ಫ.ಗು.ಹಳಕಟ್ಟಿಯವರ 142 ನೇ ಜಯಂತೋತ್ಸವ , ವಚನ ಸಾಹಿತ್ಯ ಸಂರಕ್ಷಣಾ ದಿನ

ಫ.ಗು.ಹಳಕಟ್ಟಿಯವರ 142 ನೇ ಜಯಂತೋತ್ಸವ , ವಚನ ಸಾಹಿತ್ಯ ಸಂರಕ್ಷಣಾ ದಿನ

e-ಸುದ್ದಿ ಇಲಕಲ್ಲ

ಇಲಕಲ್ಲ ನಗರದಲ್ಲಿ ಸೋಮವಾರ 25-7-22 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀವಿಜಯಮಹಾಂತೇಶ ಅನುಭವ ಮಂಟಪದಲ್ಲಿ ಫ.ಗು.ಹಳಕಟ್ಟಿಯವರ 142 ನೇ ಜಯಂತೋತ್ಸವ , ವಚನ ಸಾಹಿತ್ಯ ಸಂರಕ್ಷಣಾ ದಿನ ಕಾರ್ಯಕ್ರಮವನ್ನು ಬಸವ ಕೇಂದ್ರ ಮತ್ತು ವಿಜಯಮಹಾಂತೇಶ್ವರ ಮಠದಿಂದ ಆಯೋಜಿಸಿದೆ.
ಚಿತ್ತರಗಿ ಮತ್ತು ಇಲಕಲ್ಲ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ.ಮ.ನಿ.ಪ್ರ. ಗುರುಮಹಾಂತ ಸ್ವಾಮಿಗಳು ದಿವ್ಯ ಸಾನ್ನಿಧ್ಯವಹಿಸುವರು.
ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್ ಯಡಿಯೂರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಪ್ರೋ.ಸಿದ್ದಣ್ಣ ಲಂಗೋಟಿ ವಿರಚಿತ ಫ.ಗು.ಹಳಕಟ್ಟಿ ಅವರ ಕುರಿತ ಪುಸ್ತಕ ಅನಾವರಣಗೊಳಿಸುವರು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಹುನುಗುಂದ ಶಾಸಕ ಶ್ರೀ ದೊಡ್ಡನಗೌಡ ಪಾಟೀಲ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇಲಕಲ್ಲ ನಗರ ಸಭೆಯ ಅಧ್ಯಕ್ಷ ಶ್ರೀ ಮಂಜುನಾಥ ಶಟ್ಟರ್ ಆಗಮಿಸುವರು.
ಡಾ.ಎಂ.ಎಸ್.ಮದಬಾವಿ ಕಾರ್ಯದರ್ಶಿಗಳು ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ವಿಜಯಪುರ ಇವರು ಅನುಭಾವ ನೀಡಲಿದ್ದಾರೆ.

ನಿವೇದಿತಾ ರಾಜು ಕುಬಸದ ಮತ್ತು ರಾಜು ಕುಬಸದ ಶಿರಾಳಕೊಪ್ಪ, ಡಾ.ಕಾರ್ತಿಕ ರಾಜು ಶಿರಾಳಕೊಪ್ಪ ಅವರನ್ನು ಸತ್ಕರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಇಲಕಲ್ಲ ನಗರದ ಬಸವ ಕೇಂದ್ರ, ಅಕ್ಕನ ಬಳಗ, ವಿಜಯಮಹಾಂತೇಶ ತರುಣ ಸಂಘ, ಯುವ ಸೇವಾ ಬಳಗ ಹಾಗೂ ಇತರ ಸಂಘಟನೆಯ ಸದಸ್ಯರು ಕಾರ್ಯಕ್ರಮ ಆಯೋಜಿಸಿದ್ದಾರೆ.

Don`t copy text!