ಒರಗಲೇ ನಿನ್ನ
ಒರಗಲೇ ನಿನ್ನ
ಎದೆಗೊಮ್ಮೆ…
ಕರಗಲೆ ನಿನ್ನ
ತೋಳಲ್ಲಿ ನಾನೊಮ್ಮೆ…
ಬೇರೆಯಲೇ ನಿನ್ನ
ಉಸಿರಲ್ಲೊಮ್ಮೆ..
ಎದೆ ಬಡಿತ ನಾನಾಗಲೇ
ಹಾಗೇ ಸುಮ್ಮನೆ…
ಬೆಳಗಲೆ ನಿನ್ನ
ಮನಸ್ಸನ್ನೊಮ್ಮೆ…
ಬರಲೇ ನಾ ನಿನ್ನ
ಕನಸಲ್ಲೊಮ್ಮೆ…
ಮುದ್ದಿಸಲೇ ನಿನ್ನ
ನಾನೊಮ್ಮೆ…
ಪ್ರೀತಿಸಲೇ ಹಾಗೇ
ಸುಮ್ಮನೆ..
ಧರಿಸಲೇ ಆಸೆಗಳ
ನಾನೊಮ್ಮೆ…
ಒರಿಸಲೇ ನಿನ್ನೊಲವ
ಇನ್ನೊಮ್ಮೆ..
ಬರೆಸಲೇ ವಿಧಿಲಿಖಿತ
ಹೀಗೋಮ್ಮೆ…
ಮೆರೆಸಲೆ ನಿನ್ನ
ಪ್ರೀತಿಯ ಮತ್ತೊಮ್ಮೆ ಮೊಗದೊಮ್ಮೆ….
ಸಂಧಿಸಲೇ ನಿನ್ನ
ದುಃಖಗಳ ಜೊತೆಗೊಮ್ಮೆ..
ಚುಂಬಿಸುವೆ ಸಾವನ್ನು
ಇದ್ದರೆ ನನ್ನೊಂದಿಗೆ
ನಿನ್ನೊಲುಮೆ……
–ಡಾ. ನಂದಾ