ಗ್ರಂಥಾಲಯ ಇಲಾಖೆಯನ್ನು ಸಾರ್ವಜನಿಕಗೊಳಿಸಿದ ಸಾಧಕ ಡಾ. ಸತೀಶ್‌ಕುಮಾರ ಹೊಸಮನಿ ಎಂಬ ಸಂತ

ಗ್ರಂಥಾಲಯ ಇಲಾಖೆಯನ್ನು ಸಾರ್ವಜನಿಕಗೊಳಿಸಿದ ಸಾಧಕ
ಡಾ. ಸತೀಶ್‌ಕುಮಾರ ಹೊಸಮನಿ ಎಂಬ ಸಂತ

ನನಗೆ ಗ್ರಂಥಾಲಯ ಇಲಾಖೆ 80 ರ ದಶಕದಿಂದಲೂ ಪರಿಚಿತ.
ಎಲ್ಲಿಯಾದರೂ ಗ್ರಂಥಾಲಯ ಕಣ್ಣಿಗೆ ಬಿದ್ದರೆ, ಒಳನುಗ್ಗಿ ನನಗೆ ಬೇಕಾದ ಪುಸ್ತಕ ಹುಡುಕುತ್ತೇನೆ.
ನನ್ನ ಮೆಚ್ಚಿನ ತಾಣಗಳಲ್ಲಿ ಗ್ರಂಥಾಲಯಗಳು ಸ್ಥಾನ ಪಡೆದಿವೆ.

ಗ್ರಂಥಾಲಯ ಇಲಾಖೆಯ ಅನೇಕ ಹಿರಿಯ ಅಧಿಕಾರಿಗಳ ನೇರ ಪರಿಚಯವು ನನಗಿದೆ.
ತೀರಾ ಇತ್ತೀಚೆಗೆ ಗ್ರಂಥಾಲಯ ಇಲಾಖೆ ಸುದ್ದಿಯಾಗುತ್ತಿದೆ. ಸುದ್ದಿಯಾಗುತ್ತಿರುವುದು ಓದುಗರಿಗೆ ಮೂಲಭೂತ ಸೌಕರ್ಯಗಳ ಹೆಚ್ಚಳ, ಅತ್ಯಾಧುನಿಕ ಸೌಲಭ್ಯ ಹಾಗೂ ಶುದ್ಧ ವಾತಾವರಣ, ಜೊತೆಗೆ ಹೆಚ್ಚಿನ ಅನುಕೂಲದಿಂದ.

ಈ ರೀತಿ ಗ್ರಂಥಾಲಯ ಇಲಾಖೆಯ ಬದಲಾವಣೆಗೆ ಗುರುತಿಸಬೇಕಾದ ಕಾರಣದ ಹೆಸರೆ, ಡಾ. ಸತೀಶಕುಮಾರ ಹೊಸಮನಿ.
ಪಾದರಸದ ಚಟುವಟಿಕೆ, ಸದಾ ನಗುಮುಖದ ಆತ್ಮೀಯತೆಯಿಂದಾಗಿ, ಗ್ರಂಥಾಲಯ ಇಲಾಖೆ ಸಾರ್ವಜನಿಕರ ಫೇವರಿಟ್ ಸ್ಥಳವಾಗಿದೆ.

ಓದುಗರ ಸಂಖ್ಯೆ ಹೆಚ್ಚಳಕ್ಕೆ ಗ್ರಂಥಗಳ ಮೌಲ್ಯ ಹಾಗೂ ಮೂಲಭೂತ ಸೌಕರ್ಯಗಳೇ ಕಾರಣ. ನಿಶಬ್ದತೆ, ವೈವಿಧ್ಯಮಯ ಪುಸ್ತಕಗಳ ಸಂಗ್ರಹ, ನೆಮ್ಮದಿಯಾಗಿ ಕುಳಿತುಕೊಳ್ಳುವ ಆಸನಗಳು. ಇಲ್ಲಿ ಏನಿದ್ದರೂ ಬಾಲ್ಕನಿ ಕ್ಲಾಸ್ ಸೇವೆ ಲಭ್ಯ. ಓದುಗರನ್ನು ಗಾಂಧಿ ಕ್ಲಾಸಿನಿಂದ ಬಾಲ್ಕನಿ ಕ್ಲಾಸ್ ಸೌಲಭ್ಯಗಳನ್ನು ಒದಗಿಸಲಾಗಿದೆ.

ಹಿರಿಯರು, ಮಹಿಳೆಯರು ಯುವಕ-ಯುವತಿಯರು, ಮಕ್ಕಳು ಈಗ ಗ್ರಂಥಾಲಯ ಸೌಲಭ್ಯಕ್ಕೆ ಮುಗಿಬೀಳುವಂತಾಗಿದೆ. ಸರಕಾರ ಹಂಚುವ ಜ್ಞಾನ ಸೌಲಭ್ಯವನ್ನು ಜನತೆಗೆ ತಲುಪಿಸಲು, ನಿರ್ದೇಶಕರು, ಉಪ ನಿರ್ದೇಶಕರು, ಮುಖ್ಯ ಗ್ರಂಥಾಲಯ ಅಧಿಕಾರಿಗಳು, ಗ್ರಂಥಪಾಲಕರು, ಗ್ರಂಥಾಲಯ ಸಹಾಯಕರು ಕಾರಣರಾಗಿದ್ದಾರೆ. ಇದರ ರೂವಾರಿ ಡಾ. ಸತೀಶಕುಮಾರ ಎಸ್ ಹೊಸಮನಿ ಎಂದೇ ವ್ಯಾಖ್ಯಾನಿಸಬಹುದು.
ಅತ್ಯಾಧುನಿಕ ಕಟ್ಟಡಗಳು, ಕಂಪ್ಯೂಟರ್ ಬಳಕೆ, ಕೆಲವಡೆ ಸೈಲೆಂಟ್ ಜೋನ್ ನಿರ್ಮಾಣದಿಂದಾಗಿ, ಗ್ರಂಥಗಳ ಬಳಕೆ ಹೆಚ್ಚಿದೆ.

ಕಳೆದ 3 ವರ್ಷದಿಂದ ಗ್ರಂಥಾಲಯ ಇಲಾಖೆ ಹಮ್ಮಿಕೊಂಡ ಡಿಜಿಟೆಲೀಕರಣದಲ್ಲಿ, ಜಗತ್ತಿನ ಅತಿ ದೊಡ್ಡ ಸಾಧನೆಗೆ ಇಲಾಖೆ ಮುಂದಾಗಿದೆ. ಮೌಲಿಕ ಗ್ರಂಥಾಲಯಗಳ ಸ್ಥಾಪನೆಗೆ, ಈ ಡಿಜಿಟಲ್ ಸಿಸ್ಟಮ್ ಹೊಸ ಇತಿಹಾಸ ಬರೆದಿದೆ. ಕಂಪ್ಯೂಟರ್ ಹಾಗೂ ತಾಂತ್ರಿಕ ಪರಿಪೂರ್ಣತೆಯಲ್ಲಿ ಗ್ರಂಥಾಲಯ ಇಲಾಖೆ ಮುಂದಿದೆ.

ಗ್ರಂಥಗಳು ಡಿಜಿಟಲ್ ಮಾದರಿಯಲ್ಲಿ ಲಭ್ಯವಾಗಿದ್ದರೆ, ಒನ್ಸ್ ಅಗೇನ್ ಸತೀಶಕುಮಾರ ಮುಂದಿದ್ದಾರೆ.
ಪ್ರಸ್ತುತ ಜೂನ್-14-2022ಕ್ಕೆ ಡಿಜಲೀಕರಣವಾದ ಪುಸ್ತಕಗಳ ಸಂಖ್ಯೆ : 16,00,000 ಲಕ್ಷಗಳು. ಡಿಜಿಟಲ್ ಲೈಬ್ರೆರಿಯ ಸದಸ್ಯರು ಮತ್ತು ಓದುಗರ ಸಂಖ್ಯೆ : 2,49,96,989. ಭಾರತ ದೇಶದ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕಾ ಎರಡನೇ ಸ್ಥಾನದಲ್ಲಿದೆ.

ವಿಶ್ವದ ಗ್ರಂಥಾಲಯ ಇಲಾಖೆಯಲ್ಲಿ ಬಹು ದೊಡ್ಡ ಸಾಧನೆ ಭಾರತದಲ್ಲಿ ಸಾಧ್ಯವಾಗಿದ್ದರೆ, ಅದಕ್ಕೆ ಕಾರಣಕರ್ತರು ಡಾ. ಸತೀಶಕುಮಾರ ಹೊಸಮನಿ.
ಹೊಸಮನಿಯವರನ್ನು ಮೊದಲು ಗುರುತಿಸಿದ್ದು, ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ) ಅವರ ಗ್ರಂಥಾಲಯ ಸೇವೆ, ಕಾಳಜಿ, ಯೋಜನೆಗೆ, ಕರ್ನಾಟಕ ವಿಕಾಸ ರತ್ನ ರಾಜ್ಯ ಪ್ರಶಸ್ತಿ ನೀಡಿ ರಾಜಧಾನಿಗೆ ಕರೆಸಿಕೊಂಡಿತ್ತು.
ಅಂದು ದೂರದ ಕಲಬುರ್ಗಿಯಿಂದ ಗ್ರಂಥಾಲಯ ಅಧಿಕಾರಿಯಾಗಿ, ಬೆಂಗಳೂರಿಗೆ ಬಂದಿದ್ದ ಸತೀಶಕುಮಾರ ಹೊಸಮನಿ, ಇಂದು ಇದೇ ಗ್ರಂಥಾಲಯ ಇಲಾಖೆ ನಿರ್ದೇಶಕರಾಗಿದ್ದಾರೆ. ಇದೆ ಅಲ್ಲವೇ ಸಾಧನೆ.

ಸದಾ ಇಲಾಖೆಯ ಕಾರ್ಯದಲ್ಲಿ ಮಗ್ನರಾಗುವ, ಜಿಲ್ಲಾವಾರು ಪ್ರವಾಸಗಳಿಂದ ರಾಜ್ಯ ಗ್ರಂಥಾಲಯ ಇಲಾಖೆಯನ್ನು ಸಾರ್ವಜನಿಕರ ಆಸ್ತಿಯಾಗಿಸಿದ್ದಾರೆ.
ಕಥೆ-ಕಾದಂಬರಿ-ಕಾವ್ಯ-ಉನ್ನತ ಶಿಕ್ಷಣದ ಪುಸ್ತಕಗಳ ಜೊತೆಗೆ, ಲೋಕಸೇವಾ ಆಯೋಗದ ಪರಿಕ್ಷೆಗೆ ಬೇಕಾದ ಗ್ರಂಥಗಳನ್ನು ರಾಜ್ಯದ ಎಲ್ಲಾ ಗ್ರಂಥಾಲಯಗಳಲ್ಲಿ ಒದಗಿಸಿದ್ದಾರೆ. ಕರ್ನಾಟಕದಲ್ಲಿ ಇಂದು ಜಿಲ್ಲಾ-ತಾಲ್ಲೂಕು, ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಂಥಾಲಯ ಸೇವೆಯನ್ನು ತಲುಪಿಸುವಲ್ಲಿ, ಹೊಸಮನಿ ಯಶಸ್ವಿಯಾಗಿದ್ದಾರೆ. ಇಲಾಖೆಯ ಐಕಾನ್ ಎಂದೇ ಸತೀಶಕುಮಾರ ಹೊಸಮನಿ ಮುಂಚೂಣಿಯಲ್ಲಿದ್ದಾರೆ.

ಅವರ ಸಾಧನೆಗೆ ಮುಂದೊಮ್ಮೆ ಪದ್ಮಶ್ರೀ ಬಂದರೆ ಆಶ್ಚರ್ಯಪಡಬೇಕಿಲ್ಲ. ಡಿಜಿಟಲ್ ಮೂಲಕ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ರೂಪವನ್ನು, ಸಾರ್ವಜನಿಕರಿಗೆ ನೀಡಿದ ಮೊದಲ ಅಧಿಕಾರಿ ಹೊಸಮನಿ. ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಕನಸನ್ನು ಸಾಕಾರಗೊಳಿಸಿದ ಸಾಧಕ. ದಿನನಿತ್ಯ ಒಂದಿಲ್ಲೊಂದು ವೇದಿಕೆ ಬಳಸಿ, ಗ್ರಂಥಾಲಯಗಳ ಬಗ್ಗೆ ವಿವರಿಸಿ,ಗ್ರಂಥಾಲಯ ಸೇವೆ ಬಳಸಿಕೊಳ್ಳಲು ಕರೆ ನೀಡುತ್ತಾರೆ. ಸಾರ್ವಜನಿಕರ ಗೌರವ ಸ್ವೀಕರಿಸುವ ಕಾರಣಗಳಿಂದ, ರಾಜ್ಯದ ಎಲ್ಲ ಗ್ರಂಥಾಲಯಗಳ ಭೇಟಿಯಿಂದ, ಅವುಗಳ ಮೇಲೆ ಹಿಡಿತ ಸಾಧಿಸಿದ್ದಾರೆ.

ಈಗಾಗಲೇ ರಾಜ್ಯ ಸರಕಾರದ ಸರ್ವೋತ್ತಮ ಸೇವಾ ಪ್ರಶಸ್ತಿ ಸೇರಿದಂತೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ 80ಕ್ಕೂ ಹೆಚ್ಚು ಪ್ರಶಸ್ತಿಗಳ ಕಿರೀಟ ಧರಿಸಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ಈ ಸಲದ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ, ಗ್ರಂಥಾಲಯ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಡಿಜಿಟಲೀಕರಣಕ್ಕೆ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಬೇಕಿದೆ.
ಹೊಸಮನಿಯವರ 50ರ ಸಂಭ್ರಮಕ್ಕೆ ಈಗಾಗಲೇ ಎರಡು ಅಭಿನಂದನಾ ಗ್ರಂಥ ಹೊರಬಂದಿವೆ. ನೂರಾರು ಪತ್ರಿಕೆಗಳು ಅವರ ಸಾಧನೆಯನ್ನು ಪ್ರಕಟಿಸಿವೆ. ಟಿವಿ ಮಾಧ್ಯಮಗಳು ಸಂದರ್ಶಿಸಿವೆ. ಅನೇಕ ಸಂಘಟನೆಗಳು ಅವರ ಸರ್ವಾಧ್ಯಕ್ಷತೆಯಲ್ಲಿ ಯಶಸ್ವಿ ಸಮ್ಮೇಳನಗಳನ್ನು ಮಾಡಿವೆ. ಕೊಪ್ಪಳ ಮೂಲದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್ ವಿಜಯನಗರ ಕರ್ನಾಟಕದ ಸಾಂಸ್ಕೃತಿಕ ಸಮ್ಮೇಳನಕ್ಕೆ ಅವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದೆ. ಬನ್ನಿ ಅಭಿನಂದಿಸಿ.

ರಮೇಶ ಸುರ್ವೆ
ಸುರ್ವೆ ನ್ಯೂಸ್ , ಬೆಂಗಳೂರು

Don`t copy text!