ಪೊಲೀಸ್ ಸಿಬ್ಬಂದಿ ಪ್ರಾಮಾಣಿಕತೆ : ಎಸ್ಪಿ ನಿಖೀಲ್ ಪ್ರಶಂಸೆ

ಪೊಲೀಸ್ ಸಿಬ್ಬಂದಿ ಪ್ರಾಮಾಣಿಕತೆ : ಎಸ್ಪಿ ನಿಖೀಲ್ ಪ್ರಶಂಸೆ


e-ಸುದ್ದಿ ಮಸ್ಕಿ

ಮಸ್ಕಿ : ಇತ್ತಿಚಿಗೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯ ಬಳಿಯಲ್ಲಿ ಇದ್ದ ೨೦ ತೋಲಿ ಬಂಗಾರ ಸುರಕ್ಷಿತವಾಗಿ ತಲುಪಿಸಿ ಹಾಗೂ ಗಾಯಳುಗಳನ್ನು ಆಸ್ಪತ್ರೆ ಸೇರಿಸಿ ಅವರ ಜೀವ ಉಳಿಸಲು ಶ್ರಮಿಸಿದ್ದ ಮಸ್ಕಿ ಠಾಣೆಯ ಎಎಸ್‌ಐ ಮಲ್ಲಿಕಾರ್ಜುನ ಹಾಗೂ ಪೊಲೀಸ್ ಪೆದೆ ಮಲ್ಲಿಕಾರ್ಜುನ ಎಂಬುವರಿಗೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖೀಲ್ ಪ್ರಶಂಸೆ ಪತ್ರ ಹಾಗೂ ನಗದು ಬಹುಮಾನ ನೀಡಿದ್ದಾರೆ.
ಮಸ್ಕಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಪಿಎಸ್‌ಐ ಸಿದ್ದರಾಮ ಬಿದರಾಣಿ ಪೊಲೀಸ್ ವರಿಷ್ಠಾಧಿಕಾರಿ ನೀಡಿದ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ಪ್ರಾಮಾಣಿಕತೆ ಮೆರೆದಿದ್ದ ಪೊಲೀಸ್ ಸಿಬ್ಬಂದಿಗೆ ವಿತರಿಸಿದರು. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಲಿಂಗಸುಗೂರು ರಸ್ತೆಯಲ್ಲಿ ನಡೆದ ಕಾರ್ ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ವ್ಯಕ್ತಿಯ ಕಾರ್‌ಲ್ಲಿ ೨೦ ತೋಲಿ ಚಿನ್ನ ಬಿದ್ದಿತ್ತು. ಕೂಡಲೇ ಎಎಸ್‌ಐ ಹಾಗೂ ಪೊಲೀಸ್ ಪೆದೆ ಅದನ್ನು ಠಾಣೆಗೆ ತಂದು ನಂತರ ಗಾಯಗೊಂಡವರನ್ನು ಆಸ್ಪತ್ರೆಗೆ ಧಾಖಲಿಸಿ ಚಿಕಿತ್ಸೆ ಕೊಡಿಸಿ ವ್ಯಕ್ತಿಯ ಕುಟುಂಬಸ್ಥರಿಗೆ ಇದನ್ನು ತಲುಪಿಸಲಾಗಿತ್ತು. ಪೊಲೀಸ್ ಸಿಬ್ಬಂದಿಯ ಪ್ರಾಮಾಣಿಕತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂಧರ್ಭದಲ್ಲಿ ಇನ್ನಿತರ ಸಿಬ್ಬಂದಿಗಳು ಇದ್ದರು.

Don`t copy text!