣುತ್ತೆನೆ ಎಂಬ ಮಾತನ್ನು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಪ್ರಭಾಕರ್ ಪಾಟೀಲ್ ಇಂಗಳದ, ಮಲ್ಲಪ್ಪಗೌಡ ಗಬ್ಬೂರು, ಮಲ್ಲಣ್ಣ ಗೌಡೂರು ಸೇರಿದಂತೆ ನೂತನ ಘಟಕದ ಪದಾಧಿಕಾರಿಗಳು ಗ್ರಾಮದ ಹೀರಿಯರು ಉಪಸ್ಥಿತರಿದ್ದರು.

Don`t copy text!