ಲಿಂಗಾಯತ ಮಾನವ ಹಕ್ಕುಗಳ ಆಂದೋಲನದ ಹೊಸ ಮಾರ್ಗ

ಲಿಂಗಾಯತ ಮಾನವ ಹಕ್ಕುಗಳ ಆಂದೋಲನದ ಹೊಸ ಮಾರ್ಗ

ಬುದ್ಧನ ನಂತರ ಹದಿನೇಳು ನೂರು ವರುಷದ ಮೇಲೆ ಕನ್ನಡದ ನೆಲದಲ್ಲಿ ಬಸವಣ್ಣನವರು ಸಮಗ್ರ ಕ್ರಾಂತಿ ಪರಿಪೂರ್ಣ ಕ್ರಾಂತಿಗೆ ಕರೆ ಕೊಟ್ಟು ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಮಾನವ ಹಕ್ಕುಗಳ ಆಂದೋಲನದ ಹೊಸ ಮಾರ್ಗ ಅದು ಲಿಂಗಾಯತ ಧರ್ಮ ಮತ್ತು ವಚನ ಚಳುವಳಿ ಎಂದು ಕರೆಯುತ್ತೇವೆ.
ದಮನಿತರ ಶೋಷಿತರ ಕಾರ್ಮಿಕರ ಬಡವರ ದಲಿತರ ಪರವಾಗಿ ಗಟ್ಟಿ ಧ್ವನಿ ಎತ್ತಿದನು ಬಸವಣ್ಣ.
ಜಗತ್ತಿಗೆ ಮೊದಲ ಸಂಸತ್ತು ಅನುಭವ ಮಂಟಪದ ಪರಿಕಲ್ಪನೆ ಕೊಟ್ಟವರು ಬಸವಣ್ಣ.

1) ಕಾಯಕ

ಕಾಯಕ ಕಡ್ಡಾಯ ಎಂದು ಹೇಳಿ ಪ್ರತಿಯೊಬ್ಬ ಭಕ್ತನು ದುಡಿದು ತನ್ನ ಅನ್ನ ಸಂಪಾದಿಸಬೇಕು. ಕಾಯಕ ಶ್ರಮಿಕ ವರ್ಗದ ಕಡ್ಡಾಯ ಭಕ್ತಿ

2) ದಾಸೋಹ
ದಾಸೋಹ ತನ್ನ ದುಡಿಮೆ ಗಳಿಕೆಯಲ್ಲಿ ಸಮಾಜದ ಒಳ್ಳೆಯ ನಿರ್ಧಾರ ಸಮಾಜದ ಉತ್ತಮ ಕಾರ್ಯ ಅಭಿವೃದ್ಧಿಗೆ ಭಕ್ತನು ಕಡ್ಡಾಯವಾಗಿ ಆರ್ಥಿಕ ಸಂಪನ್ಮೂಲಗಳನ್ನು ಸಮಾಜಕ್ಕೆ ನೀಡಿ ಭಕ್ತನು ತಾನು ಬದುಕಿ ಸಮಾಜವನ್ನೂ ನೆಮ್ಮದಿ ಸುಖ ಸಂತೋಷಕ್ಕೆ ಎಡೆ ಮಾಡಿ ಕೊಡುವ ಕರ್ತವ್ಯ.
ಶರಣರು ಕರ್ಮವನ್ನು ವಿರೋಧಿಸಿದರು ಕಾಯಕ ಕಡ್ಡಾಯಗೊಳಿಸಿದರು. ದಾನವನ್ನು ಧಿಕ್ಕರಿಸಿದರು ಆದರೆ ದಾಸೋಹ ಆರ್ಥಿಕ ವಿಕೇಂದ್ರೀಕರಣ ಹಂಚುವಿಕೆ ಬೆಂಬಲಿಸಿದರು.

3) ದಾಂಪತ್ಯ ಧರ್ಮ
ಶರಣರು ಎಂದೂ ಸನ್ಯಾಸ ಬ್ರಹ್ಮಚರ್ಯೆ ಒಪ್ಪಲಿಲ್ಲ.
ಇದು ಗಂಡು ಮತ್ತು ಹೆಣ್ಣು ಸಾಮಾನ ಅವಕಾಶ ಪರಸ್ಪರ ಗೌರವ ಕೌಟುಂಬಿಕ ಸಂಬಂಧ ಅರ್ಥ ಪೂರ್ಣ.
ಸತಿ ಪತಿಗಳಿಂದಾದ ಭಕ್ತಿ ಹಿತ ಒಪ್ಪುದು ಶಿವಂಗೆ ಎಂದು ಹೇಳಿದ್ದಾರೆ ಶರಣರು.

4) ಇಷ್ಟಲಿಂಗ
ಇಷ್ಟಲಿಂಗ ಹಲವು ಕಾರಣಗಳಿಂದ ಲಿಂಗಾಯತ ಧರ್ಮೀಯರಿಗೆ ಅಗತ್ಯ ಕ್ರಮ.

ಅರುಹನರಿಯಲೆಂದು ಗುರು ಕೊಟ್ಟ ಕುರುಹು.
ಇಷ್ಟ ಲಿಂಗ ಸ್ಥಾವರ ವಿರೋಧಿಯ ಸಾಕ್ಷಿ ಪ್ರಜ್ಞೆ.
ಅರಿವಿನ ಆಂದೋಲನದ ಗಟ್ಟಿಯಾದ ಸಾಧನ.
ಲಿಂಗಯೋಗ ಲಿಂಗ ತ್ರಾಟಕ ಉಪಾದಿತವಲ್ಲದ ಪರಮ ಚೈತನ್ಯ ಮತ್ತು ಜಂಗಮ ಶಕ್ತಿಯ ಪ್ರತಿಕ.
ಇಷ್ಟಲಿಂಗ ಲಿಂಗಾಯತನ ಅಸ್ಮಿತೆ ಘನತೆ ಮತ್ತು ತನ್ನ ತಾನು ಅರಿಯುವ ಕನ್ನಡಿ.

5) ಅಷ್ಟಾವರಣಗಳು
ಸಮಷ್ಟಿಯ ಪಂಚ ಮಹಾಭೂತ ಸೂರ್ಯ ಚಂದ್ರ ಭೂಮಿ ಹೀಗೆ ಎಂಟು ಅವರಣಗಳನ್ನು ಒಂದೊಂದು ತತ್ವ ನೀತಿ ಎಂದು ತಿಳಿಸುವ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಗೆ ದಾರಿ ಮಾಡಿಕೊಡುವ
ಎಂಟು ತತ್ವಗಳು. ಗುರು ಲಿಂಗ ಜಂಗಮ ಮಂತ್ರ ವಿಭೂತಿ ರುದ್ರಾಕ್ಷಿ ಪಾದೋದಕ ಮತ್ತು ಪ್ರಸಾದ.

ಅರಿವೇ ಗುರು ಆಚಾರವೇ ಲಿಂಗ ಅನುಭಾವ ಜಂಗಮ
ಗುರು ವ್ಯಕ್ತಿ ಲಿಂಗ ವಸ್ತು ಜಂಗಮ ಜಾತಿ ಅಲ್ಲವೇ ಅಲ್ಲ.

6) ಸ್ತ್ರೀ ಸಮಾನತೆ

ಜಗತ್ತಿನ ಯಾವ ಧರ್ಮದಲ್ಲಿಯೂ ಕೂಡ ಲಿಂಗಾಯತ ಧರ್ಮದಲ್ಲಿನ
ಸ್ತ್ರೀ ಸಮಾನತೆ ಮತ್ತು ಮಹಿಳಾ ಸಬಲೀಕರಣ ಇನ್ನೊಂದು ಧರ್ಮದಲ್ಲಿ ಇಲ್ಲ.
*ಹೆಣ್ಣು ಸ್ವತಃ ಕಪಿಲ ಸಿದ್ಧ ಮಲ್ಲಿಕಾರ್ಜುನ.* ಹೆಣ್ಣಿಗೆ ಇಷ್ಟೊಂದು ಗೌರವ ಮತ್ತು ಸ್ಥಾನಮಾನ ಯಾವ ಧರ್ಮದಲ್ಲಿಯೂ ಕಂಡಿಲ್ಲ.
ಸ್ತ್ರೀಗೆ ಆರ್ಥಿಕ ಸ್ವಾವಲಂಬನೆ ಸಾಮಾಜಿಕ ಮನ್ನಣೆ ಧಾರ್ಮಿಕ ಹಕ್ಕು ಪೂರೈಸಿ ಅವಳನ್ನು ಪರಿಪೂರ್ಣ ಸ್ವಾತಂತ್ರ ಮತ್ತು ಸಂಪೂರ್ಣ ದಾಸ್ಯತ್ವದಿಂದ ಮುಕ್ತಿಗೊಳಿಸಿದ ಧರ್ಮ ಲಿಂಗಾಯತ ಚಳುವಳಿ

7) ಲಿಂಗಾಯತ ಒಂದು ಸ್ವತಂತ್ರ ಧರ್ಮ

ಲಿಂಗಾಯತ ಒಂದು ಅವೈದಿಕ ಹಿಂದೂಯೇತರ ಬೌದ್ಧ ಜೈನ ಸಿಖ್ ಮುಸ್ಲಿಂ ಮತ್ತು ಕ್ರೈಸ್ತ್ ಧರ್ಮದಂತೆ ಶಾಸನ ಮತ್ತು ಸಂವಿಧಾನ ಮಾನ್ಯತೆ ಪಡೆಯುವ ಏಕ ಮಾತ್ರ ದಕ್ಷಿಣ ಭಾರತದ ಕನ್ನಡಿಗರು ಕಟ್ಟಿದ ಮೊದಲನೇ ಧರ್ಮ
ಬ್ರಿಟಿಷ್ ಕಾಲದಲ್ಲಿ ಸ್ವತಂತ್ರ ಧಾರ್ಮಿಕ ಮಾನ್ಯತೆ ಇತ್ತು.

8) ಲಿಂಗಾಯತ ಧರ್ಮ ಮತ್ತು ಧಾರ್ಮಿಕ ಅಲ್ಪ ಸಂಖ್ಯಾತ ಸ್ಥಾನ ಮಾನಕ್ಕೆ ಏಕೆ ವಿಳಂಬ?

ಲಿಂಗಾಯತ ಚಳುವಳಿ ಮತ್ತು ಮಾನ್ಯತೆ ಹೋರಾಟಕ್ಕೆ ಈಗ ಎರಡನೂರು ವರುಷಗಳ ಸುದೀರ್ಘ ಇತಿಹಾಸವಿದೇ.

ಆದರೆ ಲಿಂಗಾಯತ ಚಳುವಳಿ ಮತ್ತು ಧರ್ಮ ಕಳೆದ ಕೆಲವು ದಶಕಗಳಿಂದ ಹೋರಾಡುತ್ತಿದ್ದರೂ ಪ್ರತಿಫಲ ಕಾಣದ ನಿರಾಸೆ ಎದ್ದು ಕಾಣುತ್ತಿದೆ.

9) ವೀರಶೈವ ಲಿಂಗಾಯತ ಧರ್ಮದ ದಾಯಾದಿ

ಬಸವೋತ್ತರ ಕಾಲದಲ್ಲಿ ಆಂಧ್ರ ಮೂಲದ ಶೈವ ಧರ್ಮದ ಪ್ರಭೇದವಾದ ವೀರಶೈವ ಎಂಬ
ವ್ರತ ಲಿಂಗಾಯತ ಧರ್ಮವನ್ನು ಅತಿಕ್ರಮಿಸಿ ಕೊಂಡು ಕೆಲ ಲಿಂಗಾಯತ ಆಚರಣೆಗಳನ್ನು ಯಾಮಾರಿಸಿ ಬಸವ ಪೂರ್ವದ ಚರಿತ್ರೆ ಇತಿಹಾಸದ ಖೊಟ್ಟಿ ರಚನೆ ಮಾಡಿ ಲಿಂಗಾಯತ ಧರ್ಮದ ತಮ್ಮ ಪಾರುಪತ್ಯ ಉಳಿಸಿಕೊಂಡು ಮೂಲ ಲಿಂಗಾಯತ ತತ್ವಗಳನ್ನು ವಿರೂಪಗೊಳಿಸಿ ವೈದಿಕತೆ ಸೇರಿಸಿ ತಮ್ಮ ಪೌರೋಹಿತ್ಯ ಸಾಂಗವಾಗಲು ಕಂಕಣ ಬದ್ಧರಾದರು.
ಇತ್ತ ಬಸವ ಪರಂಪರೆಯ ಮಠಗಳು ಒಳಗೊಳಗೇ ತಮ್ಮ ಲಿಂಗಾಯತ ಧರ್ಮದ ಒಳಪಂಗಡಕ್ಕೆ ಸಹಾಯಕವಾಗಿ
ನಿಂತರು. ವೀರಶೈವರು ಲಿಂಗಾಯತ ಧರ್ಮದ ಒಂದು ಉಪ ಪಂಗಡ.

10 ) ನೆಲ ಕಚ್ಚಿತೆ ಧರ್ಮ ಮಾನ್ಯತೆ ಹೋರಾಟ

ಬ್ರಹತ್ ಸಮಾವೇಶ ಸುನಾಮಿ ಸಂಘಟನೆ ಲಿಂಗಾಯತ ಧರ್ಮ ಮಾನ್ಯತೆಗೆ ಹುಟ್ಟಿಕೊಂಡ ಅನೇಕ ಲಿಂಗಾಯತ ಸಂಘಟನೆಗಳು ಕೆಲವು ರಾಜಕೀಯ ಪಕ್ಷಗಳ ಅಣತಿಯಂತೆ ನಡೆದು ಕೊಳ್ಳುತ್ತಿವೆ ಎಂಬ ಆರೋಪ.
ಹಿಂದಿನ ಕಾಂಗ್ರೆಸನ ಸರ್ಕಾರ ಲಿಂಗಾಯತ ಧರ್ಮದ ಮಾನ್ಯತೆ ಮತ್ತು ಧಾರ್ಮಿಕ ಅಲ್ಪ ಸಂಖ್ಯಾತ ಮಾನ್ಯತೆಗೆ ಕೇಂದ್ರ ಸರ್ಕಾರಕ್ಕೆ
ಪ್ರಸ್ತಾವನೆ ಸಲ್ಲಿಸಿ ನಂತರ ಚುನಾವಣೆ ಸಂದರ್ಭದಲ್ಲಿ ಲಿಂಗಾಯತರ ಅಧಿಕ ಮತ ಗಳಿಸಿ ಸೋತ ನಂತರ ಸೋಲಿಗೆ ಕೆಲವು ರಾಜಕಾರಣಿಗಳು ತಮ್ಮ ಸರ್ಕಾರ ಲಿಂಗಾಯತ ಧರ್ಮವನ್ನು ಮಾನ್ಯತೆ ಮಾಡಲು ಹೊರಟ ಕ್ರಮದಿಂದ
ತಾವು ಅಧಿಕಾರ ಕಳೆದುಕೊಂಡೆವು ಎಂದು ಆರೋಪ ಮಾಡಿ ಒಂದು ಹಂತದಲ್ಲಿ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರನ್ನು ಮತ್ತು ಶ್ರೀ ಎಂ ಬಿ ಪಾಟೀಲರನ್ನು ಪಕ್ಷದ ಸೋಲಿಗೆ ಹೊಣೆಗಾರರನ್ನಾಗಿ ಮಾಡಲು ಸ್ತ್ರಪಕ್ಷದವರಿಂದಲೇ ಕುತಂತ್ರ ನಡೆಯಿತು.
ಈಗ ಇವೆಲ್ಲವೂ ಇತಿಹಾಸ
ಲಿಂಗಾಯತರಿಗೆ ಧರ್ಮ ಮಾನ್ಯತೆ ಮುಖ್ಯವೇ ಹೊರತು ರಾಜಕೀಯ ಲೆಕ್ಕಾಚಾರವಲ್ಲ.
ಪ್ರಾಮಾಣಿಕ ಪ್ರಯತ್ನ ಕಾನೂನಾತ್ಮಕ ಹೋರಾಟ ಮತ್ತು ನಿಷ್ಟೆಯಿಂದ ದುಡಿಯುವ ಕಾರ್ಯಕರ್ತರನ್ನು
ಲಿಂಗಾಯತ ಸಂಘಟನೆಗಳು ಗುರುತಿಸಿ ಹೋರಾಟದ ನೀಲ ನಕ್ಷೆ ಸಿದ್ಧಪಡಿಸಿ ಹೋರಾಡುವ ಅಗತ್ಯ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ.
ಅಂತಹ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ
ಲಿಂಗಾಯತ ಧರ್ಮ ಅಲ್ಪ ಸಂಖ್ಯಾತ ಸ್ಥಾನಮಾನ ಮತ್ತು ಸ್ವತಂತ್ರ ಧಾರ್ಮಿಕ ಮಾನ್ಯತೆ ಕಾನೂನು ಸಮ್ಮತ ಮತ್ತು ನ್ಯಾಯ ಸಮ್ಮತ

ಡಾ ಶಶಿಕಾಂತ ಪಟ್ಟಣ ರಾಮದುರ್ಗ 9552002338

Don`t copy text!