ಬೋಧಿವೃಕ್ಷದ ಕೆಳಗೆ
ಬುದ್ಧ ಪೂರ್ಣಿಮೆಯ ದಿನ
ಎದ್ದ ನಟ್ಟಿರುಳು ಅರಮನೆ ತೊರೆದು
ಬಿದ್ದ ಜಗದ ಅಜ್ಞಾನದ ಮಡುವಲ್ಲಿ
ಗೆದ್ದ ಜಗಕ್ಕೆ ಬೆಳದಿಂಗಳ ಚೆಲ್ಲಿ
ಶುದ್ಧೋಧನ ಮಾಯಾದೇವಿಯ
ಸುಂದರ ಸುಪುತ್ರ
ಸೆಳೆದ ಮೋಹದ ಬಲೆಗೆ
ಸೆಳೆವು ಇರುವುದೆಂದರುವಿ
ಬೆಳಕು ನೀಡುವ
ಬೆಳ್ಗೋಡೆ ರಾಜವೈಭೋಗ
ಬಿಸಾಡಿ ಇವನೊಬ್ಬ ಎದ್ದ
ಬೂದಿಮುಚ್ಚಿದ ಕೆಂಡದಂತೆ ಬದುಕು
ಸಿದ್ದಿ ಪಡೆದ ಸಿದ್ಧಾರ್ಥ ನಾಗಲು
ಶವ ,ವೃದ್ದ ,ರೋಗಿ
ಸನ್ಯಾಸಿ ಒಳಿತು ಪಥಮನ್ನರಿಸಿ
ಸಾವಿಲ್ಲದ ಮನೆಯ ಸಾಸಿವೆ
ಮೂಲೆ ಮೂಲೆಯ
ಮನೆಯ ಕದವ ತೆರೆಸಿ
ಅಜ್ಞಾನ ಅಂಧಕಾರದ ತೆರೆ ಸರಸಿ
ಮೋಕ್ಷ ಮಾರ್ಗದಿ
ಆಸೆಯೇ ದುಃಖಕ್ಕೆ ಕಾರಣ ಎಂದರುವಿ
ಬೋಳಾದ ದೇಹದಲ್ಲಿ
ಮೋಕ್ಷ ಪಥವನರಿಸಿ
ಬೋಧಿವೃಕ್ಷದ ಕೆಳಗೆ ನೀ ಹಸಿರು ಹಾಸಿ ಹೆಸರು ಬೆಳಗಿ ಹೋದೆ
–ಶ್ರೀಮತಿ ಸಾವಿತ್ರಿ ಕಮಲಾಪೂರ ಮೂಡಲಗಿ