ಭಕ್ತಿ ಎನ್ನುವ ಆರೋಹಣ ಪರ್ವ

ಭಕ್ತಿ ಎನ್ನುವ ಆರೋಹಣ ಪರ್ವ

 

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹನ್ನೆರಡನೆಯ ಶತಮಾನ ಒಂದು ಪ್ರಮುಖ ಫಲವಾಗಿ ನಮ್ಮೆದುರು ತೆರೆದುಕೊಳ್ಳುತ್ತದೆ. ಅದುವೆ ಶರಣರ ಸಾಮಾಜಿಕ ಕಳಕಳಿ, ಆಧ್ಯಾತ್ಮಿಕ ಒಲವು ನಂಬಿಕೆ, ಕೊನೆಗೆ ಸಮಾನತೆಗೆಗಾಗಿ ಕ್ರಾಂತಿ. ಇವೆಲ್ಲವೂ ಸಾಮಾನ್ಯವಾದವುಗಳಲ್ಲ. ಇವುಗಳೆಲ್ಲದರ ಒಟ್ಟು ಮೊತ್ತವನ್ನು ವಚನ ಸಾಹಿತ್ಯದಲ್ಲಿ ಕಾಣುತ್ತೇವೆ.
ವಚನ ಸಾಹಿತ್ಯದಲ್ಲಿ ಸ್ತ್ರೀಯರ ಪಾತ್ರ ಗಣನೀಯವಾದುದು. ವೇದ- ಉಪನಿಷತ್‌ಗಳ ಅಭ್ಯಾಸದಿಂದ ಅಸ್ಪೃಶ್ಯತೆಯ ರೂಪದಲ್ಲಿ ಸ್ತ್ರೀಯರನ್ನು ಸೀಮಿತ ದೃಷ್ಟಿಯಲ್ಲಿ ನೋಡುತ್ತಿದ್ದ ಅಂದಿನ ಸಮಾಜದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆಯನ್ನು ತಂದುಕೊಟ್ಟು ಅವರನ್ನು ಎತ್ತರೇಕ್ಕೆರಿಸಿದವರು ವಚನಕಾರರು.

ಶರಣರ ಅನುಭವ ಮಂಟಪದಲ್ಲಿ ಮಹಿಳೆಯರು ಭಾಗವಹಿಸಿ ಚರ್ಚೆಗೆ, ಚಿಂತನೆಗೆ ಮಹತ್ವದ ಅವಕಾಶ ಸಿಕ್ಕು, ತಮ್ಮ ತಮ್ಮ ಅನುಭವಗಳನ್ನು ವಚನಗಳಲ್ಲಿ ರಚಿಸಿ ಹೆಸರಾದರು. ಅವರ ವಚನಗಳಲ್ಲಿ ಭಕ್ತಿಯ ಪರಾಕಾಷ್ಠೆ, ಸಾಮಾಜಿಕ ಕಳಕಳಿ, ಕಾಯಕ ನಿಷ್ಠೆಯಂತಹ ಆಧ್ಯಾತ್ಮಿಕ ಸಂವೇದನೆಗಳು ವಚನ ರೂಪದಲ್ಲಿ ಹೊರಹೊಮ್ಮಿದವು. ವಚನಕಾರ್ತಿಯರಲ್ಲಿ ಅತ್ಯಂತ ಪ್ರಮುಖಳಾದವಳು ಅಕ್ಕಮಹಾದೇವಿ. ಅಕ್ಕಮಹಾದೇವಿ ಹುಟ್ಟಿ ಬೆಳೆದ ಊರು ಈಗಿನ ಶಿವಮೊಗ್ಗ ಜಿಲ್ಲೆಯ ಉಡತಡಿ. ಅದೊಂದು ಪ್ರಾಚೀನ ಶೈವಕೇಂದ್ರ. ಅಕ್ಕ ಶಿವಭಕ್ತಿಯ ಪರಿಸರದ ಪ್ರದೇಶದಲ್ಲಿ ಬೆಳೆದು ಭಕ್ತಿ ಸಂಪನ್ನಳಾದವಳು. ಬಾಲ್ಯದಲ್ಲಿಯೇ ಅಲ್ಲಿರುವ ಗುರುವಾಡಿ ಮಠದಲ್ಲಿ ಅಕ್ಷರಭ್ಯಾಸ , ಕಾವ್ಯ – ಪುರಾಣಗಳ ಅಭ್ಯಾಸವನ್ನು ಮಾಡಿದಳು.

ಜ್ಞಾನದ ಹಸಿವಿಗೆ ಬೆನ್ನಹತ್ತಿದವಳು. ಭಕ್ತಿಯ ಪರಾಕಾಷ್ಟತೆಗೆ ಮುನ್ನುಗ್ಗುತ್ತಿದ್ದವಳು. ತಂದೆ- ತಾಯಿಗಳಿಂದ ದೊರೆತ ಭಕ್ತಿ,
ಗುರುಗಳಿಂದ ಪಡೆದ ಜ್ಞಾನದಿಂದ ಸ್ವಚಿಂತನೆಗೊಳಪಡುತ್ತ ತನ್ನ ಕನಸು ಮನಸ್ಸಿನಲ್ಲಿ ಮೆಚ್ಚಿಕೊಂಡಿರುವ ಇಷ್ಟದೈವವಾದ ಮಲ್ಲಿಕಾರ್ಜುನನ ಜೊತೆ ಯಾವತ್ತೂ ಸಂಭಾಷಣೆಯಲ್ಲಿಯೇ ತೊಡಗಿಕೊಂಡಿರುವವಳು.
ಚಿಕ್ಕಂದಿನಿಂದಲೂ ಶಿವಭಕ್ತನಾಗಿ ಬೆಳೆದು ಲೌಕಿಕ ಸುಖಭೋಗಗಳನ್ನು ನಿರಾಕರಿಸಿ ಚೆನ್ನಾಮಲ್ಲಿಕಾರ್ಜುನನ ಭಕ್ತಿಯಲ್ಲಿ ತನ್ನ ಪೂರ್ಣ ಭಾವವನ್ನು ಜ್ಞಾನದ ಮೂಲಕ ಕಟ್ಟಿಕೊಂಡಾಕೆ ಅಕ್ಕ. ಅವಳ ಜ್ಞಾನ ತತ್ವಜ್ಞಾನ ಅವಳ ವಚನಗಳಿಂದ ರಚಿತವಾದ ಯೋಗಾಂಗ ತ್ರಿವಿಧಿ ಮೂಲಕ ಅರಿತುಕೊಳ್ಳಬಹುದಾಗಿದೆ. ಅಕ್ಕ ರಚಿಸಿದ ವಚನಗಳು ತ್ರಿಪದಿಗಳು. ಆಕೆಯ ಜೀವನದ ಜ್ಞಾನ- ಭಕ್ತಿಯ ಪರಾಕಾಷ್ಟತೆಯನ್ನು ಎತ್ತಿ ತೋರಿಸುತ್ತದೆ. ಇವು ಯಾವತ್ತೂ ಅವಳಿಗೆ ವಿಶಾಲ ವಿಹಂಗಮ ನೋಟ ನೋಡುವ ಆಕಾಂಕ್ಷಿಯಂತೆ, ತನ್ನ ಮೋಹದ ಚೆನ್ನಮಲ್ಲಿಕಾರ್ಜುನನಂತೆ ಎಂದು ಮನದುಂಬಿ ಹೇಳಿದ್ದಾಳೆ ಅಕ್ಕ.


ಶ್ರೀಮತಿ ರೇಖಾ ಶಿ ವಡಕಣ್ಣವರ್ ಲಕ್ಷ್ಮೇಶ್ವರ

Don`t copy text!