ನನ್ನ ಕೈ ಹಿಡಿದು ಎತ್ತಿದ, ಯಾರಿವನು?
ಯಾರಿವನು ಎಂದು ನನ್ನ ಹೃದಯಕ್ಕೆ ಕೇಳಿದೆ,
ನನ್ನ ಹೃದಯ ಹೇಳಿತು ಇವನು ನನ್ನವನು.…..
ನನಗೆ ಗೊತ್ತಾಗದ ಹಾಗೆ ನನ್ನ ಹೃದಯದ ಸಂಬಂಧ ಬೆಳಸಿದೆ.
ಇದ್ದೊಂದ ನನ್ನ ಪುಟ್ಟ ಹೃದಯದಲ್ಲಿ ಠಿಕಾಣಿ ಹೂಡಿದೆ.
ಹೃದಯಕ್ಕೆ ಕೇಳಿದೆ ಯಾರಿವನು? ಹೃದಯ ಹೇಳಿತು ಇವನು ನನ್ನವನು……
ಚಿಕ್ಕ ಚಿಕ್ಕ ನಿನ್ನ ಕಣ್ಣುಗಳಿಂದ ನನ್ನ ಹೃದಯಕ್ಕೆ ದೊಡ್ಡ ಗಾಯ ಮಾಡಿದೆ.
ಕೇಳಿದರೆ ಏನು ಗೊತ್ತಿಲ್ಲದಂತೆ ನನ್ನ ಮುಂದೆ ನಾಟಕ ಹೂಡಿದೆ.
ಹೃದಯಕ್ಕೆ ಕೇಳಿದೆ ಯಾರಿವನು? ಹೃದಯ ಹೇಳಿತು ಇವನು ನನ್ನವನು…….
ಮುಗುಳು ನಕ್ಕು ನೀನು ನನ್ನ ಮುಂಗುರುಳು ಸರಿಪಡಿಸಿ.
ನನ್ನ ಸಮೀಪ ಬಂದು ನನ್ನ ಕೂದಲು ಚೆಲ್ಲಾಪಿಲ್ಲಿ ಮಾಡಿಸಿ.
ಹೃದಯಕ್ಕೆ ಕೇಳಿದೆ ಯಾರಿವನು? ಹೃದಯ ಹೇಳಿತು ಇವನು ನನ್ನವನು……..
ಮುದ್ದು ಮುದ್ದಾಗಿ ನನ್ನ ಕದ್ದು ನೋಡಿದೆ.
ನನ್ನ ನೆದರೆಲ್ಲಾ ನೀನೇ ಹೋತ್ತೊಯ್ದೆ.
ಹೃದಯಕ್ಕೆ ಕೇಳಿದೆ ಯಾರಿವನು? ಹೃದಯ ಹೇಳಿತು ಇವನು ನನ್ನವನು…….
ಬಿದ್ದಾಗ ಮೌಲ್ಯಗಳನ್ನು ಕೊಟ್ಟು ಕೈ ಹಿಡಿದು ಎಬ್ಬಿಸಿದೆ.
ಸೋತು ಅತ್ತಾಗ ಆಪ್ತನಾಗಿ ಕಣ್ಣೋರಿಸಿದೆ.
ಕೊನೆಯದಾಗಿ ಸತ್ಯ ಹೇಳೆಂದು,
ಹೃದಯಕ್ಕೆ ಕೇಳಿದೆ ಯಾರಿವನು? ಹೃದಯ ಹೇಳಿತು ಇವನು ನನ್ನವನು…….
–ಸುಜಾತಾ ಪಾಟೀಲ ಸಾಂಗ್ಲಿ