ಡಾ ಫ ಗು ಹಳಕಟ್ಟಿಯವರ ವ್ಯಕ್ತಿತ್ವ
ಕನ್ನಡ ಸಾಹಿತ್ಯ ನವೋದಯದ ಸಂದರ್ಭದಲ್ಲಿ ನಮ್ಮ ಶ್ರೀಮಂತ ಕನ್ನಡ ಸಾಹಿತ್ಯದ ಬಗೆಗೆ ನಮ್ಮ ಮುಚ್ಚಿದ ಕಣ್ಣನ್ನು ತೆರೆದು ಆ ಮರೆತು ಹೋಗಿದ್ದ ಭಾಗ್ಯ ನಿಧಿಯನ್ನು ನಮಗೆ ತೋರಿಸಿ ಕೊಟ್ಟವರು ಡಾ ಫ ಗು ಹಳಕಟ್ಟಿಯವರು ಅಜ್ಜ ಫಕೀರಪ್ಪ ಅಜ್ಜಿ ಸಿದ್ದವ್ವ.ಇವಳು ಧಾರವಾಡ ಶುಕ್ರವಾರ ಪೇಟೆಯೊಳಗಿನ ಗಿಲಗಂಜಿ ಬಸಪ್ಪನವರ ಮಗಳು. ನೇಕಾರ ಮನೆತನ ಈ ದಂಪತಿಗಳಿಗೆ
24-11-1854 ರಂದು ಗಂಡು ಮಗು ಜನಿಸಿತು.ಮಗುವಿಗೆ ಗುರುಬಸಪ್ಪ ಎಂದು ನಾಮಕರಣ ಮಾಡಿದರು.
ಪ್ರಾಯಕ್ಕೆ ಬಂದ ಗುರುಬಸಪ್ಪನಿಗೆ 15-05-1876 ರಂದು ಸವದತ್ತಿ ತಾಲೂಕಿನ ಹೂಲಿ ಗ್ರಾಮದ ದಾನಮ್ಮನೊಡನೆ ಗುರ್ಲಹೊಸೂರಿನಲ್ಲಿ ವಿವಾಹ ನೆರವೇರಿತು.ಗುರುಬಸಪ್ಪ ಒಳ್ಳೆಯ ಶಿಕ್ಷಕರಾಗಿದ್ದರು.ಇವರ ಮಗನೇ ಡಾ ಫ ಗು ಹಳಕಟ್ಟಿಯವರು.
.ದಾನಮ್ಮನಿಧನಳಾದಳು.ಬೆಳಗಾವಿಯ ನೀಲಮ್ಮ ಳನ್ನು ಮದುವೆ ಆದರು.ನೀಲಮ್ಮ ಮತ್ತು ಗುರುಬಸಪ್ಪನವರ ಉದರದಿಂದ
12 ಮಕ್ಕಳು ಹುಟ್ಟಿದರು.
ಬಸವಂತಪ್ಪ 7-5-1887
ಚಂದ್ರಾದೇವಿ 28-6-1892
ದಾನಾದೇವಿ 8-11-1897
ಗುರುಸಿದ್ದಪ್ಪ 12-06-1902
ವೀರವ್ವ 8-11-1907
ಶಂಕರೆಪ್ಪ 5-11-1911
ಸಿದ್ದವ್ವ-16-06-1890
ಸದಾಶಿವಪ್ಪ 9-12-1895
ಗಂಗಾದೇವಿ 4-10-1900
ಗಂಗಾಧರಪ್ಪ-8-9-1906
ವೀರಭದ್ರಪ್ಪ 13-11-1909
ಪಾರ್ವತಿ ದೇವಿ 14-11-1914
ಗುರುಬಸಪ್ಪನವರದು ದೊಡ್ಡ ಸಂಸಾರ
ಎರಡನೇಯ ಮಗು 2 -7 1880 ರಂದು ಧಾರವಾಡದಲ್ಲಿ ಜನಿಸಿತು
ಅದೇ ಮಗು ಫಕೀರಪ್ಪ(ಫ.ಗು.ಹಳಕಟ್ಟಿಯವರು)
ನಾಮಕರಣ ಮಾಡಲಾಯಿತು.
ದಾನಮ್ಮ ಬಹುಕಾಲ ಬದುಕಲಿಲ್ಲ ಆಗ ಫಕೀರಪ್ಪನಿಗೆ ಕೇವಲ 3 ವರ್ಷ.ತಾಯಿ ಸಿದ್ದವ್ವಳು ತೀರಿದಳು.ಫಕೀರಪ್ಪನ ಬಾಲ್ಯ
ಅಜ್ಜಿ ಬಸಮ್ಮ ತಂದೆ ಗುರುಬಸಪ್ಪನವರ ಅಕ್ಕರೆಯಲ್ಲಿ ಕಳೆಯಿತು. ಸಂಸ್ಕಾರ ಸಂಸ್ಕೃತಿಯಲ್ಲಿ ಬೆಳೆದ ಫಕೀರಪ್ಪ ಒಬ್ಬ ಮಹತ್ವಾಕಾಂಕ್ಷಿಯಾಗಿ ರೂಪಗೊಂಡರು.
ವಕೀಲಿವೃತ್ತಿ
1904ರಲ್ಲಿ ಕಾಯಿದೆ ಪದವಿ ಮುಗಿಸಿ ಧಾರವಾಡದಿಂದ ಬೆಳಗಾವಿಗೆ ಬಂದು ವಕೀಲಿವೃತ್ತಿ ಆರಂಭಿಸಿ ಪಿ.ಜಿ.ಹಳಕಟ್ಟಿ ಎಂದು ಖ್ಯಾತರಾದರು.
ಅಂದಿನ ಬ್ರಿಟಿಷ್ ಸರ್ಕಾರ 1923 ರಲ್ಲಿ ಇವರ ಶಿಸ್ತು. ಶ್ರದ್ಧೆ ಮೆಚ್ಚಿ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಗವ್ಹರ್ನಮೆಂಟ್ ಪ್ಲೀಡರ್ ಎಂದು ನೇಮಿಸಿತು.1926ರಲ್ಲಿ ನಿವೃತ್ತಿ ತೆಗೆದುಕೊಂಡರು.ಏಕೆಂದರೆ ವಚನವಾಙ್ಮಯದ ಸಮಗ್ರ ಶೋಧನೆ ಅವರ ಜೀವನದ ಮುಖ್ಯ ಗುರಿಯಾಗಿದ್ದಿತು.
ವಿವಾಹ
ದಿನಾಂಕ 7-2-1896ರಲ್ಲಿ ಬಾಗೀರಥಿಯೊಂದಿಗೆ ಬನಹಟ್ಟಿಯಲ್ಲಿ ಜರುಗಿತು.ಆಗ ಇವರ ವಯಸ್ಸು ಕೇವಲ 16
ದು ನಿಂ ಬೆಳಗಲಿ ಅವರು ತಮ್ಮಣ್ಣಪ್ಪನವರು ಹಳಕಟ್ಟಿಯವರಿಗೆ ಹೆಣ್ಣು ಕೊಟ್ಟ ಮಾವನಷ್ಟೇ ಅಲ್ಲ ಅಳಿಯನ ಹಿತಚಿಂತಕರೂ.ಮಾರ್ಗದರ್ಶಿಗಳೂ .ಸ್ನೇಹಿತರೂ ಅವರ ವ್ಯಕ್ತಿತ್ವದ ರೂಪಕರು ಆಗಿದ್ದರು ಎಂದಿದ್ದಾರೆ.
ಮಕ್ಕಳು
4 ಹೆಣ್ಣು 3ಗಂಡು 7ಜನ ಮಕ್ಕಳು
ಮಹಾಲಿಂಗ 1903
ಚಂದ್ರಶೇಖರ್ 1906
ಗುರುಪುತ್ತಪ್ಪ 1913
ಶಿವಶಂಕರ 1919
ಸರಸ್ವತಿ 1909
ಪಾರ್ವತಿ 1915
ಸಾವಿತ್ರಿ 1917
7ಜನ ಮಕ್ಕಳಲ್ಲಿ ಚಂದ್ರಶೇಖರ್ ಗುರುಪುತ್ರಪ್ಪ ಮತ್ತು ಪಾರ್ವತಿದೇವಿ ಮದುವೆ ವಯಸ್ಸಿಗೆ ಬರುವ ಪೂರ್ವದಲ್ಲಿಯೇ ತೀರಿಕೊಂಡರು.
ಕೌಟುಂಬಿಕ ಸ್ಥಿತಿ
ಫ ಗು ಹಳಕಟ್ಟಿಯವರು ಯಾವ ಹಣ ಸಂಪತ್ತು ಗಳಿಸಲಿಲ್ಲ ಹೆಸರಿಗೆ ತಕ್ಕ ಫಕೀರನಾಗೆ ಬಾಳಿದರು.
ವಾಸಕ್ಕೆ ಸ್ವಂತ ಮನೆ ಕೂಡಾ ಇರಲಿಲ್ಲ. ಶರಣ ಸಾಹಿತ್ಯವೇ ನೈಜ ಸಂಪತ್ತು.
ಕೊನೆಯ ದಿನಗಳು
ಹಗಲಿರುಳು ಅವಿಶ್ರಾಂತವಾಗಿ ದುಡಿದು .ತಮ್ಮ ವ್ಯಕ್ತಿ ಗತ ನೋವುಗಳನ್ನು ಇತರರಿಗೆ ತಿಳಿದದ್ದು ಕಡಿಮೆ
1963 ರಲ್ಲಿ ತಮ್ಮ ಹಿತಚಿಂತಕ ಮುದ್ರಣಾಲಯದ ಎಲ್ಲಾ ಕಾರ್ಯಗಳನ್ನು ಮಗ ಗುರುಪುತ್ತಪ್ಪನವರಿಗೆ ಒಪ್ಪಿಸಿದರು.ಹೊರಗಿನ ಯಾವ ಸಾರ್ವಜನಿಕ ಕಾರ್ಯಕ್ರಮ ನಿಲ್ಲಿಸಿದರು.ಧರ್ಮ ಪತ್ನಿ 25-5-1964ರಲ್ಲಿ ತೀರಿಕೊಂಡರು. ಮೌನ ವಾಗಿ ಎಲ್ಲಾ ನೋವನ್ನು ಅನುಭವಿಸಿ ತಮ್ಮ 84 ನೇ ವಯಸ್ಸಿನಲ್ಲಿ 29-6-1964ರಂದು ಸೋಮವಾರ ಸಂಜೆ 7 ಗಂಟೆಗೆ ವಚನಪಿತಾಮಹ ಲಿಂಗಕ್ಯರಾದ ವಾರ್ತೆ ಕೇಳಿ ನಾಡೇ ದುಃಖ ಸಾಗರದಲ್ಲಿ ಮುಳುಗಿತು.
ಕೊನೆಯವರೆಗೂ ಬಾಡಿಗೆ ಮನೆಯಲ್ಲಿಯೇ ಜೀವನ ಕಳೆದರು.ಫಕೀರಪ್ಪ ರಾಗಿ ಉಳಿದರು.
ಸಾಧನೆ
ಅಪಾರ ಸಾಧನೆ
ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ರಕ್ಷಣೆ 1926ರಲ್ಲಿ ಶಿವಾನುಭವ ಧಾರ್ಮಿಕ ಪತ್ರಿಕೆ 1927ರಲ್ಲಿ ನವಕರ್ನಾಟಕ ವಾರ ಪತ್ರಿಕೆ ಪ್ರಾರಂಭ.
ಶಿಕ್ಷಣ ಸಂಸ್ಥೆಗಳ ಸ್ಥಾಪನೆ
ಬಿಜಾಪುರ ಲಿಂಗಾಯತ ಅಭಿವೃದ್ಧಿ ಶಿಕ್ಷಣ ಸಂಸ್ಥೆ
ಶ್ರೀ ಸಿದ್ಧೇಶ್ವರ ಮಾಧ್ಯಮಿಕ ಶಾಲೆ
ಬಿ ಎಲ್ ಡಿ ಇ ಸಂಸ್ಥೆ
1933ರಲ್ಲಿ ಬೆಳಗಾವಿಯ ಲಿಂಗ ರಾಜ ಕಾಲೇಜು ಬಾಗಲಕೋಟೆ ಯ ಬಸವೇಶ್ವರ ಕಾಲೇಜು ಸ್ಥಾಪನೆ ಯ ಪ್ರಮುಖ ಪಾತ್ರ. ಬನಹಟ್ಟಿಯ ಜನತಾ ಶಿಕ್ಷಣ ಸಂಸ್ಥೆ
ದಿ ಬಿಜಾಪುರ ಶ್ರೀ ಸಿದ್ಧೇಶ್ವರ ಸಹಕಾರಿ ಪತ್ತಿನ ಸಂಘ
ಒಕ್ಕಲುತನ ಸಹಕಾರಿ ಸಂಘ
ಭೂತನಾಳ ಕೆರೆಯ ನಿರ್ಮಾಣ ಯೋಜನೆ
ಬಿಜಾಪುರ ಶೆಫರ್ಢ ಹಾಲ್
ಹೀಗೆ ಹತ್ತು ಹಲವು ಸಂಘ
ವ್ಯಕ್ತಿತ್ವ
ನಿರಾಡಂಬರ ಸೃಜನಶೀಲತೆ ಸಾತ್ವಿಕತೆ ಪ್ರಮಾಣಿಕತೆ ಕರ್ತವ್ಯ ನಿಷ್ಠತೆ ಅಂತಃಕರುಣೆ ಕೃತಜ್ಞತೆ ಸಾತ್ವಿಕತೆ ಕಾರ್ಯತತ್ಪರತೆ ಚೈತನ್ಯ ಶೀಲತೆ ಮುಂತಾದ ಸದ್ಗುಣಗಳು ವಚನಗಳ ಸಂಗ್ರಹ ಮಾಡಲು ಮೂಲ ಅವರಲ್ಲಿ ಕಂಡು ಬರುವ ಸದ್ಗುಣಗಳು.
ಸಾವಿತ್ರಿ ಎಂ. ಕಮಲಾಪುರ ಹೂಲ್ಲುರು