e-ಸುದ್ದಿ ಮಸ್ಕಿ
ತಾಲೂಕಿನ ಬಳಗಾನೂರು ಪಟ್ಟಣದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸೌಂಡ್ಸ್‍ಬಾಯ್ಸ್ ಸಂಸ್ಥೆ ವತಿಯಿಂದ ಅರುಣೋದಯ ಪ್ರೌಢ ಶಾಲಾ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ ಮುಕ್ತ ವಾಲಿಬಾಲ್ ಪಂದ್ಯಾವಳಿಯನ್ನು ಪಪಂ ಅಧ್ಯಕ್ಷೆ ನೂರಜಹಾನ್‍ಬೇಗಂ ಉದ್ಘಾಟಿಸಿ ಚಾಲನೇ ನೀಡಿದರು.
ಪ.ಪಂ.ಅಧ್ಯಕ್ಷೆ ನೂರಜಹಾನ್ ಬೇಗಂ ಮಾತನಾಡಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಉಪನ್ಯಾಸಕಿ ನಾಗರತ್ನ ಗುತ್ತೇದಾರ ಮಾತನಾಡಿ ಸೌಂಡ್ಸ್‍ಬಾಯ್ಸ್ ವತಿಯಿಂದ ಯುವಕರು ಗ್ರಾಮೀಣ ಭಾಗದಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಂತ ಕೆಲಸ ಮಾಡುತ್ತಿದ್ದಾರೆ ಎಂದರು.
ಗ್ರಾಮದ ಮುಖಂಡ ಮರಿಯಪ್ಪ ಯಾದಗಿರಿ, ಯುವಕರಾದ ಬಸವರಾಜ ಯಾದಗಿರಿ, ಶರಣುಸ್ವಾಮಿ, ಶಿವಶರಣ ಉಪ್ಪಾರ, ಶಂಕರಣ್ಣ ನಾಯ್ಕರ್,ಶಿವಕುಮಾರ ನಾಯಕ, ಬಸವರಾಜ ಅಳ್ಳಳ್ಳಿ ಪಪಂ ಸದಸ್ಯ ರಾಜಶೇಖರ ಶಂಕರಬಂಡಿ, ಬುಳ್ಳನಗೌಡ ಶಂಕರಬಂಡಿ, ಚನ್ನಬಸವ ಹಡಪದ್, ಅಮರೇಶ ಕುಂಬಾರ, ಸಿದ್ದು ಬಾರಿಕೇರ್,ದೈಹಿಕ ಶಿಕ್ಷಕರಾದ ರವೀಂದ್ರ, ಹಂಪನಗೌಡ ಪೊಲೀಸ್‍ಪಾಟೀಲ್, ಬಸವಲಿಂಗ ತಾಳಿಕೋಟಿ ಭಾಗವಹಿಸಿದ್ದರು.