ನಿಮ್ಮ ಆಹಾರ ನಿಮಗೆಷ್ಟು ಗೊತ್ತು ?
-ಸೌತೆ ಕಾಯಿ
ಸೌತೆ ಕಾಯಿ ಬಳ್ಳಿಯ ರೂಪದಲ್ಲಿ ಹಬ್ಬುವ ಸಸ್ಯ. ಬಳ್ಳಿಯಲ್ಲಿ ನೇತಾಡುವ ಕಾಯಿಗಳಲ್ಲಿ ಹೇರಳವಾಗಿ ನೀರಿನ ಅಂಶ ಮತ್ತು ನಾರಿನ ಅಂಶಗಳು ಇವೆ. ಜೊತೆಗೆ 2% (ಬಿ1) ಥಯಮೈನ್, 3% (ಬಿ2) ರಿಬೋಪ್ಲಾವಿನ್, 1% (ಬಿ3) ನಿಯಾಸಿನ್, 5% (ಬಿ5) ಪ್ಯಾಂತೋಥೆನಿಕ್ ಆಸಿಡ್, 3% ಬಿ ವಿಟಮಿನ್ ಬಿ6, 2% ಫೋಲೇಟ್ (ಬಿ9), ವಿಟಮಿನ್ ಸಿ, ೩%, ವಿಟಮಿನ್ ಕೆ (16%), ಕ್ಯಾಲ್ಶಿಯಮ್ 2%, ಕಬ್ಬಿಣ 2%, ಮೆಗ್ನಿಶಿಯಮ್ 4%, ಫಾಸ್‌ಫರಸ್ 3%, ಪೊಟಾಷಿಯಮ್ 3%, ಸತು 2% ಇರುತ್ತದೆ. ಹಸಿ ಸೌತೆಕಾಯಿಯಲ್ಲಿ 95% ನೀರಿನ ಅಂಶವೇ ಇರುತ್ತದೆ ಉಳಿದ 5% ನಲ್ಲಿ ಕಾರ್ಬೋಹೈಡ್ರೆಡ್ 4% ಮತ್ತು 1% ಪ್ರೋಟಿನ್ ಇರುತ್ತದೆ. ಸೌತೆಕಾಯಿ 3000 ವರ್ಷಗಳ ಇತಿಹಾಸವಿದೆ. ಸೌತೆ ಕಾಯಿಯ ಮೂಲ ಭಾರತವಾಗಿದೆ. ಸಸ್ಯ ಶಾಸ್ತ್ರದ ಪ್ರಕಾರ ಸೌತೆ ಕಾಯಿಯನ್ನು ಹಣ್ಣೆಂದು ಪರಿಗಣಿಸಲಾಗುತ್ತದೆ.
ಸೌತೆ ಕಾಯಿಯು ಲೋ ಕ್ಯಾಲರಿ ಮತ್ತು ಹೆಚ್ಚಿನ ಪ್ರಮಾಣದ ನ್ಯೂಟ್ಟಿಷನ್ ಹೊಂದಿರುವ ತರಕಾರಿಯಾಗಿದೆ. ಸೌತೆಕಾಯಿ ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ. ಸೌತೆ ಕಾಯಿ ಸೇವನೆ ಕ್ಯಾನ್ಸರ್, ಹೃದ್ರೋಗ ಮೊದಲಾದ ಕಾಯಿಲೆಗಳಲ್ಲಿ ಸಹಾಯಕವಾಗಿ ಕೆಲಸ ಮಾಡುತ್ತದೆ.
ಸೌತೆಕಾಯಿ ದೇಹದಲ್ಲಿರುವ ನೀರಿನ ಅಂಶಗಳನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಉಷ್ಣತೆಯನ್ನು ಕಾಪಾಡಿಕೊಂಡು, ಅನಾವಶ್ಯಕ ಪದಾರ್ಥಗಳನ್ನು ಹೊರಹಾಕುವಲ್ಲಿ ಸಹಾಯಕವಾಗಿದೆ. ಹೀಗೆ ಜೀರ್ಣಕ್ರಿಯೆಗೂ ಸಹಾಯಕವಾಗಿದೆ. ಸೌತೆಕಾಯಿಯನ್ನು ನೀರಿನಲ್ಲಿ ರಾತ್ರಿ ಈಡೀ ನೆನಸಿಟ್ಟು ನೀರು ಕುಡಿದಾಗ ದೇಹದಲ್ಲಿ ಹೆಚ್ಚಾಗಿರುವ ಅನವಶ್ಯಕ ಪದಾರ್ಥಗಳು ದೇಹದಿಂದ ಹೊರ ಹೋಗುತ್ತವೆ.
ಸೌತೆಕಾಯಿ ಸೇವನೆ ಮಧುಮೇಹವನ್ನೂ ಕಡಿಮೆ ಮಾಡುತ್ತದೆ.
ಸೌತೆಕಾಯಿಯ ಸೇವನೆ ಆರೋಗ್ಯಕ್ಕೆ ಬಹು ಉಪಕಾರಿಯಾಗಿದೆ.
ಇವೆಲ್ಲಾ ಔಷಧೀಯ ಉಪಯೋಗಗಳಾದರೆ ಸೌತೆಕಾಯಿಯ ಹೋಳುಗಳನ್ನು ಕಣ್ಣುಗಳ ಮೇಲೆ ಇಟ್ಟುಕೊಳ್ಳುತ್ತಾರೆ. ಮುಖಕ್ಕೆ ಫೇಸ್ ಪ್ಯಾಕ್ ಮಾಡಿ ಕೂಡ ಬಳಸಲಾಗುತ್ತದೆ. ಸೌಂದರ್ಯ ವರ್ಧಕವಾಗಿಯೂ ಬಳಸಲಾಗುತ್ತದೆ.
ಸೌತೆಕಾಯಿಯ ಸೇವನೆ ಹಾಗೆಯೇ ಮಾಡಬಹುದು. ಬರೇ ಸೌತೆಕಾಯ ತಿನ್ನುವುದಕ್ಕಿಂತ ಉಪ್ಪು ಖಾರ ಸವರಿ ತಿಂದಾಗ ರುಚಿ ಹೆಚ್ಚು, ಕೋಸಂಬರಿ, ಸಲಾಡ್‌ಗಳ ರೂಪದಲ್ಲೂ ಬಳಸಬಹುದು.
ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸುತ್ತದೆ.
ಕಣ್ಣಿನಲ್ಲಿ ಉಂಟಾಗುವ ಉರಿ ಕಡಿಮೆ ಮಾಡಿ ತಾಜಾತನವನ್ನು ಕಾಯ್ದುಕೊಳ್ಳುತ್ತದೆ. ಬಿಸಿಲಿನಿಂದ ಸುಡುವ ಚರ್ಮಕ್ಕೆ ರಕ್ಷಣೆ ನೀಡುತ್ತದೆ.
ಮುಖದ ಮತ್ತು ಕಣ್ಣಿನ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
ಕಣ್ಣಿನ ಸುತ್ತಲಿನ ಕಪ್ಪು ವರ್ತುಲಗಳನ್ನು ಕಡಿಮೆ ಮಾಡುತ್ತದೆ.
ಕೂದಲು ಉದುರುವುದನ್ನು ಕಡಿಮೆ ಮಾಡುವುದರೊಂಧಿಗೆ ಕೂದಲಿಗೆ ಕಾಂತಿಯನ್ನು ಕೂಡ ನೀಡುತ್ತದೆ. ಮಲಬದ್ಧತೆಯನ್ನು ಹೋಗಲಾಡಿಸುತ್ತದೆ.
ಜೀರ್ಣಕ್ರಿಯನ್ನು ಸರಳಗೊಳಿಸಿ ಜೀರ್ಣಕ್ರಿಯೆಯ ವ್ಯವಸ್ಥೆಯನ್ನು ಸರಳವಾಗಿಸುತ್ತದೆ. ಹೊಟ್ಟೆಯಲ್ಲಿ ಉಂಟಾಗುವ ಹುಳಗಳೊಂದಿಗೆ ಹೋರಾಡುತ್ತದೆ. ಸೋಂಕನ್ನು ತಡೆಗಟ್ಟುವಲ್ಲಿ ಸಹಾಯಕ
ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಸಹಾಯಕ
ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಾಯಕ. ಹಲ್ಲಿನ ಆರೋಗ್ಯಕ್ಕೆ ಉತ್ತಮ. ರಕ್ತದ ಒತ್ತಡಕ್ಕೂ ಸಹಕಾರಿ. ನಶೆಯನ್ನು ಕಡಿಮೆ ಮಾಡುತ್ತದೆ. ಮೂಳೇಗಳಿಗೆ ಶಕ್ತಿ ನೀಡುತತದೆ.
ನರಗಳಿಗೆ ಶಕ್ತಿಯನ್ನು ನೀಡುತ್ತದೆ.
ಅಲ್‌ಜಮರ್ ಕಾಯಿಲೆಯ ಚಿಕಿತ್ಸೆಯಲ್ಲಿ ಉಪಯೋಗಕಾರಿ
ತೂಕ ಇಳಿಸಲು ಅತೀ ಉತ್ತಮ ಪದಾರ್ಥ
ದಿನ ನಿತ್ಯವೂ ಹಸಿ ತರಕಾರಿಯಾದ ಸೌತೆಕಾಯಿ ಸೇವಿಸಿ ಆರೋಗ್ಯವಂತರಾಗಿ
–ಮಾಧುರಿ ದೇಶಪಾಂಡೆ, ಬೆಂಗಳೂರು