ಬಾಳ ಬಂಡಿ

ಬಾಳ ಬಂಡಿ

ಉತ್ತಮ ನಾಳೆಯ ಭರವಸೆಯ
ನಿನ್ನೆಯ ಸವಿ ನೆನಪುಗಳ
ಛಾಯೆಯಲ್ಲಿ.
ಸುಂದರ ನಾಳೆಗಳ ನಿರೀಕ್ಷೆಗಳಲ್ಲಿಿ
.ಬಾಳಬಂಡಿ ಸಾಗುತಿರಲು
ಬದುಕು ಶುಲ್ಕವಿಲ್ಲದೇ ಕಲಿಸುವ
ಘೋರ ಜೀವನದ ಪಾಠಗಳನ್ನು
ಮಂದಹಾಸದಿ ಸ್ವೀಕರಿಸಲು..
ಶಿವಶರಣರ ತತ್ವಗಳೇ..
ಈ,ಬಾಳಬಂಡಿಗೆ ದಿಕ್ಸೂಚಿ.
ಬಾಳಬಂಡಿಯ ದಾರಿಯಲ್ಲಿ ದೊರೆಯುವ ಸ್ನೇಹ,ಮಮತೆ, ವಿಶ್ವಾಸಗಳೇ
ಸುಂದರ ಆಕಾಶದೀಪಗಳಾಗಿ.
ಬದುಕಿನ ಪಾಠಗಳನ್ನು ಆಲಿಸುತ್ತಾ
ಆಗಾಗ ಆತ್ಮವಿಶ್ವಾಸ, ಕುಗ್ಗಿದಾಗ,
ಶರಣರ ತತ್ವಗಳು, ಕಗ್ಗತಲೆಯಲ್ಲೂ , ದಾರಿದೀಪವಾಗಿ ನಮ್ಮ
ಬಾಳಬಂಡಿಯನ್ನು ಸಾಗಿಸುತ್ತವೆ..
ಬಸವನಾಮ ಏನ್ನ ಹೃನ್ಮನದಿ ಸ್ಮರಿಸುತ್ತಾ.. ಎಲ್ಲರಿಗೂ ,ಅವರವರ
ದಡಕ್ಕೆ ತಲುಪಿಸಲಿ..
ಅವರ ಆದರ್ಶಗಳಿಂದ ಬದುಕು ನಂದನವಾಗಿ., ಸರ್ವರ ಹೃನ್ಮನದಲ್ಲಿ ಶರಣರ ತತ್ವ ರಾರಾಜಿಸುತ್ತ ಬಾಳಬಂಡಿ ಸಾಗಲಿ.

. ಡಾ. ಶಾರದಾಮಣಿ .ಏಸ್.ಹುನಶಾಳ

2 thoughts on “ಬಾಳ ಬಂಡಿ

Comments are closed.

Don`t copy text!