ಡಾ.ಜಯಶ್ರೀ ದಂಡೆ‌ ನೇರ ಮಾತು, ಮೃದು ಸ್ವಭಾವ

ನಾವು- ನಮ್ಮವರು

ಡಾ.ಜಯಾಶ್ರೀ ದಂಡೆ

ಕನ್ನಡ ವಚನ ಸಾಹಿತ್ಯದಲ್ಲಿ ಬೆಡಗಿನ ವಚನಗಳ ಸಂಶೋಧನೆಯಲ್ಲಿ ಹೆಸರು ಮಾಡಿದ ಡಾ. ಜಯಶ್ರೀ ದಂಡೆಯವರು ಹೆಸರಾಂತ ಜಾನಪದ ವಿದ್ವಾಂಸರು, ಪ್ರಾದ್ಯಾಪಕರೂ, ಸಂಶೋಧಕರು, ಬರಹಗಾರರಾದ ಡಾ. ವೀರಣ್ಣ ದಂಡೆ ಸರ್ ಅವರ ಧರ್ಮಪತ್ನಿ. ಈ ದಂಪತಿಗಳನ್ನು ನೋಡಿ ದಾಗೆಲ್ಲಾ ಬಸವಣ್ಣ ನವರ ವಚನ ನೆನಪಾಗುತ್ತದೆ.

ಛಲಬೇಕು ಶರಣಂಗೆ | ಪರಧನ ಒಲ್ಲೆನೆಂಬ ||
ಛಲಬೇಕು ಶರಣಂಗೆ | ಪರಧನ ಒಲ್ಲೆನೆಂಬ ||
ಛಲಬೇಕು ಶರಣಂಗೆ | ಪರದೈವ ಒಲ್ಲೆನೆಂಬ ||
ಛಲಬೇಕು ಶರಣಂಗೆ | ಗುರುಲಿಂಗ ಜಂಗಮ ಒಂದೇ ಎಂಬ ||
ಛಲಬೇಕು ಶರಣಂಗೆ | ಪ್ರಸಾದ ದಿಟವೆಂಬ ||
ಛಲವಿಲ್ಲದವರ ಮೆಚ್ಚ | ನಮ್ಮ ಕೂಡಲ‌ ಸಂಗಮ ದೇವ ||

ಈ ದಂಪತಿಗಳು ಶರಣರ ಛಲ ಆದರ್ಶಗಳನ್ನು ಸಾಹಿತ್ಯ ವ್ರತವೆಂದು ಸ್ವೀಕರಿಸಿದವರು. ಬಸವಣ್ಣ ಮತ್ತು ನೀಲಾಂಬಿಕೆಯ ಆದರ್ಶ ದಾಂಪತ್ಯ ಸತಿ ಪತಿ ಭಾವದ ಪ್ರೀತಿ ವಿಶ್ವಾಸ ಚಾರಿತ್ರಿಕ ಕೌಟುಂಬಿಕ ಸಂಬಂದಗಳು ನೆನಪಾಗುತ್ತವೆ.

ಶ್ರೀಮತಿ ಡಾ.ಜಯಶ್ರೀ ದಂಡೆಯವರು ಕನ್ನಡ ಕ್ಷೇತ್ರದ ದಿಟ್ಟ ಸೃಜನ ಶೀಲ ಬರಹಗಾರರು. ಗುಲ್ಬರ್ಗ ವಿಶ್ವವಿದ್ಯಾಲಯ ದಲ್ಲಿ M. A. ತರಗತಿಗಳಿಗೆ ಭೋದನೆ ಮಾಡಿದ ಜನಪ್ರಿಯ ಪ್ರಾದ್ಯಾಪಕರು. ವಿದ್ಯಾರ್ಥಿಗಳನ್ನು ಆಕರ್ಷಿಸುವಂತ ಭೋಧನೆ ನಿವೇದನೆ ನೇರವಾದ ಮಾತು ಮ್ರುದುವಾದ ಸ್ವಭಾವ. ಇವರು ತಮ್ಮ ಉಪನ್ಯಾಸದ ಉದ್ದಾಕ್ಕೂ ನೀಡುವ ಉದಾಹರಣೆಗಳು ತೌಲನಿಕ ದೃಷ್ಟಿಕೋನ.

ಪ್ರಥಮವಾಗಿ ನಮಗೆ ಆಕರ್ಶಿಸುವುದು ಡಾ.ಜಯಶ್ರೀ ಅಕ್ಕಾ ಅವರ ಸರಳ ಹಾಗು ನಿರಾಡಂಬರ ವ್ಯಕ್ತಿತ್ವ. ಅವರ ನಡೆನುಡಿಯಲ್ಲಿ ಉಡುಗೆ ತೊಡಿಗೆಯಲ್ಲಿ, ಮೃದುವಾದ ಮುಗುಳ್ನಗೆಯಲ್ಲಿ ಪರಿಶುಭ್ರತೆಯಿಂದ ಕೂಡಿದ ಆದರ ಗೌರವಗಳನ್ನು‌ ಕಾಣಬಹುದು. ಇವರ ಕೃತಿಗಳನ್ನು ನೋಡಿದಾಗ ದೈತ್ಯ ಪ್ರತಿಭೆ. ಇವರ ನಮ್ರತೆಯು ಜ್ಞಾನ ಪಾಂಡಿತ್ಯ ಪ್ರತಿಭೆ ಗಳಿಗೆ ಹೆಚ್ಚಿನ ಮೆರಗನ್ನು ನೀಡಿದೆ. ಇವರ ಬರವಣಿಗೆಯಲ್ಲಿ ವೈವಿದ್ಯತೆ ಇದೆ. ಸೃಜನ ಸಂಶೋಧನೆ ವಚನಗಳ ಆಕರ ವಚನ ಸಾಹಿತ್ಯ ವಿಮರ್ಶೆ, ಸಂಪಾದನೆ, ಪತ್ರಿಕೆಗಳಿಗೆ ಸಂಪಾದಕತ್ವ ಹೀಗೆ ಬಹುಮುಖಿ ಆಯಾಮದ ಮೂಲಕ ಅವರು ತಮ್ಮನ್ನು ತೊಡಗಿಸಿಕೊಂಡದ್ದು ಆತ್ಮ ನಿಷ್ಠೆ ತಮ್ಮ ಅಂತಃಸ್ಸತ್ವದಿಂದ ಪುಷ್ಟಿಗೊಂಡು ಪರಿಪಕ್ವತೆ ಯತ್ತ ಸಾಗುವುದು ಅಷ್ಟೇ ಗಮನಾರ್ಹ.

ಡಾ. ಜಯಶ್ರೀ ದಂಡೆಯವರ ತಂದೆ ಸಿದ್ದರಾಮಪ್ಪ ಅಂಗಡಿ. ತಾಯಿ ಸುಮಿತ್ರಾಬಾಯಿ. ಈ ದಂಪತಿಗಳ ಮಗಳಾಗಿ 05.03.1958 ಇಲಕಲ್ ನಲ್ಲಿ ಜನಿಸಿದರು. ಇವರು ತಮ್ಮ ಸಂಪೂರ್ಣ ವಿದ್ಯಾಬ್ಯಾಸವನ್ನು ಇಲಕಲ್ಲಲ್ಲಿ ಮುಗಿಸಿ ಮುಂದೆ ಉನ್ನತ ವಿದ್ಯಾಭ್ಯಾಸವನ್ನು ಪೂರೈಸಿ ಡಾ. ವೀರಣ್ಣ ದಂಡೆಯವರನ್ನು ವಿವಾಹವಾಗಿ ಗುಲ್ಬರ್ಗಕ್ಕೆ ಬರುತ್ತಾರೆ. 1987 ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಬೆಡಗಿನ ವಚನಗಳು ಈ ವಿಷಯದ ಕುರಿತು Ph. D. ಪಡೆದರು. 1995 ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 31.05.2019 ರವರೆಗೆ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿದರು. ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅದ್ಯಯನ ಸಂಸ್ಥೆಯಲ್ಲಿ ದಕ್ಷ ನಿರ್ದೇಶಕರಾಗಿ ಕೆಲಸ ಮಾಡಿ ಯಶಸ್ಸನು ಪಡೆದಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆ ಬೃಹತ್ ವಿಸ್ತಾರತೆಯನ್ನು ಪಡೆದಿದೆ. ಇವರ 58 ಕ್ಕೂ ಹೆಚ್ಚು ಗ್ರಂಥಗಳು ಪ್ರಕಟವಾಗಿವೆ.

ಕನ್ನಡ ಅದ್ಯಯನ ಸಂಸ್ಥೆ, ಗುಲ್ಬರ್ಗ ಬಸವಾದಿ ಶರಣರ ಸಾಹಿತ್ಯ ಕೇಂದ್ರ, ಬಸವ ಸಮಿತಿಯ ಅಕ್ಕನ ಬಳಗದ ಕಾರ್ಯಾದ್ಯಕ್ಷರು, ಕರ್ನಾಟಕ ಜಿಲ್ಲಾ ಕುಟುಂಬ ನ್ಯಾಯಾಲಯ ಆಪ್ತ ಸಮಾಲೋಚಕರಾಗಿ ಸೇವೆಯನ್ನು ಮಾಡಿದ್ದಾರೆ.

ಸಂಶೋಧನಾ ಯೋಜನೆಯಡಿಯಲ್ಲಿ ಅನೇಕ ಸಂಶೋಧನಾ ಅಗತ್ಯತೆಯ ಬರಹಗಳು ಮತ್ತು ಅನೇಕ ವಿದ್ಯಾರ್ಥಿಗಳಿಗೆ Ph. D ಮಾರ್ಗದರ್ಶಕರಾಗಿ ಸಂಶೋಧನಾ ವಿದ್ಯಾರ್ಥಿಗಳಿಗೆ ಅಚ್ವುಮೆಚ್ಚಿನ ಮಾರ್ಗದರ್ಶಕರೆಂಬ ಗೌರವವನ್ನು ಪಡೆದಿದ್ದಾರೆ. ಸಂಂಶೋಧನೆಯಲ್ಲಿ “ಶರಣ ಸ್ಮಾರಕಗಳ ಕ್ಷೇತ್ರಕಾರ್ಯ” ಹಾಗೂ ಪ್ರಕಟಣಾ ಯೋಜನೆ 2009-12 ಸರಕಾರದ ಅನುದಾನದ ಮೂಲಕ ಕೆಲಸವನ್ನು ಮಾಡಿದ್ದಾರೆ.

ವಿವಿಧ ಸಾಹಿತ್ಯ ಸಮ್ಮೇಳನದ ಅದ್ಯಕ್ಷರಾಗಿ ನಿರರ್ಗಳವಾಗಿ ಉಪನ್ಯಾಸವನ್ನು ನೀಡಿದ್ದಾರೆ. ಅನೇಕ ಸಾಹಿತ್ಯಿಕ ರಾಜ್ಯ ಮತ್ತು ಅಖಿಲ ಭಾರತ ರಾಷ್ಟ್ರೀಯ ವಿಚಾರ ವೇದಿಕೆಗಳಲ್ಲಿ ಸಾಕಷ್ಟು ಪ್ರಬಂದ ಮಂಡನೆ ಮಾಡಿದ್ದಾರೆ.

ಇವರ ಆಸಕ್ತಿಯ ಅಭ್ಯಾಸ ಬರವಣಿಗೆ ಮತ್ತು ವಚನ ಸಾಹಿತ್ಯವಾಗಿದೆ. ಮುಖ್ಯ ಕೃತಿಗಳು

1. ವಚನಗಳಲ್ಲಿ ಶೈವ ಹಾಗು ವೀರಶೈವ
2. ವಚನ ಕಾರ್ತಿ ರಾಯಮ್ಮ.
3. ಶರಣರ ಆರ್ಥಿಕ ಚಿಂತನೆ.

ಶರಣರ ಸ್ವತಂತ್ರ ವಿಚಾರ ದರ್ಶನವನ್ನು ಒರೆ ಹಚ್ವುವಲ್ಲಿ ಹೆಚ್ಚು ಯಶಸ್ವಿಯಾಗಿವೆ. ವಚನ ಸಾಹಿತ್ಯ, ಧರ್ಮ ಸಿದ್ದಾಂತಗಳ ಆಳವಾದ ಅದ್ಯಯನ ಗಳಿಂದ ಪ್ರಮುಖ ಬರಹಗಾರ ಲೇಖಕಿ ಎಂದು ಗುರುತಿಸಿ ಕೊಂಡಿದ್ದಾರೆ.

ಕರ್ನಾಟಕದ ಅನೇಕ ಮಠಮಾನ್ಯಗಳು ಇವರ ವಿದ್ವತ್ತಿಗೆ ಗೌರವವನ್ನು ಸಮರ್ಪಿಸಿ ಕೃತಜ್ಞತೆ ತೋರಿದ್ದಾರೆ.

58 ಕ್ಕೂ ಹೆಚ್ಚು ಗ್ರಂಥ ಪ್ರಕಟಣೆ, 16 ಕ್ಕೂ ಹೆಚ್ಚು ಸಾಹಿತ್ಯ ಗೌರವ, ವಿದ್ವತ್ ವಲಯದಲ್ಲಿ ಜನಪ್ರಿಯವಾಗಿವೆ. ಸೃಜನಶೀಲ ಸಾಹಿತ್ಯ ಆಧುನಿಕರ ಜೀವನ ಚರಿತ್ರೆ, ವಚನ ಸಾಹಿತ್ಯ, ವ್ಯಾಖ್ಯಾನ ಕೃತಿಗಳು, ಸಾಹಿತ್ಯ ಸಂಪಾದನೆಗಳು, ದಂಡೆ ದಂಪತಿಗಳು ಜೊತೆಯಾಗಿ ಪೂರೈಸಿದ ಬೃಹತ್ ವಚನ ಸಂಪುಟಗಳು. ವಚನ ಸಾಹಿತ್ಯದಲ್ಲಿ ಮೌಲಿಕ ಕೃತಿಗಳಾಗಿವೆ. ಇತ್ತೀಚಿಗೆ ಕರ್ನಾಟಕ ಸರಕಾರ ನೀಡುವ 5 ಲಕ್ಷ ಹಣದ “ಅಕ್ಕ ಪ್ರಶಸ್ತಿ” ಗೆ ಆಯ್ಕೆಯಾದರು.

ಬದುಕು ಮತ್ತು ಬರಹ ಬೇರೆ ಬೇರೆ ಎಂದು ಯಾವತ್ತೂ ಭಾವಿಸದೆ ಡಾ. ಜಯಶ್ರೀ ಮೇಡಂ ಅವರು ಬದುಕು ಹಾಗೂ ಬರಹಗಳನ್ನು ಸತ್ವಪೂರ್ಣವಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಇಂಥಹ ಪವಿತ್ರ ಸಾಹಿತ್ಯ ಚೇತನಕ್ಕೆ ಶಿವ ಚಿಂತನಕ್ಕೆ ನಮ್ಮ “ಅಕ್ಕನ ಅರಿವು” ಗುಂಪಿನಿಂದ ಹೃದಯ ಪೂರ್ವಕ ಅಭಿನಂದನೆಗಳು.

ಡಾ. ಸರ್ವಮಂಗಳ ಸಕ್ರಿ.
ರಾಯಚೂರು.

Don`t copy text!