Want ಮತ್ತು need ಗಳ ನಡುವೆ

ಜೀವನ್ಮುಖಿ
ಇಂಚಿಂಚೂ ಅವಲೋಕನ

 

Want ಮತ್ತು need ಗಳ ನಡುವೆ

ಈ want ಮತ್ತು need ಎರಡೂ ಪದದ ಅರ್ಥ ಬೇರೆ ಬೇರೆ. Want ಅಂದರೆ ಬೇಕು, ಆಸೆ, ಬೇಡಿಕೆ. ಅದೇ need ಅಂದರೆ ಅವಶ್ಯ, ಅವಶ್ಯಕತೆ. ಬೇಕು ಎಂಬ ಆಸೆ ಇಲ್ಲದಿದ್ದರೂ ಜೀವನ ನಡೆಯುತ್ತದೆ. ಆದರೆ ಅವಶ್ಯಕವಾಗಿ ಇಲ್ಲದೇ ಹೋದರೆ ನಡೆಯುವುದೇ ಇಲ್ಲ.

ಭಾಷೆ ಯಾವುದೇ ಇರಲಿ ನಮ್ಮ ಬೇಡಿಕೆ ಅಗತ್ಯತೆಯನ್ನು ವ್ಯಕ್ತ ಪಡಿಸುವ ಸಂದರ್ಭದಲ್ಲಿ ಅವೇ ಪದಗಳು ಬಂದೇ ಬಿಡುತ್ತವೆ. ನಮ್ಮ ಅವಶ್ಯಕತೆಯಲ್ಲಿ ತೀವ್ರತೆ ಕಂಡರೆ ಬೇಡಿಕೆಯಲ್ಲಿ ಆಸೆಯನ್ನು ಕಾಣುತ್ತೇವೆ. ಈ ವ್ಯತ್ಯಾಸವನ್ನು ಶಾಲೆಯಲ್ಲಿ ಕಳಿಸಿರುತ್ತಾರೆ. ಆದರೆ ಜೀವನದ want ಗಳು need ಗಳು ಯಾವುವು ಎಂಬುದನ್ನು ನಮಗೆ ನಾವೇ ನಿರ್ಧಾರ ಮಾಡಿಕೊಳ್ಳಬೇಕಾಗುತ್ತದೆ.

ಬೇಕು ಮತ್ತು ಅವಶ್ಯಕತೆ ಇವುಗಳ ನಡುವೆ ಅಂತರ ನಮಗೆ ಸಣ್ಣ ವಯಸ್ಸಿಗೆ ತಿಳಿಯುತ್ತಿರುವುದಿಲ್ಲ. ಬೆಳೆಯುತ್ತ ಇರುವಾಗ ತಿಳಿಯುತ್ತ ಹೋಗುತ್ತೇವೆ. ತಂದೆ-ತಾಯಿಯರು ಮಕ್ಕಳಿಗೆ ಏನು ಬೇಕು ಏನು ಅವಶ್ಯ ಅವುಗಳನ್ನು ಪೂರೈಸುತ್ತ ಬರುತ್ತಾರೆ.10-12 ವಯಸ್ಸಿನವರೆಗೆ ಅಮ್ಮ ಬೇಕು ಎಂದು ಕೇಳುವ ಅಮ್ಮ ಅಪ್ಪ ಕೊಡಿಸಿದ್ದು ಪಡೆಯುವ ಬುದ್ಧಿ ಇರುತ್ತದೆ. ಹದಿ ವಯಸ್ಸಿನಿಂದ ಮಕ್ಕಳ ಬೇಡಿಕೆಗಳು ಹೆಚ್ಚುತ್ತಾ ಅವರ ಅವಶ್ಯಕತೆಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ.

ಹದಿ ವಯಸ್ಸು ದಾಟಿದ ನಂತರ 25ರ ಸಮಯ ಬಂದಾಗ ಬೇಡಿಕೆ ಮತ್ತು ಅವಶ್ಯಕತೆಗಳ ವ್ಯತ್ಯಾಸ ಸಂಪೂರ್ಣವಾಗಿ ಅರ್ಥ ಆಗುತ್ತಲಿರುತ್ತದೆ. ಆದರೂ ಇಂದಿನ ಯುವ ಜನತೆಯ ಆಯ್ಕೆಯಲ್ಲಿ ಬೇಡಿಕೆ ಮತ್ತು ಅವಶ್ಯಕತೆಯ ಮಧ್ಯ ಎಲ್ಲವನ್ನೂ ಅವಶ್ಯಕತೆ ಎಂದು ಭಾವಿಸುವ trend ನೋಡಬಹುದು.

ಸಾಮಾನ್ಯವಾಗಿ ಹೇಳುವುದಾದರೆ, ಇಂತಹ ವಸ್ತು ಪದಾರ್ಥ ಅಥವಾ ವ್ಯಕ್ತಿ ನಮಗೆ ಬೇಕು ಎಂದರೆ ನಮಗೆ ಇಷ್ಟ ಅವರು /ಅದು ಸಿಕ್ಕರೆ ಸಿಗಲಿ ಎಂಬ ಭಾವ. ಅದೇ ಅವಶ್ಯಕತೆ ಎಂದರೆ ಆ ವಸ್ತು, ಪದಾರ್ಥ ಅಥವಾ ವ್ಯಕ್ತಿ ಇಲ್ಲದೇ ನಡೆಯುವುದೇ ಇಲ್ಲ ಎಂಬ ಅರ್ಥ. ಉದಾಹರಣೆಗೆ ತಾಯಿಗೆ ಮಗು ಮತ್ತು ಮಗುವಿಗೆ ತಾಯಿ ಅವಶ್ಯಕತೆ. ಆದರೆ ಜೀವನದಲ್ಲಿ ಬೇರೆಲ್ಲ ಸಂಬಂಧಗಳು ಬರೇ ಬೇಕು ಅವುಗಳು ಇಲ್ಲದೇ ಜೀವನ ನಡೆದಿರುತ್ತದೆ. ತಾಯಿ ಮತ್ತು ಮಗುವಿನ ಸಂಬಂಧ ಮಾತ್ರವಲ್ಲ ಜೀವನಕ್ಕೆ ಕೆಲವು ಸಂಬಂಧಗಳು ಅವಶ್ಯಕತೆಯೇ.

ಇನ್ನೊಂದು ರೀತಿ ಹೇಳಬೇಕಾದರೆ ಸಿಹಿ ತಿನಿಸು ವಿಶೇಷ ಅಡಿಗೆ ನಮ್ಮ ಬೇಡಿಕೆ ದಿನ ನಿತ್ಯದ ಊಟ ಅವಶ್ಯಕತೆ. ಗಾಳಿಗೆ AC fan ಬೇಡಿಕೆ ಅದೇ ಶುದ್ಧ ಗಾಳಿ ಅವಶ್ಯಕತೆ. ಇದೇ ರೀತಿ ನಾವು ಜೀವನ ಪ್ರತಿ ಘಟ್ಟದಲ್ಲೂ ಬೇಡಿಕೆ ಮತ್ತು ಅವಶ್ಯಕತೆಗಳನ್ನು ಅರಿಯುತ್ತ ಹೋಗಬೇಕು. ಶಾಲೆಯಲ್ಲಿ ಓದು ಅವಶ್ಯಕತೆ ಅದೇ ಆಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಬೇಡಿಕೆ. ವಿದ್ಯೆ ಹತ್ತದೆ ಬರೇ ಕಲೆ ಜೀವನ ಕಟ್ಟಿ ಕೊಡುವುದಿಲ್ಲ. ಆದರೆ ಇಂದಿನ ಕಾಲದಲ್ಲಿ ಜನರು ಕಲೆಯನ್ನು ವೃತ್ತಿ ಮಾಡಿಕೊಂಡು ಬದುಕಿಲ್ಲವೇ ಎಂದರೆ ಅವರು ಆ ಕಲೆಯನ್ನು ತಮ್ಮ ಅವಶ್ಯಕತೆಯಾಗಿ ಮಾಡಿಕೊಂಡು ಉಸಿರಿನೊಂದಿಗೆ ಅಭ್ಯಾಸ ಮಾಡುವಂತೆ ಮೈಗೂಡಿಸಿ ಕೊಂಡಿರುತ್ತಾರೆ. ಹಾಗೆ ಇಂದಿನ electronic ಯುಗದಲ್ಲಿ ಹಿಂದಿನ ಕಾಲದಲ್ಲಿ ಐಷಾರಾಮಿ ಎನಿಸಿದ ವಸ್ತುಗಳು ಇಂದಿನ ಅವಶ್ಯಕತೆ ಆಗಿವೆ. ಕಾಲಕ್ಕೆ ತಕ್ಕಂತೆ ನಡೆಯುವುದು ಅವಶ್ಯಕತೆ. ಮುಂದಾಲೋಚನೆ ಮಾಡಿ 10-20 ವರ್ಷ ಮುಂದಿನ ತಂತ್ರ ಜ್ಞಾನ ಮತ್ತು ಜೀವನ ಶೈಲಿ ರೂಢಿ ಮಾಡಿಕೊಳ್ಳುವುದು ಬೇಡಿಕೆ.

ಈ ಲೇಖನ ಓದಿ ಕೆಲವರು ಇದೇನಪ್ಪ ಮಹಾತ್ವಾಕಾಂಕ್ಷೆ ಬೇಡ ಎನ್ನುತ್ತಿದ್ದೇನೆ ಎಂಬ ಭಾವನೆ ಮೂಡಿಸಿ ಕೊಳ್ಳಬಹುದು. ಆದರೆ ನನ್ನ ಈ want ಮತ್ತು need ವ್ಯತ್ಯಾಸ ತಿಳಿಸುವುದು ಜೀವನವನ್ನು ಹಗುರವಾಗಿ ತಗೆದು ಕೊಂಡು ತಂದೆ ತಾಯಿ ಸಮಾಜ ಎಲ್ಲಕ್ಕೂ ನಿರುಪಯುಕ್ತರು ಎಂಬ label ಹೊತ್ತವರಿಗೆ. ಆ ರೀತಿ ಜೀವನದ ಬಗ್ಗೆ ಗಂಭೀರತೆ ತಿಳಿಯದೇ ಇರುವವರಿಗೆ ನಾವು ಮಾರ್ಗ ದರ್ಶನ ಮಾಡಿದಾಗ ಅವರು ಕೂಡ ದೇಶದ ಹೆಮ್ಮೆಯ ಸಂಪತ್ತು ಆಗುತ್ತಾರೆ.

ನನ್ನ ಈ ಲೇಖನವನನ್ನು ಓಡುವದು ನಿಮ್ಮ want ಆಗಿರ ಬಹುದು ಆದರೆ ಲೇಖನ ಬರೆಯುವುದು ನನ್ನ need.

ಮಾಧುರಿ ದೇಶಪಾಂಡೆ, ಬೆಂಗಳೂರು

Don`t copy text!