ನನ್ನ ಶಿಕ್ಷಕರು
ಕಗ್ಗತ್ತಲೆಯ ಅಂಧಕಾರ ತುಂಬಿದ ಬುದ್ಧಿಯು
ಮರಕೋತಿಯ ಚಂಚಲ ಮನಸ್ಸು ತುಂಬಿದ ಮನವು
ಸ್ಪರ್ಧಿಸಿ ಗುರುತಿಸಲಾಗದ ಈ ಬಂಡೆಯ ದೇಹವು
ಜ್ಞಾನದಿಂದ ನುರಿತ ಹರಿತ ಆಯುಧದಿಂದ
ಅಜ್ಞಾನವನ್ನು ಎತ್ತಿ ಕೆಡವಿ ಕೆಳಗೆ
ಪ್ರಕಾಶವಾದ ಜ್ಞಾನದ ಜ್ಯೋತಿ ನೀಡಿದ ನನ್ನ ಗುರುವೇ
ಮಮತೆಯಾ ಮಡಿಲಿನ ಪ್ರೀತಿ ತೋರಿಸಿ
ನೀತಿ ನಿಯಮದಾ ಪಾಠ ಕಲಿಸಿ
ಸತ್ಯ ಅಸತ್ಯದ ದಾರಿ ಕಂಡಿಸಿ
ಜಾತಿ ಧರ್ಮವನ್ನು ಕಡೆಗಣಿಸಿ
ಒಂದೇ ಪಂತಿಯ ತಟ್ಟೆಯಲ್ಲಿ ಉಣ್ಣಬಡಿಸಿ
ನಾವೆಲ್ಲ ಒಂದೇ ಎಂಬ ಭಾವನೆ ಬಿತ್ತಿ ಬೆಳಿಸಿದ ನನ್ನ ಗುರುವೆ
ಸಾಣಿಯಿರದ ಗಾಡಕಲ್ಲನ್ನು ಹೊಳಪಿಂದ
ಜಳಪಿಸಿ ರೂಪರೇಷ ನೀಡಿದ
ಒಂದೇ ಬೇರಲಿ ಸಾವಿರ ಬಳ್ಳಿಗೆ
ಬೇಧ ಭಾವ ಇರದೆ ಒಗ್ಗೂಡಿಸಿ
ಒಗ್ಗಟಿನಲ್ಲಿ ಬಿರುಕು ಇರದ ಗುರುರುಂಧವೆ
ಈಗ ವರ್ಣಿಸಿ ವಿಸ್ತರಿಸಿ ಹೇಳಲು ಪದಗಳೇ ನಿಲುಕದಾಗಿದೆ
–ಗಾಯಿತ್ರಿ ಬಡಿಗೇರ
ಮೂಧೋಳ ತಾಲೂಕ ಯಡಹಳ್ಳಿ