ಮಸ್ಕಿಯಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ
ಪತ್ರಕರ್ತರು ವೃತ್ತಿ ಬದ್ಧತೆ ಅರಿತು ಕಾರ್ಯ ನಿರ್ವಹಿಸಿ-ಶಿವಾನಂದ ತಗಡೂರು
e-ಸುದ್ದಿ ಮಸ್ಕಿ
ಪತ್ರಕರ್ತರು ವೃತ್ತಿ ಬದ್ಧತೆ ಅರಿತು ಕಾರ್ಯ ನಿರ್ವಹಿಸಬೇಕು. ನೊಂದವರ, ದೀಣ ದಲಿತರ ಧ್ವನಿಯಾಗಿ ಕೆಲಸ ಮಾಡಬೇಕು. ಪತ್ರಿಕೊಧ್ಯಮದ ಪಾವಿತ್ರö್ಯತೆಗೆ ದಂಧೆಕೋರ ಪತ್ರಕರ್ತರಿಂದ ಧಕ್ಕೆಯಾಗುತ್ತಿದೆ. ಅದನ್ನು ಹಿಮ್ಮಟ್ಟಿಸುವ ಕೆಲಸ ಪ್ರಮಾಣಿಕ ಪತ್ರಕರ್ತರು ಮಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಕರೆ ನೀಡಿದರು.
ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ರಿಪೋಟರ್ಸ ಗೀಲ್ಢ್ ಸಂಯುಕ್ತವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಗೆ ಚಾಲನೇ ನೀಡಿ ಮಾತನಾಡಿದರು.
ಇಂದು ನಮಗೆ ಸಂಭ್ರಮ ಸಡಗರದ ದಿನ. ಪತ್ರಕರ್ತರು ಒಂದು ವೇದಿಕೆಗೆ ಸೇರುವ ಒಂದು ದಿನ ಅಚಿದ್ರೆ ಅದು ಜುಲೈ ೧ ನೇ ದಿನ. ಪತ್ರಿಕೆ ಪ್ರಾರಂಭವಾದ ದಿನವನ್ನು ಜುಲೈ ತಿಂಗಳ ಪೂರ್ತಿ ಪತ್ರಿಕೆ ದಿನಾಚರಣೆ ಆಚರಣೆ ಮಾಡಲಾಗುತ್ತದೆ ಎಂದರು.
ಮಸ್ಕಿಯಲ್ಲಿ ನೂತನ ಸುಂದರವಾದÀ ಪತ್ರಿಕಾ ಭವನ ನಿರ್ಮಾಣ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಪತ್ರಿಕಾ ಭವನ ದೇವಸ್ಥಾನದಷ್ಟೆ ಪವಿತ್ರವಾದ ಸ್ಥಳವಾಗಿದ್ದು, ಮಸ್ಕಿಯ ಪತ್ರಕರ್ತರು ಆಸಕ್ತಿ ಮತ್ತು ಬದ್ಧತೆಯಿಂದ ಭವನ ನಿರ್ಮಾಣ ಮಾಡಿದ್ದಾರೆ ಎಂದರು.
ಪತ್ರಕರ್ತರು ವೃತ್ತಿ ಮಾಡುವಾಗ ಅನೇಕ ಸವಾಲುಗಳನ್ನು ಎದುರಿಸುತ್ತೇವೆ. ಇದು ಸರ್ಕಾರಿ ನೌಕರಿಯಲ್ಲ. ಪತ್ರಕರ್ತನಾಗಬೇಕಾದರೆ ಒಂದು ಬದ್ಧತೆ ಬೇಕು. ರಾತ್ರಿ ಯುಟ್ಯೂಬ ಚಾನಲ ಓಪನ್ ಮಾಡತ್ತಾರೆ. ಬೆಳಿಗ್ಗೆ ಪತ್ರಕರ್ತ ಎಂದು ಲೋಗೋ ಹಿಡಕೊಂಡು ಫೀಲ್ಡ್ಗೆ ಇಳಿದರೆ ಅವರೆಲ್ಲ ಪತ್ರಕರ್ತರು ಆಗಲ್ಲ. ದಂಧೆಗೋಸ್ಕರ್ ಪತ್ರಿಕೊಧ್ಯಮವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಇಚಿತವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಶಿವಾನಂದ ತಗಡೂರು ಕಳವಳ ವ್ಯಕ್ತಪಡಿಸಿದರು.
ಬ್ಲಾಕ್‌ಮೇಲ್ ಪತ್ರಕರ್ತರು ಪತ್ರಿಕೊದ್ಯಮ ಬಿಟ್ಟು ತೊಲಗಿ, ಈ ಕ್ಷೇತ್ರವನ್ನು ಹಾಳುಮಾಡಬೇಡಿ ಎಂದು ದಂಧೆಕೊರ ಪತ್ರಕರ್ತರಿಗೆ ಎಚ್ಚರಿಸಿದರು.
ಪತ್ರಿಕಾ ಭವನವನ್ನು ಉದ್ಘಾಟನೆ ಮಾಡಿದ ಶಾಸಕ ಬಸನಗೌಡ ತುರ್ವಿಹಾಳ ಮಾತನಾಡಿ ಪತ್ರಕರ್ತರಿಗೆ ಸಮಾಜದಲ್ಲಿ ವಿಶೇಷ ಜವಬ್ದಾರಿ ಇದೆ. ಮಾನವೀಚಿiÀÄ ಮೌಲ್ಯ, ಸಾಮಾಜಿಕ ಕಳಕಳಿ ಹೊಂದಿದವರು ಪತ್ರಕರ್ತರಾಗಬೇಕು. ನಾವುಗಳು ತಪ್ಪು ಮಾಡಿದಾಗ ಯಾವುದೇ ಮುಲಾಜಿಲ್ಲದೆ ಟೀಕಿಸಿ ನಮ್ಮನ್ನು ಸರಿ ದಾರಿಗೆ ದರಬೇಕು ಎಂದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ ಮಧ್ಯಾಮ ಕ್ಷೇತ್ರ ತನ್ನದೆ ಆದ ಸ್ಥಾನ ಮಾನ ಗೌರವವಿದೆ. ಇಚಿತಹ ರಂಗದಲ್ಲಿ ಕೆಲಸ ಮಾಡುವವರು ಅತ್ಯಂತ ಜವಬ್ದಾರಿಯುತರಾಗಿ ಕೆಲಸ ಮಾಡಬೇಕು. ಇತ್ತೀಚಿಗೆ ದೃಶ್ಯ ಮಾಧ್ಯಮಗಳು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವ ಸುದ್ದಿಗಳನ್ನು ವೈಭೀವಿಕರಿಸಿ ದಿನದ ೨೪ ಗಂಟೆ ಬಿತ್ತಿರಿಸುವ ಮೂಲಕ ಜನರ ಮನಸ್ಸುನ್ನು ಹಾಳು ಮಾಡುವ ಬದಲಿಗೆ ಜನರನ್ನು ಜಾಗೃತಗೊಳಿಸುವ ಸುದ್ದಿಗಳನ್ನು ಬಿತ್ತರಿಸಬೇಕು ಎಂದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿದ್ದ ಗಚ್ಚಿನ ಹಿರೇಮಠದ ಷ.ಬ್ರ.ಶ್ರೀ ವರರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ, ಗುರುನಾಥ, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಅಜೀಜ್, ಪತ್ರಕರ್ತ ವೀರೇಶ ಸೌದ್ರಿ ಮಾತನಾಡಿದರು.
ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಚನ್ನಬಸವಣ್ಣ, ವಿಜಯ ಜಾಗಟಗಲ್, ಪ್ರಕಾಶ ಮಸ್ಕಿ ಉಪಸ್ಥಿತರಿದ್ದರು.
ಸನ್ಮಾನ ಃ ಜಿಲ್ಲೆಯ ೧೬ ಜನರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ರಾಯಚೂರು ರಿಪೋಟರ‍್ಸ್ ಗೀಲ್ಡ್ ಸಂಯುಕ್ತವಾಗಿ ಪ್ರಶಸ್ತಿ ನೀಡಿ ಗೌರವಿಸಿದರು.