ಸಿದ್ಧೇಶ್ವರ ಸ್ವಾಮಿಗಳು.

ಸಿದ್ಧೇಶ್ವರ ಸ್ವಾಮಿಗಳು

ಮರದಡಿಯ ನೆರಳಲ್ಲಿ
ಮಗುಮನದ ಸ್ವಾಮಿಜಿ
ಮನ ಮಾಗಿ ಪರಿಪಕ್ವದಿ
ಮನಸೂರೆಗೊಂಡಿಹರು.||

ಪ್ರವಚನದಿ ಪ್ರಖ್ಯಾತರು
ಪ್ರಾತಃಸ್ಮರಣೀಯರು
ಹರನ ಪ್ರತಿರೂಪದಿ
ಧರೆಗೆ ಇಳಿದವರು ||

ಸದುವಿನಯಯದ
ಸಾಕಾರ ಮೂರ್ತಿ
ಸದ್ಯೋಜ್ಯಾತರು
ಸರಳ ವ್ಯಕ್ತಿತ್ವದವರು||

ಪದವಿ ಪ್ರಶಸ್ತಿಯ
ಮೀರಿನಿಂದವರು
ಪರಮನೊಲಿಸುವ
ಪರಿಯ ತೋರುವವರು ||

ಅಪ್ರತಿಮ ಜ್ಞಾನದ ಖನಿ
ಅದ್ಭುತ ಭಾಷೆಯ ಗಣಿ
ಮೃದು ಮಧುರ ಮಾತು
ಅರಿತವಗೆ ಗೊತ್ತು ||

ಸಾಧನೆಯ ಸಿದ್ಧಿಯ ಶಿಖರವೆ
ಸಿದ್ಧೇಶ್ವರ ಸ್ವಾಮಿಜಿ
ಇವರ ಸನ್ಮಾರ್ಗದಿ ಸಾಗೋಣ
ನಾವೆಲ್ಲ ಸೌಖ್ಯದಿ ||

ಸವಿತಾ ಮಾಟೂರ. ಇಲಕಲ್ಲ.

Don`t copy text!