ಏ.23 ವಿಶ್ವ ಪುಸ್ತಕ ದಿನ

 

e-ಸುದ್ದಿ ಓದುಗರಿಗೆಲ್ಲ ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು

ಪುಸ್ತಕಗಳು ನಮ್ಮ ಬೆಸ್ಟ್‌ ಫ್ರೆಂಡ್ಸ್‌. ಅಷ್ಟೇ ಅಲ್ಲ ಒಳ್ಳೆಯ ಫಿಲಾಸಫರ್‌, ಮಾರ್ಗದರ್ಶಕ, ಒಳ್ಳೆಯ ಉದ್ದೇಶಗಳಿಗೆ ಗೈಡ್, ಉತ್ತಮ ಒಡನಾಡಿ ಸಹ. ಪ್ರಸ್ತುತ ಇಡೀ ಪ್ರಪಂಚವೇ ಕೋವಿಡ್-19 ವಿರುದ್ಧ ಹೋರಾಡುವ ಈ ಸಂದರ್ಭದಲ್ಲಿ ಅದೆಷ್ಟೋ ಜನರಿಗೆ ಅವರ ಏಕಾಂಗಿತನ ಕಾಡದಂತೆ ಕಾಪಾಡುತ್ತಿರುವ ಒಡನಾಡಿ ಪುಸ್ತಕ.

ಪುಸ್ತಕಗಳು ನಮ್ಮ ಬೆಸ್ಟ್‌ ಫ್ರೆಂಡ್ಸ್‌. ಅಷ್ಟೇ ಅಲ್ಲ ಒಳ್ಳೆಯ ಫಿಲಾಸಫರ್‌, ಮಾರ್ಗದರ್ಶಕ, ಒಳ್ಳೆಯ ಉದ್ದೇಶಗಳಿಗೆ ಗೈಡ್, ಉತ್ತಮ ಒಡನಾಡಿ ಸಹ. ಪ್ರಸ್ತುತ ಇಡೀ ಪ್ರಪಂಚವೇ ಕೋವಿಡ್-19 ವಿರುದ್ಧ ಹೋರಾಡುವ ಈ ಸಂದರ್ಭದಲ್ಲಿ ಅದೆಷ್ಟೋ ಜನರಿಗೆ ಅವರ ಏಕಾಂಗಿತನ ಕಾಡದಂತೆ ಕಾಪಾಡುತ್ತಿರುವ ಒಡನಾಡಿ ಪುಸ್ತಕ.

ಪುಸ್ತಕಗಳು ಪ್ರಮುಖ ಮಾಹಿತಿ ಮೂಲಗಳಾಗಿದ್ದು, ಜೊತೆಗೆ ಮನರಂಜನೆ ನೀಡುವ, ಮನಸ್ಸಿಗೆ ಶಾಂತಿ ನೀಡುವ ಸೋರ್ಸ್‌ ಸಹ.

ಕೊರೊನಾ ವೈರಸ್‌ ಹಿನ್ನೆಲೆಯ ಲಾಕ್‌ಡೌನ್‌ನಿಂದ ಮನೆಯಲ್ಲೇ ಕುಳಿತ ಪೋಷಕರು ತಾವು ಉತ್ತಮ ಪುಸ್ತಕಗಳನ್ನು ಓದುವುದರ ಜೊತೆಗೆ, ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಬೇಕು. ಪುಸ್ತಕದೊಂದಿಗಿನ ಬಾಂಧವ್ಯ ಮತ್ತು ಓದುವ ಹವ್ಯಾಸವನ್ನು ಪ್ರಮೋಟ್ ಮಾಡಲು ವಿಶ್ವ ಪುಸ್ತಕ ದಿನವನ್ನು ಆಚರಣೆ ಮಾಡಲಾಗುತ್ತದೆ. ಪ್ರಪಂಚದ ಇತಿಹಾಸ ಮತ್ತು ಭವಿಷ್ಯಗಳ ಸೇತುವೆಯಾಗಿ ಪುಸ್ತಕಗಳು ಪಾತ್ರವಹಿಸುತ್ತವೆ.
ಪ್ರಪಂಚದ ಪ್ರಖ್ಯಾತ ಬರಹಗಾರ ವಿಲಿಯಂ ಷೇಕ್ಸ್‌ಪಿಯರ್ ಅವರು ಹುಟ್ಟಿದ ದಿನ ಮತ್ತು ಮರಣ ಹೊಂದಿದ ದಿವವಾಗಿಯೂ ವಿಶ್ವ ಪುಸ್ತಕ ದಿನದಂದು ಸ್ಮರಣೆ ಮಾಡುತ್ತೇವೆ. ಮೈಕೆಲ್ ಡಿ ಸರ್ವಾಂಟಿಸ್ ಮತ್ತು ಇಂಕಾ ಗಾರ್ಸಿಲಾಸೊ ದಿ ಲ ವೆಗಾ ರವರು ಇದೇ ದಿನ ಮರಣ ಹೊಂದಿದ್ದು, ಅವರನ್ನು ಸ್ಮರಿಸುತ್ತೇವೆ.

ಇಂದು (ಏಪ್ರಿಲ್ 23) ವಿಶ್ವ ಪುಸ್ತಕ ದಿನ. ಇಂದೇ ಕೃತಿ ಸ್ವಾಮ್ಯ ದಿನ ಅಥವಾ ಅಂತಾರಾಷ್ಟ್ರೀಯ ಪುಸ್ತಕ ದಿನ ಎಂದು ಹೆಸರಿಸಿ ಪ್ರತಿ ವರ್ಷ ಏಪ್ರಿಲ್ 23 ರಂದು ಆಚರಣೆ ಮಾಡಲಾಗುತ್ತದೆ.
ಪುಸ್ತಕ ದಿನ ಆಚರಣೆ ಏಕೆ?

ವೆಲೆನ್ಸಿಯಾದ ಬರಹಗಾರ ವಿನ್ಸೆಂಟ್ ಕ್ಲವೆಲ್ ಆಂಡ್ರ್ಯೂ ಅವರ ಜನ್ಮದಿನ ಅಕ್ಟೋಬರ್ 7 ರಂದು ಪುಸ್ತಕ ದಿನವನ್ನು ಆಚರಿಸಲಾಯಿತು. ಬಳಿಕ ಅವರ ಮರಣ ಹೊಂದಿದ ದಿನವಾದ ಏಪ್ರಿಲ್ 23 ಅನ್ನು ವಿಶ್ವ ಪುಸ್ತಕ ದಿನವನ್ನಾಗಿ ಆರಂಭದಲ್ಲಿ ಆಯ್ಕೆ ಮಾಡಲಾಯಿತು. ಆದರೆ ನಂತರ ಅಧಿಕೃತವಾಗಿ 1995 ರಲ್ಲಿ ಯುನೆಸ್ಕೊ ಸಹ ಏಪ್ರಿಲ್ 23 ಅನ್ನು ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನವನ್ನಾಗಿ ಆಚರಣೆ ಮಾಡಲು 1995 ರಲ್ಲಿ ಪ್ಯಾರಿಸ್ ಜೆನೆರಲ್ ಕಾನ್ಫರೆನ್ಸ್‌ನಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ವಿಶ್ವ ಪುಸ್ತಕ ದಿನ ಉದ್ದೇಶ

ಜನರಲ್ಲಿ ಓದುವ, ಪುಸ್ತಕ ಪ್ರಕಟಿಸುವ ಅಭಿರುಚಿ ಹೆಚ್ಚಿಸಲು ಮತ್ತು ಕೃತಿಸ್ವಾಮ್ಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವಪುಸ್ತಕ ದಿನವನ್ನು ಆಚರಿಸಲಾಗುತ್ತದೆ.

ಪ್ರತಿ ವರ್ಷದ ಎಪ್ರೀಲ್ ೨೩ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ (ಇದನ್ನು ಅಂತರಾಷ್ಟ್ರೀಯ ಪುಸ್ತಕ ದಿನ ಎಂದೂ ಕರೆಯುತ್ತಾರೆ). ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ (ಯುನೆಸ್ಕೋ) 1995ರಲ್ಲಿ ಮೊದಲ ಬಾರಿಗೆ ಓದುವಿಕೆ, ಪ್ರಕಾಶನ ಮತ್ತು ಕೃತಿಸ್ವಾಮ್ಯಗಳ ಬಗ್ಗೆ ಅರಿವು ಮತ್ತು ಪ್ರಚಾರ ನೀಡಲು ಈ ಕಾರ್ಯಕ್ರಮ ಹಮ್ಮಿಕೊಂಡಿತು. ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಯುನೇಸ್ಕೊ ಯುವಜನತೆಯಲ್ಲಿ ಪುಸ್ತಕ ಪ್ರೇಮ, ಓದಿನ ಖುಷಿ ಅಥವಾ ಗಮ್ಮತ್ತು ಹೆಚ್ಚಿಸುವ ಮತ್ತು ಉತ್ತಮ ಲೇಖಕನ್ನು ಗೌರವಿಸುವ ಹಂಬಲ ಹೊಂದಿದೆ. ನೂರಕ್ಕೂ ಹೆಚ್ಚು ರಾಷ್ಟ್ರಗಳು ಮತ್ತು ವಿಶ್ವಾದ್ಯಂತ ಅನೇಕಾನೇಕ ಪುಸ್ತಕ ಪ್ರಕಾಶಕರು, ಪುಸ್ತಕ ವ್ಯಾಪಾರಿಗಳು, ಗ್ರಂಥಾಲಯಗಳು, ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳು, ಸಾಂಸ್ಕೃತಿಕ ಸಂಘಟನೆಗಳು ಮತ್ತು ಸಾಹಿತ್ಯ ವೇದಿಕೆಗಳು ಈ ದಿನಾಚಾರಣೆಯಲ್ಲಿ ಭಾಗವಹಿಸಿ ಪುಸ್ತಕ ಮತ್ತು ಓದುವಿಕೆಯ ಮಹತ್ವ ಸಾರಲಿವೆ.

Don`t copy text!