ಕನಸು
ಅಕ್ಕಾ….
ನೀ ಕಂಡ ಕನಸು
ನಾನೂ ಕಂಡೆ…!!
ನಿನ್ನ ಕನಸಲ್ಲಿ ಚೆನ್ನಮಲ್ಲ
ನನ್ನ ಕನಸಲ್ಲಿ ಮದನಮಲ್ಲ ….,!
ನಿನ್ನ ನಲ್ಲ ನಿಷ್ಕಾಮಿ
ನನ್ನ ನಲ್ಲ ಕಾಮಿ….!
ನಿನ್ನವನು ಯೋಗ ಸುಖವೆಂದ
ನನ್ನವನಿಗೆ ಭೋಗವೇ ಸುಖ…!
ನಿನ್ನವ ಕಾಯದ ಲಜ್ಜೆಯ ಕಳೆದು ಮೋಹದ ಪರದೆಯ ಕಿತ್ತ
ನನ್ನವ ರೇಶಿಮೆಯಲಿ ಸುತ್ತಿ ಮೋಹದ ಬಲೆಯ ಹೆಣೆದಾ….!
ನಿನ್ನವ ನಿನ್ನ ನಿರಾಭರಣವೆ ಚೆಲುವೆಂದ….
ನನ್ನವ ಸರ್ವಾಂಗವನು ಆಭರಣದಲಿ ಬಂಧಿಸಿ ತನ್ನ ಅಂಕೆಯಲಿಟ್ಟುಕೊಂಡ….!!
ನೀನೇ ಮರುಳೆ ಅಂದುಕೊಂಡೆ
ನಾನು ಮರುಳಾಗಿದ್ದು ತಿಳಿಯಲಿಲ್ಲ ಈ ಮತಿಗೆ…!!
ನೀನು ನಿನ್ನಲ್ಲಿ ಅವನ
ಅವನಲ್ಲಿ ನಿನ್ನ ಕಂಡೆ
ನಾನು.. ಅವನಲ್ಲಿ ಎಂದೂ ನನ್ನ ಕಾಣಲಾರೆ
ನನ್ನಲ್ಲಿ ಅವನು ಬರಿ ಭ್ರಮೆ……!!
ಅವನಪ್ಪಿಕೊಂಡು ಪರಮ ಸುಖಿಯಾದೆ
ಸುಖವು ರಾತ್ರಿ ಕಂಡ ಕನಸು
ನನಗೆ….!!
ನೀನು ಚೆನ್ನಮಲ್ಲನ ಬಯಸಿ
ಮಹಾದೇವಿಯಾದೆ
ನಲ್ಲನ ಸಂಗ ಬಯಸಿ
ನಾನು ಭವಿಯಾದೆ….!!
–ಡಾ. ನಿರ್ಮಲ ಬಟ್ಟಲ
ವೈರಾಗ್ಯನಿಧಿ ಅಕ್ಕ ಮಹಾದೇವಿಯವರ ಪ್ರೇಮಕ್ಕೆ ನಿಮ್ಮ ಇಂದಿನ ಲೌಕಿಕ ಪ್ರೇಮಕ್ಕೆ ಹೋಲಿಸುವದು ಯಾವ ರೀತಿಯಲ್ಲಿ ಹೋಲಿಕೆಯಾಗುತ್ತದೆ ಗೊತ್ತಿಲ್ಲ. ಈ ವ್ಯತ್ಯಾಸ ವಚನ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿರುವ ಸೌದ್ರಿಯವರ ಗಮನಕ್ಕೂ ಬರಬೇಕಾಗಿತ್ತು.
Any way Vachana Literarure is being used for unwanted similies. Dont know where we will go and land up. Sorry to say this but its the reality of todays ignorance about Vachana Literature.