ರವಿರಾಜ ಶಿಕ್ಷಕ ರಾಧಾಕೃಷ್ಣ ಶಿಕ್ಷಣ ರತ್ನ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ.

ರವಿರಾಜ ಶಿಕ್ಷಕ ರಾಧಾಕೃಷ್ಣ ಶಿಕ್ಷಣ ರತ್ನ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ.

e-ಸುದ್ದಿ ಮಸ್ಕಿ

ಹೈಕೋರ್ಟ್ ನ್ಯಾಯಾವಾದಿ ಜಿ ಎಸ್ ದೇಸಾಯಿ,
ನೀತಿಆಯೋಗ .ಭಾರತ ಸರ್ಕಾರದ ನಿವೃತ್ತ ಅಧಿಕಾರಿಗಳಾದ ಡಾ.ಶಿವಪ್ಪಾ ಅವರಿದ್ದ ತಂಡವು ಶಿಕ್ಷಕ ರವಿರಾಜ ಅವರನ್ನು ರಾಧಾಕೃಷ್ಣ ಶಿಕ್ಷಣ ರತ್ನ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದಾರೆ.

ಯಾವುದೇ ಶಿಫಾರಸು, ಅರ್ಜಿಗಳಿಲ್ಲದೆ ಸ್ವತಹ ಗುರುತಿಸಿ
ಶಾಲೆಯಲ್ಲಿ ನಿರಂತರವಾಗಿ ನಡೆಸುತ್ತಿರುವ ಮಕ್ಕಳ ಮಂದಾರ, ಪತ್ರಿಕೆ ಜಾನಪದ ಪಠ್ಯ ಅಂತರ್ಗತ ಕಲಿಕೆ, ಕಲಾಂತರ್ಗತ ಕಲಿಕಾ ಮಾದರಿಗಳನ್ನ , ನನ್ನ ಸಂಶೋಧನಾ ಕೃತಿ, ಸಾಹಿತ್ಯ ಕ್ಷೇತ್ರದ ಕೆಲಸಗಳ ಫಲಶೃತಿಯನ್ನು ಗಮನಿಸಿ ಆಯ್ಕೆ ಮಾಡಿದ್ದಾರೆ

ರವಿರಾಜ ಹೀಗೆ ಹೇಳುತ್ತಾರೆ

ಡಾ.ರಾಧಾಕೃಷ್ಣ ಶಿಕ್ಷಣ ರತ್ನ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದು ಖುಷಿ ಜೊತೆಗೆ ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೋತ್ಸಾಹಿಸಿದೆ. ಈ ಪುರಸ್ಕಾರ ನಮ್ಮ ರಾಯಚೂರಿನ ಮಲ್ಕಾಪುರ ಶಾಲೆಯ ಕಾರ್ಯಗಳ ಹಾರೈಸಿದ, ಜೊತೆಯಾದ ಸರ್ವರಿಗೂ ಸಲ್ಲುತ್ತದೆ.

ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸೋಸಿಯಲ್ ಆಂಡ್ ಎಕನಾಮಿಕ್ ರಿಫಾರ್ಮ್ಸ ಸಂಸ್ಥೇಯು ದೇಶದ ವಿವಿಧ ರಾಜ್ಯಗಳಿಂದ ಶಿಕ್ಷಣ, ಸಂಶೋಧನಾ ಕ್ಷೇತ್ರದಲ್ಲಿ ನಾವಿನ್ಯತೆಯನ್ನು ಪ್ರೋತ್ಸಾಹಿಸುವ ಕಾರ್ಯ ನಿರ್ವಹಿಸುತ್ತಿದೆ. ಜೊತೆಗೆ ರಾಜ್ಯ, ರಾಷ್ಟ್ರ ದ ಹಲವು ಭಾಗದಲ್ಲಿ ಭಾರತ ಸರ್ಕಾರದ ವಿವಿಧ ಯೋಜನೆಗಳ ಜೊತೆಗೂಡಿ ಮಹಿಳೆಯರಿಗೆ ,ಯುವಕರಿಗೆ ಕರಕುಶಲ ಕೌಶಲ ತರಬೇತಿ ನೀಡುತ್ತದೆ.
ಜೊತೆಗೆ ಶಿಕ್ಷಣ, ಸಂಶೋಧನಾ ಕ್ಷೇತ್ರದಲ್ಲಿ ಪ್ರೋತ್ಸಾಹಿಸುವ ಕಾರ್ಯವನ್ನು ಸಹ ಮಾಡುತ್ತದೆ.

Don`t copy text!