ಯುವ ಸಮೂಹ ಮಾದಕ ವ್ಯಸನಿಗಳಿಂದ ದೂರವಿರಬೇಕು – ಪಿ.ಐ ಪ್ರಕಾಶ್ ಮಾಳಿ

 

ಯುವ ಸಮೂಹ ಮಾದಕ ವ್ಯಸನಿಗಳಿಂದ ದೂರವಿರಬೇಕು – ಪಿ.ಐ ಪ್ರಕಾಶ್ ಮಾಳಿ

ವರದಿ ವೀರೇಶ ಅಂಗಡಿ ಗೌಡೂರು ಲಿಂಗಸುಗೂರು

ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದ ಸಂತ ಅನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಇಂದು ಹಟ್ಟಿ ಪೋಲಿಸ್ ಠಾಣೆ ಹಾಗೂ ಸಂತ ಅನ್ನಮ್ಮ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಮಾದಕ ದ್ರವ್ಯಗಳ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಹಟ್ಟಿ ಪೊಲೀಸ್ ಠಾಣೆಯ ಪಿ.ಐ ಪ್ರಕಾಶ್ ಮಾಳಿ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದಿನ ಯುವಪೀಳಿಗೆ ಮಾದಕ ವ್ಯಸನಿಗಳಿಗೆ ಬಲಿಯಾಗುತ್ತಿರುವುದು ಖೆದಕರ ಸಂಗತಿಯಾಗಿದ್ದು ಯುವ ಸಮೂಹ ಮಾದಕ ವ್ಯಸನಿಗಳಿಂದ ಆದಷ್ಟು ದೂರವಿರಬೇಕು ಎಂದು ಸಲಹೆ ನೀಡಿದರು.

ಮಾದಕ ವ್ಯಸನಿಗಳಾದ ಬೀಡಿ,ಸಿಗರೇಟು,ಗಾಂಜಾ ಸೇವನೆಯಿಂದ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳಿಗೆ ಒಳಗಾಗಿ ತನ್ನ ಅಮುಲ್ಯ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾನೆ . ಮೋದಲು ಇವೆಲ್ಲ ದುಶ್ಚಟಗಳನ್ನು ನಿಲ್ಲಿಸಬೇಕು.ವಿಶ್ವದಾದ್ಯಂತ ಈ ದುಶ್ಚಟಗಳಿಗೆ ಮಕ್ಕಳು ಮತ್ತು ಯುವಕರು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ನಮ್ಮ ದೇಶದಲ್ಲಿ 62.5 ಮಿಲಿಯನ್ ಜನರು ಮಧ್ಯಪಾನ ಸೇವನೆ ಮಾಡುತ್ತಿದ್ದಾರೆ.ಡ್ರಗ್ ಮಾಫಿಯಾವನ್ನು ನಿಯಂತ್ರಣಕ್ಕೆ ತರಲು ವಿಶ್ವದೆಲ್ಲೆಡೆ ಕಾನೂನು ಪ್ರಯತ್ನಗಳು ನಡೆಯುತ್ತಿವೆ. ಇಲಾಖೆಯೊಂದಿಗೆ ಪ್ರತಿಯೊಬ್ಬ ನಾಗರಿಕರು ಸಹ ಮಾದಕ ವಸ್ತುಗಳ ಬಳಕೆ ಮುಕ್ತವಾಗಿಸುವ ಜವಾಬ್ದಾರಿಯನ್ನು ಹೊಂದಬೇಕು ಅಂದಾಗ ಮಾತ್ರ ನಿಯಂತ್ರಣಕ್ಕೆ ತರಲು ಸಾಧ್ಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾದಕ ವಸ್ತುಗಳ ವಿರೊದಿ ದಿನದ ಅಂಗವಾಗಿ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ಪೊಲಿಸ್ ಪೆದೆ ಹುಚ್ಚರೆಡ್ಡಿ ಸೇರಿದಂತೆ ಶಾಲಾ ಶಿಕ್ಷಕರು, ಮಕ್ಕಳು ಹಾಜರಿದ್ದರು.

Don`t copy text!