ಬನ್ನಿ ಬುದ್ಧ, ಬಸವ, ಅಂಬೇಡ್ಕರ್ ಕಟ್ಟಿದ ಗೂಡಿಗೆ

ಬನ್ನಿ ಬುದ್ಧ, ಬಸವ, ಅಂಬೇಡ್ಕರ್ ಕಟ್ಟಿದ ಗೂಡಿಗೆ

 


ರಾಜಭೋಗ ತೊರೆದ ಸಿದ್ಧ.
ಶಾಂತಿ ಗೂಡ ನರಸುತ ಎದ್ದ.
ಆಸೆಯೇ ದುಃಖಕ್ಕೆ ಮೂಲ ಕಾರಣ.
ಕಂಡರು ಭವ ಬಂಧನದ ಅಳಿಲಿನ ಹೂರಣ.
ಶಾಂತಿ ಗೂಡಿನಲ್ಲಿ, ಭ್ರಾಂತಿ ಭೋಗ ಗೆದ್ದ.
ಬಿಕ್ಕುನಾಗಿ ಜಗವ ಸುತ್ತಿ, ಅಮರನಾದ ಬುಧ್ಧ.

ಕಿತ್ತೆಸೆದ ಜನಿವಾರ, ಕಾಯಕದ ಕೈವಾರ.
ದಯ ಸಮತೆಯ,ವರ್ಗ-ವರ್ಣ-ಜಾತಿರಹಿತ ಬಂಡುಕೋರ.
ದುಡಿದು ತಿನ್ನುವ ಧರ್ಮ, ಹಂಚಿ ಬದುಕುವ ಮರ್ಮ.
ಸುಟ್ಟ ಮೌಢ್ಯತೆಯ ಕರ್ಮ,ಬಿಟ್ಟ ದಲಿತರ ಸ್ತ್ರೀಯರ ವರ್ಮ.
ಗೂಡ ಕಟ್ಟಿಹ ಬಸವ, ಮಹಾಮನೆಯ ಜೀವನ.
ಶರಣ ಮಹಾಮೌಲ್ಯ ಹರಡಿತು,ಬಸವಾದಿ ಶರಣರ ವಚನ.

ಕಷ್ಟದಲ್ಲೆ ಹುಟ್ಟಿದ ಭೀಮ, ಕನಸು ಕಟ್ಟಿದ ರಾಜ್ಯ ರಾಮ.
ತಾನ್ನುಂಡ ಕೀಳರಮೇಯ ಹೊಮ,ಕೊನೆಯಾಗಿ ನಾಮ.
ಶರಣರ ಜ್ಞಾನದರಿವಿನಲ್ಲಿ, ಕುಂತ ಬರೆದಾನ ಸಂವಿಧಾನ.
ಜಾತ್ಯಾತೀತ, ಧರ್ಮಾತೀತ, ಭಾವೈಕ್ಯತೆಯ ಅವಧಾನ.
ರಾಷ್ಟ್ರಪತಿಗೂ,ಸಾಮಾನ್ಯನಿಗೂ ಒಂದೇ ಮತದ ಹಕ್ಕು.
ಜನರಿಂದ,ಜನರಿಗಾಗಿ,ಜನರಿಗೊಸ್ಕರ ಸಾಗಲಿ, ಪ್ರಜಾಪ್ರಭುತ್ವ ದ ದಿಕ್ಕು.

ಓ……..!ನನ್ನ ಬಾಂಧವರೇ,ಬನ್ನಿರೆಲ್ಲರೂ ಬುಧ್ಧ,ಬಸವ, ಅಂಬೇಡ್ಕರ್ ಕಟ್ಟಿದ ಗೂಡಿಗೆ.
ಕೂಡಿ ಬದುಕಲು ಬಧ್ಧರಾಗೋಣ, ಈ ಮೂವರ ಸುಳ್ನುಡಿಗೆ.

ಸುಜಾತಾ ಪಾಟೀಲ ಸಂಖ

Don`t copy text!