ಬೂದು ಕುಂಬಳ

ನಿಮ್ಮ ಆಹಾರ ನಿಮಗೆಷ್ಟು ತಿಳಿದಿದೆ?

ಬೂದು ಕುಂಬಳ

ಸಾಮಾನ್ಯವಾಗಿ ಬೂದುಗುಂಬಳ ಎಂದಾಗ ಆಯುಧ ಪೂಜೆ ದೃಷ್ಟಿ ತಗೆಯಲು ಒಡೆಯುವ ತರಕಾರಿ ಎಂದು ಗುರುತಿಸಿಕೊಳ್ಳುತ್ತದೆ. ಅದರಲ್ಲಿ ಬ್ರಾಹ್ಮಣರ ಮನೆಯಲ್ಲಿ ಹೆಚ್ಚು ಬಳಕೆ ಬಿಟ್ಟಂತೆ ಎಲ್ಲ ಕಡೆಯೂ ಸಿಗುವ ತರಕಾರಿಯಲ್ಲ. ಆಂಗ್ಲರು ವ್ಯಾಕ್ಸ್‌ ಗಾರ್ಡ್‌, ಆಶ್‌ ಗಾರ್ಡ್‌, ವೈಟ್‌ ಗಾರ್ಡ್‌ ವಿಂಟರ್‌ ಗಾರ್ಡ್‌ ಎಂದೆಲ್ಲ ಕರೆಯುತ್ತಾರೆ. ಅಚ್ಚ ಕನ್ನಡದಲ್ಲಿ ಬೂದು ಕುಂಬಳ. ಮನೆಯ ಹಿತ್ತಲಿನಲ್ಲಿ ಬಳ್ಳಿಯ ರೂಪದಲ್ಲಿ ಬೆಳೆಯುವ ಬೂದು ಕುಂಬಳ ಅತೀ ಉಪಯುಕ್ತ ತರಕಾರಿಯಾಗಿದೆ.

ಇದರಲ್ಲಿ ಅನೇಕ ಉತ್ತಮ ಔಷಧೀಯ ಗುಣಗಳನ್ನು ಉತ್ತಮ ಆಗಾರ ಪದಾರ್ಥಗಳನ್ನು ಮಾಡಬಹುದಾಗಿದೆ. ಒಣ ಭೂಮಿಯಲ್ಲಿ ಬೆಳೆಯಲು ಕಷ್ಟ ಸದಾ ತೆವವಾಗಿರುವ ಮಣ್ಣಿನಲ್ಲಿ ಬೆಳೆಯುತ್ತದೆ. ಭಾರತದಲ್ಲಿ ಹೆಚ್ಚಾಗಿ ಬೆಳೆಯುವ ತರಕಾರಿಯಾಗಿದೆ. ಊಟಕ್ಕೆ ಮತ್ತು ಆಯುರ್ವೇದದ ಔಷಧಿಗಳಲ್ಲಿ ಬೂದುಗುಂಬಳದ ಬಳಕೆ ಹೆಚ್ಚಾಗಿದೆ.

ಇದರಲ್ಲಿ ಫ್ಲಾವನಾಯಿಡ್ಸ್‌ ಮತ್ತು ಕೆರೊಟೀನ್‌ ನ ಅಂಶವಿರುತ್ತದೆ. ಈ ಎರಡು ಆಂಟಿ ಆಕ್ಸಿಡೆಂಟ್‌ಗಳ ಕಾರಣದಿಂದ ಟೈಪ್‌ 2 ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಾಯಕವಾಗಿದೆ. ಅದರಲ್ಲೂ ಮಧುಮೇಹಿಗಳಿಗೆ ಬೂದುಕುಂಬಳ ಅತೀ ಉತ್ತಮ ತರಕಾರಿಯಾಗಿದೆ ಏಕೆಂದರೆ ಅದರಲ್ಲಿ ಮಿನರಲ್‌ಗಳು ಹೇರಳವಾಗಿದೆ, ಫೈಬರ್‌ ಹೆಚ್ಚು ಹೊಂದಿರುವ ತರಕಾರಿಯಾಗಿದೆ, ಇದಲ್ಲದೇ ಕ್ಯಾಲ್ಶಿಯಮ್‌, ಫಾಸ್‌ಫರಸ್‌, ಕಬ್ಬಿಣ, ರಿಬೊಫ್ಲಾವಿನ್‌, ಥೈಮೈನ್‌ ನಿಯಾಸಿನ್‌ ಜೊತೆಗೆ ವಿಟಮಿನ್‌ ಸಿ ಕೂಡ ಹೇರಳವಾಗಿ ಇರುತ್ತದೆ.


ಬೂದು ಕುಂಬಳದ ಉಪಯೋಗಗಳು :
* ಬೂದುಕುಂಬಳ ಜೀರ್ಣಕ್ಕೆ ಸಹಾಯಕ
* ಶ್ವಾಸಕೋಶದ ಸಮಸ್ಯೆಗಳನ್ನು ಪರಿಹರಿಸುತ್ತದೆ.
* ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ.
* ಯಾವುದೇ ಬಗೆಯ ಹುಣ್ಣುಗಳಿಗೆ ಬೂದು ಕುಂಬಳ ಅತ್ಯುತ್ತಮ ಮನೆ ಮದ್ದಾಗಿದೆ.
* ಅತೀ ಹೆಚ್ಚು ರಕ್ತ ಸ್ರಾವವನ್ನು ತಡೆಗಟ್ಟುತ್ತದೆ.
* ದೇಹದಲ್ಲಿ ಹೆಚ್ಚಾಗಿರುವ ಉಷ್ಣಾಂಶವನ್ನು ಕಡಿಮೆ ಮಾಡಿ ದೇಹವನ್ನು ತಂಪಾಗಿಸುತ್ತದೆ.
* ದೇಹಕ್ಕೆ ಆಗಿರುವ ಒತ್ತಡವನ್ನು ಕಡಿಮೆ ಮಾಡಿ ವಿಶ್ರಾಂತಿ ನೀಡಲು ಸಹಾಯಕವಾಗಿದೆ.
* ಪಚನ ಕ್ರಿಯೆ ಅಸ್ತವ್ಯಸ್ತವಾಗಿದ್ದಲ್ಲಿ ಅದನ್ನು ನಿವಾರಿಸುತ್ತದೆ. ಮಲಮೂತ್ರ ವಿಸರ್ಜನೆಯನ್ನು ಸರಳವಾಗಿ ಆಗುವಂತೆ ಕಾಪಾಡುತ್ತದೆ.
* ಬೂದುಕುಂಬಳದ ತಿರುಳನ್ನು ರುಬ್ಬಿ ತಲೆಗೆ ಲೇಪಿಸಿಕೊಂಡಾಗ ಹೊಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ.
* ಬೂದುಗುಂಬಳ ಮೈಶ್ಚರೈಸರ್‌ ರೂಪದಲ್ಲಿಯೂ ಕೆಲಸ ಮಾಡುತ್ತದೆ.

ಬೂದು ಕುಂಬಳದ ಅಡುಗೆಗಳು ಬಲು ರುಚಿ, ಬೂದು ಕುಂಬಳ ಹುಳಿ, ಬೂದುಕುಂಬಳ ಮಜ್ಜಿಗೆ ಹುಳಿ, ರಾಯಿತ, ಬೂದುಕುಂಬಳದ ರಸ , ಕಾಶಿ ಹಲ್ವ , ಪಲ್ಯ, ದೋಸೆ, ತಂಬಳಿ, ಗಾರಿಗೆ, ಕಾಯಿ ಸಾಸಿವೆ, ಪಾಯಸ, ಆಗ್ರಾ ಪೇಟ, ಸಂಡಿಗೆ ಮೊದಲಾದ ಪದಾರ್ಥಗಳನ್ನು ಸೇವಿಸುತ್ತಾರೆ.

ತೂಕ ಹೆಚ್ಚಳಕ್ಕೆ ಶಕ್ತಿ ವರ್ಧನೆಗೆ ಆಯುರ್ವೇದ ಔಷಧಿಗಳಲ್ಲಿ ಬಳಸುವುದು ವಿಶೇಷ. ಬೂದು ಕುಂಬಳವನ್ನು ದೃಷ್ಟಿ ತಗೆಯಲು ಮತ್ತು ಮನೆಯ ಮುಂದೆ ದೃಷ್ಟಿಯಾಗದಿರಲೆಂದು ಕಟ್ಟುತ್ತಾರೆ. ಬೂದು ಕುಂಬಳದಲ್ಲಿ ನಕಾರಾತ್ಮಕ ಶಕ್ತಿಯನ್ನು ತಡೆಗಟ್ಟುವ ಮತ್ತು ಹೊಡೆದೊಡಿಸುವ ಶಕ್ತಿ ಇದೆ.

ಹೀಗೆ ಉಪಯುಕ್ತವಾದ ತರಕಾರಿಗಳನ್ನು ವಾರಕ್ಕೆ ಒಂದು ಬಾರಿ ಆದರೂ ಬಳಸುವ ಅಭ್ಯಾಸ ಮಾಡಿಕೊಳ್ಳಬೇಕು

ಮಾಧುರಿ ದೇಶಪಾಂಡೆ, ಬೆಂಗಳೂರು

Don`t copy text!