ಮಸ್ಕಿ ಪುರಸಭೆ ಅಧ್ಯಕ್ಷರಾಗಿ ವಿಜಯಲಕ್ಷ್ಮೀ ಪಾಟೀಲ್, ಉಪಾಧ್ಯಕ್ಷರಾಗಿ ಕವಿತಾ ಮಾಟೂರು ಅಧಿಕಾರ ಸ್ವೀಕಾರ

 

e-ಸುದ್ದಿ ಮಸ್ಕಿ

ಪಟ್ಟಣದ ಸ್ವಚ್ಛತೆ ಹಾಗೂ ಕುಡಿಯುವ ನೀರು ಪೂರೈಕೆ ಸೇರಿದಂತೆ ಜನರ ನೀರಿಕ್ಷೆಗೆ ಅನುಗುಣವಾಗಿ ಅಭಿವೃದ್ಧಿ ಕೆಲಸಗಳಿಗಾಗಿ ಶ್ರಮಿಸುವೆ ಎಂದು ಪುರಸಭೆ ಅಧ್ಯಕ್ಷೆ ವೀಜಯಲಕ್ಷ್ಮೀ ಬಸನಗೌಡ ಪಾಟೀಲ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಪುರಸಭೆ ಕಚೇರಿಯಲ್ಲಿ ಎರಡನೇ ಅವಧಿಗೆ ಪುರಸಭೆ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ಸ್ವಿಕರಿಸಿದ ವಿಜಯಲಕ್ಷ್ಮೀ ಬಸನಗೌಡ ಪಾಟಿಲ್ ತಿಳಿಸಿದರು.
ಪಟ್ಟಣ ಅಭಿವೃದ್ಧಿಯಾಗಲು ಚುನಾಯಿತ ಜನಪ್ರತಿನಿಧಿಗಳ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಜನರಿಗೆ ಏನೆ ಸಮಸ್ಯೆಗಳಿರಲಿ ಅವುಗಳನ್ನು ಪರಿಹರಿಸಲು ನಮ್ಮ ಪುರಸಭೆ ಆಡಳಿತ ಮಂಡಳಿ ಸದಾ ಸಿದ್ದವಾಗಿರುತ್ತದೆ. ನಮಗೆ ಕಡಿಮೆ ಅವಧಿಯ ಅಧಿಕಾರ ದೊರೆತಿದ್ದು, ಇದನ್ನು ಬಳಸಿಕೊಂಡು ಆದಷ್ಟು ಉತ್ತಮ ಸೇವೆ ನೀಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.
ಪುರಸಭೆ ಹೊಸ ಕಟ್ಟಡ ಕಾಮಗಾರಿಗೆ ಅನುಧಾನದ ತೊಂದರೆ ಇಲ್ಲ. ಆದಷ್ಟು ಬೇಗ ಕಟ್ಟಡ ಕಾಮಗಾರಿಯನ್ನು ಮುಗಿಸಲು ಸೂಚಿಸುವೆ. ಇದರಿಂದ ಸಾರ್ವಜನಿಕರಿಗೆ ಅನೂಕೂಲವಾಗಲಿದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಕವಿತಾ ಅಮರೇಶ ಮಾಟೂರು ಪುರಸಭೆ ಮುಖ್ಯಾಧಿಕಾರಿ ರಡ್ಡಿರಾಯಗೌಡ ಇದ್ದರು.
ಸನ್ಮಾನ: ನೂತನವಾಗಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಲಕ್ಷ್ಮೀ ಬಸನಗೌಡ ಪಾಟಿಲ್ ಹಾಗೂ ಉಪಾಧ್ಯಕ್ಷರಾಗಿ ಕವಿತಾ ಅಮರೇಶ ಮಾಟೂರು ಅವರನ್ನು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಸನ್ಮಾನಿಸಿ ಗೌರವಿಸಿದರು. ಮುಖಂಡರಾದ ಮಹಾದೇವಪ್ಪಗೌಡ ಪೋಲೀಸ್ ಪಾಟೀಲ್, ಬಸನಗೌಡ ಪೋಲಿಸ್ ಪಾಟೀಲ್, ಪುರಸಭೆ ಸದಸ್ಯರಾದ ಸುರೇಶ ಹರಸೂರು, ರೇಣುಕಾ ಉಪ್ಪಾರ, ಎಪಿಎಂಸಿ ನಿರ್ದೇಶಕ ಬಸ್ಸಪ್ಪ ಬ್ಯಾಳಿ ಇದ್ದರು.

Don`t copy text!