ದೀಪಾವಳಿ ನಿರಸ, ವ್ಯಾಪರಿಗಳಲ್ಲಿ ಇಲ್ಲ ಸಂತಸ

 

ವರದಿ : ಹನುಮೇಶ ನಾಯಕ

ದೀಪಾವಳಿ ಎಂದರೆ ಎಲ್ಲರ ಮುಖದಲ್ಲಿ ಸಂತಸ ಸಂಭ್ರಮ ಎದ್ದು ಕಾಣುತಿತ್ತು. ಆದರೆ ಈ ಬಾರಿ ಹಬ್ಬದ ಸಂಭ್ರಮ ಮರೆಯಾಗಿ ಕಳಾಹೀನವಾಗಿದೆ. ಹಣ್ಣು, ತರಕಾರಿ ವ್ಯಾಪಾರಿಗಳ ಮುಖದಲ್ಲಿ ಮದಹಾಸ ಮಾಯಾವಾಗಿದ್ದು ಹಬ್ಬದ ಖುಷಿ ಕಾಣುತ್ತಿಲ್ಲ.
ಕರೊನಾ ಕರಿ ನೆರಳಿನಲ್ಲಿ ಬಂದಿರುವ ದೀಪಾವಳಿ ಹಬ್ಬ ಕಳೆಗುಂದಿದೆ. ಮಾಋಉಕಟ್ಟೆಗೆ ಬಂದಿರುವ ಬಗೆ ಬಗೆಯ ಹಣ್ಣು, ಹೂವು ಮಾರಾಟಗಾರರಿಗೆ ಪೆಟ್ಟು ನೀಡಿದೆ. ಗ್ರಾಹಕರು ಮಾರುಕಟ್ಟೆ ಬರದೆ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
ಕರೊನಾ ಹಿನ್ನಲೆಯಲ್ಲಿ ವ್ಯಾಪಾರಸ್ಥರು ಹೆಚ್ಚು ಜನ ಸಂದಣಿ ಸೇರಿಸದೆ ಸರಳವಾಗಿ ದೀಪಾವಳಿ ಆಚರಿಸುತ್ತಿರುವದರಿಂದ ಹಬ್ಬದ ಕಳೆ ಇಲ್ಲದಂತಾಗಿದೆ. ಭಾನುವಾರ ದೀಪಾವಳಿ ಅಮಾವಾಸ್ಯೆ ಮತ್ತು ಸೋಮವಾರ ಪಾಢ್ಯ ಇರುವದರಿಂದ ಶನಿವಾರ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿ ನಡೆಯಬೇಕಿತ್ತು. ಆದರೆ ಖರೀದಿದಾರರು ಬಾರದೆ ಮಾರುಕಟ್ಟೆ ಬೀಕೋ ಎನ್ನುತ್ತಿತ್ತು.


ಪ್ರತಿವರ್ಷ ಅತಿ ಹೆಚ್ಚು ದೀಪ ಹಚ್ಚುವ ಹಣತೆಯನ್ನು ಮಾರುತ್ತಿದ್ದು ಅಮರೇಶ ಕುಂಬಾರ ಈ ವರ್ಷ ಕಡಿಮೆ ಹಣತೆ ಮಾರಾಟವಾಗಿದೆ. ನಿರಿಕ್ಷೀತ ವ್ಯಾಪಾರವಿಲ್ಲ. ಹಣತೆಗಳು ಹಾಗೆ ಉಳಿದುಕೊಂಡಿವೆ ಎಂದು ಅಸಾಯಕತೆ ತೊಡಿಕೊಂಡಿದ್ದಾನೆ.
ಈ ವರ್ಷ ಮೊದಲಿನಷ್ಟು ವ್ಯಾಪಾರ ಜೋರು ಇಲ್ಲ ಎಂದು ಹಣ್ಣು ಮಾರುವ ಪಂಪಣ್ಣ ನಂದಿಹಾಳ ಹೇಳಿದರು. ಪ್ರತಿವರ್ಷ ಹಬ್ಬ ಎರಡು ಮೂರು ದಿನ ಮೊದಲೇ ವ್ಯಾಪರ ಜೋರಾಗಿ ನಡೆಯಿತ್ತಿತ್ತು. ಆದರೆ ಈ ಬಾರಿ ವ್ಯಾಪರದ ಕಳೆಯೇ ಇಲ್ಲ ಎಂದರು.

Don`t copy text!