ಕಲ್ಯಾಣ ಕರ್ನಾಟಕದ ಅಗ್ರಗಣ್ಯ ಸಹಕಾರಿ ಭ್ರಮರಾಂಬ ಸಹಕಾರಿ ಬೆಳೆದುಬಂದ ದಾರಿ

ಕಲ್ಯಾಣ ಕರ್ನಾಟಕದ ಅಗ್ರಗಣ್ಯ ಸಹಕಾರಿ
ಭ್ರಮರಾಂಬ ಸಹಕಾರಿ ಬೆಳೆದುಬಂದ ದಾರಿ

೨೫ ವರ್ಷಗಳ ಹಿಂದೆ ಕಲ್ಯಾಣ ಕರ್ನಾಟಕ (ಹೈದ್ರಬಾದ ಕರ್ನಾಟಕ ) ಪ್ರದೇಶದಲ್ಲಿ ಹಸಿರು ಚಿಗುರುವುದಿಲ್ಲ, ಕನಸು ಗರಿ ಬಿಚ್ಚುವುದಿಲ್ಲ ಎಂಬ ನಾಣ್ಣುಡಿ ಪ್ರಚಲಿತದಲ್ಲಿತ್ತು. ಈಗ ಕಾಲ ಬದಲಾಗಿದೆ. ಯೋಚಿಸುವ ಮನಸ್ಸುಗಳು ಪರಿವರ್ತನೆಯಾಗಿವೆ. ತುಂಗಭದ್ರೆ ಮತ್ತು ಕೃಷ್ಣೆಯಯಲ್ಲಿ ಸಾಕಷ್ಟು ನೀರು ಹರಿದು ಈ ಭಾಗವನ್ನು ಸಮೃದ್ಧವಾಗಿ ಹಸಿರುಮಯ ಮಾಡಿದೆ. ಅದರ ಪ್ರತಿಫಲವೇ ಸೋನಾ ಮಸೂರಿ ಅಕ್ಕಿ, ತೊಗರಿಯ ಕಣಜ ರೈತರನ್ನು ಖುಷಿಗೊಳಿಸಿದೆ. ಜನರ ಆರ್ಥಿಕ ಪ್ರಗತಿಗಾಗಿ ಸಹಕಾರ ಸಂಘಗಳು ಹುಟ್ಟಿಕೊಂಡು ಅಭಿವೃದ್ಧಿಗೆ ಸಹಕರಿಸುತ್ತಿವೆ.
ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ಆರ್ಥಿಕ ಪ್ರಗತಿಗಾಗಿ ಮಸ್ಕಿಯನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಶ್ರೀ ಭ್ರಮರಾಂಬ ಸಹಕಾರಿ ಸಂಘ ಪ್ರಾರಂಭವಾಗಿದೆ. ಇಂದು ಸಂಸ್ಥೆ ಬೃಹದಾಕಾರವಾಗಿ ಬೆಳೆದು ನಿಂತು ಹೈದ್ರಬಾದ ಕರ್ನಾಟಕ ಭಾಗದಲ್ಲಿ ಅಗ್ರಗಣ್ಯ ಸಹಕಾರಿ ಸಂಸ್ಥೆಯಾಗಿ ರೂಪಗೊಂಡಿದೆ.

೨೨ ವರ್ಷಗಳ ಹಿಂದೆ ೭ ಲಕ್ಷದಿಂದ ಆರಂಭವಾದ ಸಂಸ್ಥೆ ಇದೀಗ  ಯಾವುದೆ ಬ್ಯಾಂಕ್‌ಗಳಿಂದ ಸಾಲ ಪಡೆಯದೆ ಕೇವಲ ಸದಸ್ಯರ ಷೇರು ಹಣ ಮತ್ತು ಅವರ ಠೇವಣಿ ಹಣದಿಂದ ಒಟ್ಟು ೫೦೦ ಕೋಟಿ ವ್ಯವಹಾರ ಮಾಡುವ ಮೂಲಕ ಕಲ್ಯಾಣ ಕರ್ನಾಟಕದ ಅತ್ಯೂತ್ತಮ ಸಹಕಾರಿ ಸಂಸ್ಥೆಯಾಗಿ ಬೆಳದಿದೆ. ಆರಂಭದ ವರ್ಷದಿಂದ ಸದಸ್ಯರಿಗೆ ಲಾಭ ಕೊಡುವ ಮೂಲಕ ಇಲ್ಲಿಯವರೆಗೆ ಅವರು ಹೂಡಿಕೆ ಮಾಡಿದ ಷೇರು ಹಣ ೧೦೦ ಪಟ್ಟು ಅಧಿಕವಾಗಿ ಹೆಚ್ಚಳವಾಗಿದೆ.
ಸಹಕಾರ ಸಂಘಕ್ಕೆ ಹೋದ ಹಣ, ಸ್ಮಶಾನಕ್ಕೆ ಹೋದ ಹೆಣ ವಾಪಾಸು ಬರುವುದಿಲ್ಲ ಎಂಬ ಕೆಟ್ಟ ವಾತವರಣ ಅಂದು ಇತ್ತು. ಇದೀಗ ಸಂಪೂರ್ಣ ಬದಲಾಗಿದ್ದು ಸ್ಮಾಶನಕ್ಕೆ ಹೋದ ಹೆಣ ಬರುವುದಿಲ್ಲವಾದರು ಸಹಕಾರ ಸಂಘಕ್ಕೆ ಹಾಕಿದ ಹಣ ಖಂಡಿತವಾಗಿ ಸುರಕ್ಷಿತವಾಗಿ ವಾಪಸ್ಸು ಲಾಭ ಬರುತ್ತದೆ ಎಂಬುದನ್ನು ಶ್ರೀ ಭ್ರಮರಾಂಬ ಪತ್ತಿನ ಸಹಕಾರಿ ಸಂಸ್ಥೆ ಸಾಭೀತು ಮಾಡಿ ತೋರಿಸಿದೆ.


‘ಎಲ್ಲರೂ ಒಬ್ಬರಿಗಾಗಿ, ಒಬ್ಬರು ಎಲ್ಲರಿಗಾಗಿ’’ ಎಂಬ ಸಹಕಾರಿ ತತ್ವದ ತಳಹದಿಯ ಮೇಲೆ ದಿನಾಂಕ ೦೫-೦೫-೨೦೦೦ ರಲ್ಲಿ ಶ್ರೀ ಭ್ರಮರಾಂಬ ಪತ್ತಿನ ಸಹಕರ ಸಂಘವನ್ನು ಮಸ್ಕಿಯಲ್ಲಿ ಸ್ಥಾಪಿಸಲಾಯಿತು. ಕೇವಲ ೭ ಲಕ್ಷ ರೂ.ಷೇರು ಬಂಡವಾಳ ಹಾಗೂ ೪೦೦ ಜನ ಸದಸ್ಯರೊಂದಿಗೆ ಆರಂಭವಾದ ಸಂಘ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಕಾಯ್ದೆ ೧೯೯೭ ರ ಅಡಿಯಲ್ಲಿ ಪ್ರಾರಂಭಗೊಂಡು ದಿನಾಂಕ ೧೨-೧೨-೨೦೦೧ ರಲ್ಲಿ ಸೌಹಾರ್ದ ಕಾಯ್ದೆಯಲ್ಲಿ ಪರಿವರ್ತನೆಗೊಂಡಿತು.
ಸಹಕಾರಿಯು ಪ್ರಾರಂಭದಲ್ಲಿ ಮಸ್ಕಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಹಕಾರಿಯ ಬಗ್ಗೆ ಮಾಹಿತಿ ನೀಡಿ ಸಣ್ಣ ಪುಟ್ಟ ವ್ಯಾಪಾರಸ್ಥರನ್ನು ಸದಸ್ಯರನ್ನಾಗಿ ಮಾಡಿಕೊಂಡು ಅವಶ್ಯಕತೆಗಳಿಗೆ ಅನುಗುಣವಾಗಿ ಆರ್ಥಿಕ ನೆರವು ನೀಡುತ್ತ ಹಾಗೂ ಅವರಿಂದ ಉಳಿತಾಯದ ಮನೋಭಾವನೆ ಬೆಳಸಿ ಠೇವಣಿಗಳನ್ನು ಸಂಗ್ರಹಿಸುತ್ತ ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸುವಲ್ಲಿ ಮುಂಚುಣಿಯಲ್ಲಿದೆ.


ಶಾಖೆಗಳ ಪ್ರಾರಂಭ ಃ ಕ್ರಮೇಣ ಸಹಕಾರಿಯು ತನ್ನ ಸದಸ್ಯರ ಅಗತ್ಯಕ್ಕೆ ತಕ್ಕಂತೆ ತನ್ನ ಕಾರ್ಯಕ್ಷೇತ್ರವನ್ನು ಹೆಚ್ಚಿಸಿಕೊಂಡು ೨೦೦೫ ರಲ್ಲಿ ಲಿಂಗಸುಗೂರು ಪಟ್ಟಣದಲ್ಲಿ ಪ್ರಥಮ ಶಾಖೆಯನ್ನು ಆರಂಭಿಸುವ ಮೂಲಕ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿಯೇ ಪ್ರಪ್ರಥಮ ಶಾಖೆ ಪ್ರಾರಂಭಿಸಿ ಹೆಗ್ಗಳಿಕೆ ಭ್ರಮರಾಂಬ ಸಹಕಾರಿ ಸಂಸ್ಥೆಗೆ ಸಲ್ಲುತ್ತದೆ. ನಂತರ ೨೦೦೮ ರಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಲ್ಲಿ, ೨೦೧೦ ರಲ್ಲಿ ಗ್ರಾಮೀಣ ಪ್ರದೇಶವಾದ ಮಾನ್ವಿ ತಾಲೂಕಿನ ಕವಿತಾಳ ಗ್ರಾಮದಲ್ಲಿ , ೨೦೧೩ ರಲ್ಲಿ ಜಿಲ್ಲಾ ಕೇಂದ್ರ ಸ್ಥಾನವಾದ ರಾಯಚೂರಿನಲ್ಲಿ ಮತ್ತು ೨೦೧೮ ರಲ್ಲಿ ಆರನೇ ಶಾಖೆ ಸಿಂಧನೂರಿನಲ್ಲಿ ಶಾಖೆಗಳನ್ನು ಪ್ರಾರಂಭಸಿದ್ದು ಒಂದೊಂದು ಶಾಖೆಯು ಒಂದೊಂದು ರೀತಿಯಲ್ಲಿ ಗ್ರಾಹಕರ ಪ್ರೀತಿ ವಿಶ್ವಾಸವನ್ನು ವೃದ್ಧಿಸಿಕೊಂಡು ಆರ್ಥಿಕವಾಗಿ ಮುಂಚುಣಿಯಲ್ಲಿರಲು ಪೈಪೋಟಿಯಿಂದ ಉತ್ತಮ ಸೇವೆ ನೀಡುವ ಮೂಲಕ ಆರ್ಥಿಕ ಪ್ರಗತಿ ಸಾಧಿಸಿವೆ.


ಸಹಕಾರಿಯಲ್ಲಿ ಒಟ್ಟು ೧೭ ಜನ ನಿರ್ದೆಶಕ ಮಂಡಳಿ ಇದ್ದು, ವಿಶೇಷವಾಗಿ ಊರಿನ ಹಿರಿಯ ಗಣ್ಯರು, ವರ್ತಕರು, ಮತ್ತು ತಜ್ಞರನ್ನು ಒಳಗೊಂಡ ಸಲಹಾ ಸಮಿತಿ ರಚಿಸಿಕೊಂಡಿದೆ. ಪ್ರತಿ ಶಾಖೆಯಲ್ಲೂ ಕೂಡ ಶಾಖೆ ಅವೃದ್ದಿಗೊಳಿಸಲು ೫ ರಿಂದ ೧೦ ಜನರಂತೆ ಒಟ್ಟು ೫೨ ಜನ ಸಲಹಾ ಸಮಿತಿ ಸದಸ್ಯರನ್ನು ಒಳಗೊಂಡ ಉತ್ತಮ ಆಡಳಿತ ಮಂಡಳಿ ಇರುವ ಏಕೈಕ್ಯ ಸಂಸ್ಥೆಯಾಗಿ ರೂಪಗೊಂಡಿದೆ.
ಎಲ್ಲಾ ಶಾಖೆಗಳ ಆಡಳಿತ ನಿರ್ವಹಿಸಲು ಪ್ರತ್ಯೇಖವಾಗಿ ಮುಖ್ಯ ಕಚೇರಿ ಇದ್ದು ಅದಕ್ಕಾಗಿ ಪ್ರತ್ಯೇಖ ತಂತ್ರಜ್ಞಾನ ಅಳವಡಿಸಿಕೊಂಡು ತಕ್ಷಣದಲ್ಲಿ ಎಲ್ಲಾ ಶಾಖೆಗಳ ವ್ಯವಹಾರವನ್ನು ವಿಕ್ಷೀಸುವ, ನಿಯಂತ್ರಿಸುವ, ಮಾರ್ಗದರ್ಶನ ಮಾಡುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಸಹಕಾರಿಯಲ್ಲಿ ಪಿಗ್ಮಿ ಏಜೆಂಟರು ಸೇರಿ ಒಟ್ಟು ೮೧ ಜನ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ರಾಜ್ಯದ ಪ್ರಮುಖ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ತರಬೇತಿ ನೀಡುವ ಮೂಲಕ ಸಹಕಾರಿ ಸಂಸ್ಥೆಯ ಸದಸ್ಯರಿಗೆ ಉತ್ತಮ ಸೇವೆ ನೀಡಲು, ಸಿಬ್ಬಂದಿಗಳ ಕಾರ್ಯಕ್ಷಮತೆ ಹೆಚ್ಚಿಸಲು ಅನುಕೂಲ ಮಾಡಿಕೊಟ್ಟಿದೆ.

ಕೊರ್ ಬ್ಯಾಂಕಿಂಗ್ ವ್ಯವಸ್ಥೆ
ಎಲ್ಲಾ ಶಾಖೆಗಳ ವ್ಯವಹಾರವನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಿಕೊಂಡಿದ್ದು ಗ್ರಾಹಕರು ಯಾವುದೇ ಶಾಖೆಯಲ್ಲಿ ವ್ಯವಹರಿಸಲು ಅನುಕೂಲ ಕಲ್ಪಿಸಿದೆ. ಸದಸ್ಯರು ವ್ಯಹಹರಿಸಿದ ತಕ್ಷಣವೇ ಅವರ ಮೊಬೈಲ್ ಸಂಖ್ಯಗೆ ಎಸ್.ಎಂ.ಎಸ್ ಮೂಲಕ ಮಾಹಿತಿ ರವಾನೆಯಾಗುವದರಿಂದ ವಿಶ್ವಾಸನೀಯವಾಗಿದೆ. ಶಾಖೆಗಳಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಇ-ಸ್ಟ್ಯಾಂಪಿಂಗ್ ವ್ಯವಸ್ಥೆ ಇದ್ದು ಸದಸ್ಯರು ಇದರ ಉಪಯೋಗ ಪಡೆಯುವ ಮೂಲಕ ಅನಗತ್ಯವಾಗಿ ತಿರುಗಾಡುವ ಸಮಯದ ಉಳಿತಾಯ ಮಾಡಿದೆ.
ಸಹಕಾರಿಯ ಸದಸ್ಯರ ಆರ್ಥಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು ಸದಸ್ಯರುಗಳಿಗೆ ಜಾಮೀನು ಸಾಲ, ಆಸ್ತಿ ಆಧರಿತ ಸಾಲ, ವಾಹನ ಸಾಲ, ಮನೆ, ಮತ್ತು ಸೈಟ್ ಕೊಳ್ಳಲು ಸಾಲ, ಶೈಕ್ಷಣಿಕ ಸಾಲ, ಆಭರಣ ಮತ್ತು ಗೃಹಪಯೋಗಿ ವಸ್ತುಗಳನ್ನು ಕೊಳ್ಳಲು ಸಾಲ ನೀಡಲಾಗುತ್ತದೆ. ವಿಶೇಷವಾಗಿ ಮಹಿಳೆಯರನ್ನು ಸ್ವಾವಲಂಭಿಗಳನ್ನಾಗಿ ಮಾಡುವ ಉದ್ದೇಶದಿಂದ ಶ್ರೀ ಭ್ರಮರಾಂಬ ಮಹಿಳಾ ಶಕ್ತಿ ಯೋಜನೆ ರೂಪಿಸಿದ್ದು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆ ರೂಪಿಸಲಾಗಿದೆ. ಇದರ ಪ್ರಯೋಜನವನ್ನು ಸುಮಾರು ೨೫೦೦ ಕ್ಕೂ ಅಧಿಕ ಮಹಿಳೆಯರು ಪಡೆದುಕೊಂಡಿದ್ದಾರೆ.

ಜೀವನಿಧಿ ಯೋಜನೆ

ಸದಸ್ಯರು ಅಕಾಲಿಕವಾಗಿ ಮೃತರಾದರೆ ಸಹಕಾರಿ ವತಿಯಿಂದ ಸುದ್ದಿ ತಿಳಿದ ತಕ್ಷಣವೇ ಅವರ ಕುಟುಂಬದವರಿಗೆ ೧೦ ಸಾವಿರ ರೂ.ನೀಡುವ ಮೂಲಕ ಶ್ರೀ ಭ್ರಮರಾಂಬ ಜೀವನಿಧಿ ಯೋಜನೆ ಸಹಕಾರಿ ಸದಸ್ಯರ ಕುಟುಂಬದವರಿಗೆ ಬೆನ್ನೆಲುಬಾಗಿ ನಿಂತಿದೆ.
ಸಿಬ್ಬಙದಿಯ ನಗುಮುಖದ ಸೇವೆ, ಗ್ರಾಹಕರ ಕುಟುಂಬ ವರ್ಗದವರಂತೆ ಭಾಗಿಯಾಗುವ ಅನ್ಯೂನತೆ, ಸಹಕಾರಿ ಸಂಸ್ಥೆಗೆ ಭೇಟಿ ನೀಡುವ ಗ್ರಾಹಕರು ತಮ್ಮ ಮನೆಯಂತೆ ಅನುಭವಿಸುವ ವಾತವರಣ, ತಕ್ಷಣಕ್ಕೆ ಸಿಗುವ ಹಣಕಾಸಿನ ನೆರವು, ಗ್ರಾಹಕರು ತೆಗೆದುಕೊಂಡ ಸಾಲವನ್ನು ಸರಿಯಾದ ಸಮಯ ಮತ್ತು ಮಾಸಿಕ ನಿಯಮಿತವಾಗಿ ಕಟ್ಟಿದ ಪರಿಣಾಮ ಭ್ರಮರಾಂಬ ಈ ಭಾಗದಲ್ಲಿ ಹೆಸರು ವಾಸಿಯಾಗಿದೆ.


ಸಾಮಾಜಿಕ ಸ್ಪಂದನೆ ಃ
ಭ್ರಮರಾಂಬ ಸಹಕಾರಿಯು ಸಾಮಾಜಿಕ ಬದ್ದತೆ ಮೆರೆಯುತ್ತಿದ್ದು ಕಳೆದ ೧೪ ವರ್ಷಗಳಿಂದ ಪ್ರತಿ ವರ್ಷ ಹೊಸವ ವರ್ಷ ಯುಗಾದಿಯಂದು ಯುಗಾದಿ ಸಂಭ್ರಮ ಎನ್ನುವ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸುವ ಮೂಲಕ ಸಂಗೀತ ಕಾರ‍್ಯಕ್ರಮ, ನೀಡಲಾಗಿದೆ. ಅಲ್ಲದೆ ಸದಸ್ಯ ಗ್ರಾಹಕರಿಗೆ, ಉದ್ಯೋಗಸ್ಥರಿಗೆ, ವೃತ್ತಿ ತರಬೇತಿ ಕಾರ್ಯಗಾರ ಏರ್ಪಡಿಸಲಾಗುತ್ತದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಆಸರೆಗಾಗಿ ಅರವಟ್ಟಿಗೆಗಳ ಆರಂಭ, ಸ್ಥಳಿಯ ಸಂಸ್ಥೆಗಳ ಜೊತೆ ಕೈಜೋಡಿಸಿ ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ, ಉಚಿತ ಆರೋಗ್ಯ ತಪಾಸಣೆ ಮಾಡಿಸುವ ಮೂಲಕ ಸಾಮಜಿಕ ಬದ್ದತೆಯನ್ನು ಮೆರೆದಿದೆ. ಇನ್ನೂ ಹೆಚ್ಚಿನ ಸೇವೆ ನೀಡುವ ಉದ್ದೇಶದಿಂದ ಶ್ರೀ ಭ್ರಮ ರಾಂಬ ಚಾರಿಟೇಬಲ್ ಟ್ರಸ್ಟ್ ಹುಟ್ಟುಹಾಕಿ ಅದರ ಮೂಲಕ ಮತ್ತಷ್ಟು ಜನಮುಖಿ ಕೆಲಸ ನಿರ್ವಹಿಸುತ್ತಿದೆ. ಈಗಾಗಲೇ ಮಸ್ಕಿ ಮತ್ತು ಲಿಂಗಸುಗೂರು ಪಟ್ಟಣಗಳಲ್ಲಿ ಮೃತರನ್ನು ಸಂಸ್ಕಾರ ಮಾಡಲು (ಶವ ಸಾಗಿಸಲು) ವೈಕುಂಠ ರಥ ದೇಣಿಗೆ ನೀಡಲಾಗಿದೆ.

ಅತ್ಯುತ್ತಮ ಸಹಕಾರಿ,ಗೌರವ 
ಸಹಕಾರ ಮಹಾಮಂಡಳದಿಂದ ಪ್ರತಿವರ್ಷ ಕೊಡುವ ಅತ್ಯೂತ್ತಮ ಸಹಕಾರಿ ಪ್ರಶಸ್ತಿಯನ್ನು ಶಿರಸಿಯಲ್ಲಿ ನಡೆದ ೫೮ ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಭ್ರಮರಾಂಬ ಸಹಕಾರಿ ಸಂಸ್ಥೆಗೆ ಅತ್ಯುತ್ತಮ ಸಹಕಾರಿ ಪ್ರಶಸ್ತಿ ನೀಡಿ ಗೌರವಿಸಿದೆ. ೨೦೧೬ ಸಹಕಾರ ಮಹಾಮಂಡಳದಿಂದ ಕೊಪ್ಪಳದಲ್ಲಿ ಜರುಗಿದ ೬೩ ನೇ ಸಹಕಾರ ಸಪ್ತಾಹ ಕಾರ್ಯಕ್ರದಲ್ಲಿ ಕಲಬುರ್ಗಿ ವಿಭಾಗದ ಶ್ರೇಷ್ಠ ಸಹಕಾರಿ ಪ್ರಶಸ್ತಿಗೆ ಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ವೀರೇಶ ಸೌದ್ರಿ ಅವರಿಗೆ ಲಭಿಸುವ ಮೂಲಕ ಎರಡು ಪ್ರಶಸ್ತಿಗಳನ್ನು ಪಡೆದುಕೊಂಡ ಹೆಗ್ಗಳಿಕೆ ಶ್ರೀ ಭ್ರಮರಾಂಬ ಸಹಕಾರಿಗೆ ಸಲ್ಲುತ್ತದೆ.


ಚಂದನವಾಹಿನಿಯ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ಗ್ರಾಮ್ಭಿಣಾಭೀವೃದ್ದಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಕುರಿತು ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ. ೨೦೧೦ ನೇ ಇಸ್ವಿಯಲ್ಲಿ ನಬಾರ್ಡ ತಂಡ ಭ್ರಮರಾಂಬ ಸಹಕಾರಿಗೆ ಭೇಟಿ ನೀಡಿ ಸಹಕಾರಿಯ ಕಾರ್ಯ ನಿರ್ವಹಣೆ ಕುರಿತು ಹೈದ್ರಬಾದ ಕರ್ನಾಟಕ ಭಾಗದಲ್ಲಿ ಉತ್ತಮ ಬೆಳವಣಿಗೆ ಹೊಂದಿದ ಸಹಕಾರಿ ಎಂದು ಪ್ರಶಂಸೆಗೆ ಪಾತ್ರವಾಗಿದೆ.
ವಿವಿಧ ಸಂಸ್ಥೆಗಳ ಒಪ್ಪಂದ ಃ ಸಹಕಾರಿಯ ಅಭಿವೃದ್ದಿ ಮತ್ತು ಗ್ರಾಹಕ ಸದಸ್ಯರ ಅಭಿವೃದ್ದಿಗಾಗಿ ಅನೇಕ ಸಂಸ್ಥೆಗಳ ಜೊತೆ ಶ್ರೀ ಭ್ರಮರಾಂಬ ಸಹಕಾರಿ ಸಂಸ್ಥೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಹೊಸ ಧಾಪುಗಾಲು ಇಟ್ಟಿದೆ. ಜೀವವಿಮಾ ನಿಗಮ, ವಾಹನ ಅಪಘಾತ ಕಂಪನಿ, ಜನರಲ್ ಇನ್ಸುರೇನ್ಸ್, ಆರೋಗ್ಯ ವಿಮೆಯನ್ನು ಜನರಿಗೆ ಕೊಡಯವ ವ್ಯವಸ್ಥೆ ಜಾರಿಗೆ ತಂದಿದೆ. ಹಾಗೇಯೆ ಎಲ್.ಐ.ಸಿ ಯ ಜೀವ ವಿಮೆ ಮಾಡುತ್ತಿದ್ದು ರಾಷ್ಟಮಟ್ಟದಲ್ಲಿ ನಮ್ಮ ಸಹಕಾರಿ ಸಂಸ್ಥೆ ಗುರುತಿಸಿಕೊಂಡಿದೆ. ಎಲ್ಲಾ ಶಾಖೆಗಳಲ್ಲಿ ಎಲ್.ಐ.ಸಿ ವಿಮೆ ಕಂತುಗಳನ್ನು ತುಂಬುಬಹುದು. ಸೆಲ್ಕೋ ಸೋಲಾರ ಕಂಪನಿಯಿಂದ ಸೌರ ವಿದ್ಯೂತ್ ಸಹಾಯದಿಂದ ಗೃಹಪಯೋಗಿ ಯೋಜನೆಗಳಿಗೆ ನೆರವು ನೀಡಿದೆ.
ನಿರ್ದೆಶಕರ ಅಧ್ಯಯನ ಹಾಗೂ ಗಣ್ಯರ ಭೇಟಿ

ಭ್ರಮರಾಂಬ ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿ ಉತ್ತಮ ಸಹಕಾರಿ ಸಂಸ್ಥೆಯನ್ನಾಗಿ ರೂಪಿಸಲು ರಾಜ್ಯದ ಮತ್ತು ಅಂತರ ರಾಜ್ಯದ ಉತ್ತಮ ಸಹಕಾರಿ ಸಂಸ್ಥೆಗಳಿಗೆ ನಿರ್ದೆಶಕರು ಭೇಟಿ ನೀಡಿ ಅಧ್ಯಯನ ಮಾಡಿ ಅಲ್ಲಿರುವು ಉತ್ತಮ ಅಂಶಗಳನ್ನು ಅಳವಡಿಸಿಕೊಂಡಿದ್ದಾರೆ. ಅಧ್ಯಯನಕ್ಕಾಗಿ ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯ ಜೊಲ್ಲೆ ಸಮೂಹ ಸಂಸ್ಥೆ, ಬೊರಗಾಂವ್ ಸಹಕಾರಿ ಸಂಘ, ಶಿರಸಿಯ ತೋಟಗರ‍್ಸ್ ಸಂಸ್ಥೆ, ಮಹಾರಾಷ್ಟ್ರ ದ ಬುಲ್ಡೋನ್, ಗುಜರಾತನ ಆನಂದ ಜಿಲ್ಲೆಯ ಅಮುಲ್ ಸಂಸ್ಥೆ ಗೆ ಭೇಟಿ ನೀಡಿ ಅಧ್ಯಯನ ಮಾಡಿ ಅಲ್ಲಿರುವ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಇದೀಗ ಶ್ರೀ ಭ್ರಮರಾಂಬ ಸಹಕಾರಿ ಸಂಸ್ಥೆಯ ಬಗ್ಗೆ ಅಧ್ಯಯನ ಮಡಲು ಕರ್ನಾಟಕ ಸೇರಿದಂತೆ ಹಲವು ರಾಜ್ಯದ ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿಯವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಹೋಗುವ ಮಟ್ಟಕ್ಕೆ ಸಂಸ್ಥೆ ಬೆಳೆದು ನಿಂತಿದೆ.
ಸಚಿವ ಮಹಾದೇವ ಪ್ರಸಾದ ಭೇಟಿ ಃ ಕರ್ನಾಟಕ ರಾಜ್ಯದ ಸಹಕಾರ ಸಚಿವರಾದ ಮಹಾದೇವ ಪ್ರಸಾದ ಅವರು ಶ್ರೀ ಭ್ರವ್ಮರಾಂಬ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಯ ರಾಯಚೂರು ಶಾಖೆ ಉದ್ಘಾಟನೆ.
*ಸಿದ್ದೇಶ್ವರ ಸ್ವಾಮೀಜಿಗಳ ಶುಭ ಹಾರೈಕೆ ಭೇಟಿ*
ಮಸ್ಕಿಯಲ್ಲಿ ಒಂದು ತಿಂಗಳವರೆಗೆ ವಿಜಯಪುರ ಜ್ಞಾನ ಯೋಗಶ್ರಮದ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳಿಂದ ಪ್ರವಚನ ನಡೆಸುತ್ತಿದ್ದಾಗ ಶ್ರೀ ಭ್ರಮರಾಂಬ ಪತ್ತಿನ ಸಹಕಾರಿ ಸಂಸ್ಥೆಗೆ ಭೇಟಿ ನೀಡಿ ಶುಭ ಹಾರೈಸಿಸಿದ್ದಾರೆ.

ಮಾದರಿ ಸಂಸ್ಥೆ , ಸಮರ್ಥ ಆಡಳಿತ ಮಂಡಳಿ
ಕಳೆದ ೨೨ ವರ್ಷದಿಂದ ಆರಂಭವಾದ ಶ್ರೀ ಭ್ರಮರಾಂಬ ಪತ್ತಿನ ಸಹಕಾರ ಸಂಘ ರಾಜ್ಯದಲ್ಲಿ ಮಾದರಿ ಸಂಸ್ಥೆಯಾಗಿದ್ದು ಈ ಸಂಸ್ಥೆಯ ಅಭಿವೃದ್ದಿಯಿಂದ ಅನೇಕರು ಪ್ರೇರಣೆ ಪಡೆದುಕೊಂಡು ರಾಯಚೂರು ಜಿಲ್ಲೆ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಜನ ಭೇಟಿ ನೀಡಿ ಹೊಸ ಸಹಕಾರ ಸಂಘಗಳನ್ನು ಪ್ರಾರಂಭಿಸಿದ್ದಾರೆ.
ಸಾಮಾಜಿಕ ಕಳಕಳಿಯನ್ನು ಹೊಂದಿರುವ ಸಹಕಾರಿಯ ಅಧ್ಯಕ್ಷ ಡಾ.ಶಿವಶರಣಪ್ಪ ಇತ್ಲಿ ಭ್ರಮರಾಂಬ ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೆಶಕರು, ಸಿಬ್ಬಂದಿಗಳು ಮತ್ತು ವಿಶೇಷವಾಗಿ ಸದಸ್ಯರು ಭ್ರಮರಾಂಬ ಪರಿವಾರ ಎಂತಲೇ ಗುರುತಿಸುವ ಆದರ್ಶ ವೈದ್ಯರಾಗಿದ್ದಾರೆ. ಭ್ರಮರಾಂಬ ಸಹಕಾರಿ ಸಂಸ್ಥೆಗೆ ಹಿಂದಿನ ಆಡಳಿತ ಮಂಡಳಿಗೆ ಬೆನ್ನುಲೇಬುಗಾಗಿದ್ದು ಇದೀಗ ಅವರೇ ಅದರ ನೇತೃತ್ವ ವಹಿಸಿಕೊಂಡಿದ್ದಾರೆ.
ಉಪಾಧ್ಯಕ್ಷ ಪಂಪಣ್ಣ ಗುಂಡಳ್ಳಿ ಯುವ ಉದ್ಯಮಿಯಾಗಿದ್ದು ಸಹಕಾರಿ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.
ಸಹಕಾರಿ ಸಂಸ್ಥೆಯ ಆಡಳಿತ ನಿರ್ವಹಣೆಯಲ್ಲಿ ಪ್ರಧಾನ ವ್ಯವಸ್ಥಾಪಕ ವೀರೇಶ ಹಿರೇಮಠ ಸಂಸ್ಥೆಯ ಬೆಳವಣಿಗೆಗಾಗಿ ಅನೇಕ ಯೋಜನೆ ರೂಪಿಸಿ ಸಿಬ್ಬಂದಿಗಳ ಮದ್ಯೆ ಸೌಹಾರ್ದತೆ ಕಪಾಡಿಕೊಂಡು ಬರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಭ್ರಮರಾಂಬ ಸಹಕಾರಿ ಸಂಸ್ಥೆ ಆಡಳಿತ ಮಂಡಳಿ ಒಂದು ವಿಶಿಷ್ಠ ಮಾದರಿಯದು. ಈ ಸಂಸ್ಥೆಯಲ್ಲಿ ವರ್ತಕರು, ಉದ್ಯಮಿಗಳು, ವೈದ್ಯರು, ಪತ್ರಕರ್ತರು, ಉಪನ್ಯಾಸಕರು, ಬ್ಯಾಂಕ್ ಉದ್ಯೋಗಿಗಳು, ಖಜಾನೆ ಇಲಾಖೆಯವರು, ಆರ್ಥಿಕ ತಜ್ಞರನ್ನು ಒಳಗೊಂಡ ಎಲ್ಲಾ ಕ್ಷೇತ್ರದಲ್ಲಿರುವ ಉತ್ತಮ ವ್ಯಕ್ತಿಗಳು ನಿರ್ದೇಶಕರಾಗಿ, ಸಲಹಾ ಸಮಿತಿ ಸದಸ್ಯರಾಗಿ ಕಾಲಕಾಲಕ್ಕೆ ಮಾರ್ಗದರ್ಶನ ಮಾಡುವ ಮೂಲಕ ಈ ಸಂಸ್ಥೆ ಅಗಾಧವಾಗಿ ಬೆಳವಣಿಗೆ ಹೊಂದಲು ಸಹಕರಿಸಿದ್ದಾರೆ.

ಆಡಳಿತ ಮಂಡಳಿ ಹಾಕಿಕೊಂಡ ಯೋಜನೆಗಳು
* ಹಳ್ಳಿಗಳಿಗೆ ತೆರಳಿ ಅಲ್ಲಿಯ ಜನರಿಗೆ ಸಹಕಾರ ಸಂಘದ ವ್ಯವಹಾರ/ಸೌಲಭ್ಯಗಳ ಕುರಿತು ಮಾಹಿತಿ ನೀಡುವುದು ಮತ್ತು “ಸಹಕಾರಿಯ ನಡಿಗೆ ಹಳ್ಳಿಗಳ ಕಡೆಗೆ” ಎಂಬ ಯೋಜನೆಯಡಿಯಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹ & ಸಾಲ ಸೌಲಭ್ಯ ನೀಡುವುದು.

 

* ಅತ್ಯಂತ ಕಡು ಬಡ ಮಹಿಳೆಯರಿಗೆ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಿ, ಸ್ವಾವಲಂಬನೆ ಜೀವನ ನಡೆಸಲು ನೆರವು ನೀಡುವುದು.

* ಮಾನ್ವಿ, ಶಹಪೂರ, ದೇವದುರ್ಗ, ಗಂಗಾವತಿ, ಹೊಸಪೇಟೆ, ಸಿರಿವಾರ, ಬಳ್ಳಾರಿ, ಕೊಪ್ಪಳ ಮತ್ತು ಹುಣಸಗಿಯಲ್ಲಿ ಶಾಖೆಗಳನ್ನು ಪ್ರಾರಂಭಿಸುವುದು.
* ಸಾಲಗಾರ ಸದಸ್ಯರಿಗೆ ಅಥವಾ ಸದಸ್ಯರಿಗೆ ವಿಮೆ ಮಾಡಿಸುವ ಕುರಿತು.
* ರೈತರಿಗೆ ಪರ್ಯಾಯ ಬೆಳೆ ಬೆಳೆಯಲು ಕೃಷಿ ತಜ್ಞರಿಂದ ಮಾರ್ಗದರ್ಶನ ಮತ್ತು ತರಬೇತಿ ನೀಡುವುದು.
* ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿದ ಸಹಕಾರಿಯ ಸದಸ್ಯರ ಮಕ್ಕಳಿಗೆ ಪುರಸ್ಕರಿಸುವುದು ಮತ್ತು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು.
* ಸೋಲಾರ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಾಲ ಸೌಲಭ್ಯ ಒದಗಿಸುವುದು.
* ಐ.ಬಿ.ಪಿ.ಎಸ್ ಮಾದರಿಯಲ್ಲಿ ಬ್ಯಾಂಕಿAಗ್/ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅಭ್ಯರ್ಥಿಗಳಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪಿಸುವುದು.
* ಕೋವಿಡ್ ನಂತರ ವ್ಯವಹಾರ ಅಭಿವೃದ್ಧಿ ಹಾಗೂ ಹೊಸ ಉದ್ಯೋಗ ಅವಕಾಶಗಳ ಕುರಿತು ಮಾಹಿತಿ ಶಿಬಿರ ನಡೆಸುವುದು.
ರಿ) ಭ್ರಮರಾಂಬ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ, ಸಾಮಾಜಿಕ ಸೇವೆ, ವಾಹನ ಚಾಲಕರಿಗೆ ತರಬೇತಿ ನೀಡುವುದು. ‘ಸುರಕ್ಷಿತ ವಾಹನ ಚಲಾವಣೆ’ ಕೈಪಿಡಿ ಜಾರಿಗೆ ತರುವುದು. ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಎದುರಿಸುವುದು ಹೇಗೆ? ಎಂಬುದರ ಕುರಿತು ಕಾರ್ಯಕ್ರಮ ರೂಪಿಸುವುದು. ಸದಸ್ಯ ಗ್ರಾಹಕರಿಗೆ, ವ್ಯಾಪಾರಸ್ಥರಿಗೆ, ಉದ್ಯೋಗಸ್ಥರಿಗೆ ವೃತ್ತಿ ತರಭೇತಿ ಕಾರ್ಯಾಗಾರ ಏರ್ಪಡಿಸುವುದು. ಶಾಖೆಗಳಲ್ಲಿ ಬೇಸಿಗೆ ಕಾಲದಲ್ಲಿ ಅರವಟ್ಟಿಗೆ ವ್ಯವಸ್ಥೆ ಮಾಡುವುದು, ಸ್ಥಳೀಯ ಸಂಸ್ಥೆಗಳ ಜೊತೆ ಸೇರಿ ಉಚಿತ ಆರೋಗ್ಯ ಶಿಬಿರ, ನೇತ್ರ ಚಿಕಿತ್ಸಾ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು. ಇತ್ಯಾದಿಗಳನ್ನು ಕೈಗೊಳ್ಳುವುದು.

 

Don`t copy text!