e-ಸುದ್ದಿ ಮಸ್ಕಿ
ಭತ್ತ ಕಟಾವು ಮಾಡುವ ಯಂತ್ರಕ್ಕೆ ಬಾಡಿಗೆ ಧರವನ್ನು ನಿಗದಿ ಮಾಡಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಮಸ್ಕಿ ತಾಲೂಕು ಬಿಜೆಪಿ ರೈತ ಮೊರ್ಚಾವತಿಯಿಂದ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.
ರೈತ ಮೋರ್ಚಾ ಮಸ್ಕಿ ತಾಲೂಕು ಅಧ್ಯಕ್ಷ ಜಿ. ವೇಂಕಟೇಶ್ವರರಾವ್ ಮಾತನಾಡಿ ಜಿಲ್ಲೆಯಲ್ಲಿ ಈಗಾಗಲೇ ರೈತರು ಇತ್ತಿಚಿಗೆ ಸುರಿದ ಮಹಾ ಮಳೆಗೆ ಬೆಳೆಗಳು ಹಾಳಾಗಿ ಹಾಗೂ ಕರೊನಾ ವೈರಸ್ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಕೆಲ ಮದ್ಯವರ್ತಿಗಳಿಂದ ಭತ್ತ ಕಟಾವೂ ಮಾಡಲು ಯಂತ್ರಗಳ ಅಭಾವ ಸೃಷ್ಟಿಸಿ ಹೆಚ್ಚಿನ ಧರವನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ರೈತರು ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದರು.
ಈಗಾಗಲೆ ದಾವಣಗೇರಿ ಜಿಲ್ಲಾಧಿಕಾರಿಗಳು ಭತ್ತ ಕಟಾವೂ ಯಂತ್ರಕ್ಕೆ ಪ್ರತಿ ಗಂಟೆಗೆ 1800 ರೂಪಾಯಿಗಳು ನಿಗದಿಪಡಿಸಿ ಆದೇಶ ಮಾಡಿದ್ದಾರೆ. ಅದರಂತೆ ನಮ್ಮ ಜಿಲ್ಲೆಯ ರೈತರಿಗೆ ಅನೂಕೂಲವಾಗುವಂತೆ ಜಿಲ್ಲಾಧಿಕಾರಿಗಳು ಧರವನ್ನು ನಿಗದಿ ಪಡಿಸಿ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಹರಳಳ್ಳಿ, ಪ್ರಧಾನ ಕಾರ್ಯದರ್ಶಿ ಶರಣಯ್ಯ ಸೊಪ್ಪಿಮಠ, ಪುರಸಭೆ ಸದಸ್ಯ ರವಿಗೌಡ ಪಾಟೀಲ್, ಎಸ್ಸಿ ಮೋರ್ಚಾ ಆಧ್ಯಕ್ಷ ಮೌನೇಶ ಮುರಾರಿ, ಚೇತನ ಪಾಟೀಲ್, ಸಂಗಮೇಶ ಹತ್ತಿಗುಡ್ಡ, ಶರಣಯ್ಯ ಗುಡದೂರು, ನಾಗರಾಜ ಯಂಬಲದ, ಬಸವರಾಜ ಕಡಬೂರು ಇದ್ದರು.