ಕಾಯಕ ಸಂಸ್ಕೃತಿಯ ಮಹತ್ವ ಸಾರಿದ ಶರಣ ನುಲಿಯ ಚೆಂದಯ್ಯ- ನಟರಾಜ್ ಸೋನಾರ್
e-ಸುದ್ದಿ ಕುಷ್ಟಗಿ
ಕುಷ್ಟಗಿ ನಗರದ ಬಸವ ಭವನದಲ್ಲಿ ಸಾಪ್ತಾಹಿಕ ವಚನ ಉಪನ್ಯಾಸ ಮಾಲೆಯಡಿ ನಡೆದ ಅಮುಭಾವ ಕಾರ್ಯಕ್ರಮದಲ್ಲಿ ದಲಿತ ವಚನಕಾರ ನುಲಿಯ ಚೆಂದಯ್ಯ ನವರು ಕಾಯಕ ಸಂಸ್ಕೃತಿಯನ್ನು ಪ್ರಚುರ ಪಡಿಸಿದ ನೇರ ನಿಷ್ಠುರ ವಚನಕಾರರಾಗಿದ್ದರು ಎಂದು ಕುಷ್ಡಗಿ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ನಟರಾಜ್ ಸೋನಾರ್ ಪ್ರತಿಪಾದಿಸಿದರು
ಶನಿವಾರ ಬಸವ ಭವನದ ಸಭಾಂಗಣದಲ್ಲಿ ನಡೆದ ವಾರದ ಶರಣರ ಅನುಭಾವದಡಿ ಮಾತಾನಾಡಿದರು ಶರಣ ನುಲಿಯ ಚೆಂದಯ್ಯ ನವರ ವಚನಗಳ ಅಂಕಿತ ಚೆಂದೆಶ್ವರ ಎಂದು ಅವರ ೪೮ ವಚನಗಳು ಲಬ್ಯವಾಗಿವೆ ಎಂದರು ೧೨ ನೇ ಶತಮಾನದ ಕಾಲದಲ್ಲಿ ಬಾಳಿ ಬೆಳಗಿದ ನುಲಿಯ ಚೆಂದಯ್ಯ ನವರು ಹಗ್ಗ ಹೊಸೆಯುವ ಕಾಯಕ ಮಾಡುತ್ತಾ ಹುಲ್ಲನ್ನು ಕೊಯ್ದು ಅದರಿಂದ ನಾರು ತೆಗೆದು ನಾರನ್ನು ಸುಲಿದು ಹಗ್ಗ ಮಾಡಿ ಅದನ್ನು ಮಾರಿ ಬಂದ ಹಣದಿಂದ ಜಂಗಮರಿಗೆ ಪ್ರಸಾದ ನೀಡಿ ತಾವು ಸೇವಿಸುತಿದ್ದರು ಎಂದರುಇವರ ಚಂದೇಶ್ವರ ಅಂಕಿತದ ವಚನಗಳ ಸಂಖ್ಯೆ ೪೮, ಇವರು ಲಿಂಗೈಕ್ಯ ರಾದದ್ದು ಚಿತ್ರದುರ್ಗ ಜಿಲ್ಲೆಯ ಆರ್ ನುಲೇನೂರು ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ ಎಂದರು.
ಪುರಾಣ ಕಾವ್ಯ ಗಳಲ್ಲಿ ಚೆಂದಯ್ಯನಬದುಕಿನ ಘಟನೆಗಳು ಕಂಡುಬರುತ್ತವೆ ಶೂನ್ಯ ಸಂಪಾದನೆ ಶಿವತತ್ವ ಚಿಂತಾಮಣಿ ಬಸವ ಪುರಾಣ ಗ್ರಂಥ ಗಳಲ್ಲಿ ವಿಸ್ತಾರವಾಗಿಯೂ ಗುರುರಾಜ ಚರಿತ್ರೆ ರಾಘವಾಂಕ ಚರಿತ್ರೆ ಚೆನ್ನಬಸವ ಪುರಾಣ ಮುಂತಾದ ಕೃತಿ ಗಳಲ್ಲಿ ಸೂಚ್ಯವಾಗಿ ಚೆಂದಯ್ಯನ ಅರಿವು ಕಾಯಕದ ವಿವರ ಇದೆ ಎಂದು ನುಡಿದರು
ಮಾಜಿ ಶಾಸಕ ಕೆ ಶರಣಪ್ಪ ವಕೀಲರು ಶಂಕರಗೌಡ ಪಾಟೀಲ ಮಹಾದೇವಪ್ಪ ಮಹಾಲಿಂಗಪೂರ ಗೋನಾಳ ಶಿವಶಂಕ್ರಪ್ಪ
ನೂರಂದಪ್ಪ ಗೋನಾಳ ರಾಜಶೇಖರ ಹೊಕ್ರಾಣಿ ಮಹಾಂತಯ್ಯ ಟೆಂಗುಂಟಿ ಇನ್ನಿತರ ಶರಣ ಅನುಭಾವಿಗಳು ಇದ್ದರು
ಕಾರ್ಯಕ್ರಮದ ಆರಂಭದಲ್ಲಿ ಮಲ್ಲನಗೌಡ ಗೋನಾಳ ವಚನ ಪ್ರಾರ್ಥನೆ ಮಾಡಿದರು ಸ್ವಾಗತ ನಿರ್ವಹಣೆ ಯನ್ನು ಎಸ್ ಬಿ ಬಿಜಕಲ್ ನಿರ್ವಹಿಸಿದರು ಕೊನೆಯಲ್ಲಿ ಎಸ್ ಬಿ ಸುಂಕದ ವಚನ ಪ್ರಾರ್ಥನೆ ಮಾಡಿದರು