ಗಜಲ್
ಬಂದಿದೆ ಮತ್ತೆ ಶ್ರಾವಣ ತನು ಹಿಗ್ಗಿಸಿದೆ ಉಲ್ಲಾಸವನ್ನು
ತೆರೆದಿದೆ ಮನೆ ಮನವೆಲ್ಲ ತುಂಬಿ ಬರೆಸಿದೆ ಕವನವನ್ನು
ಗಿರಿ ಗಗನವೆಲ್ಲ ತುಂಬಿ ಹಸಿರು ಮೇಲಕ್ಕೆ ಹರಡಿದೆಯಲ್ಲ
ಚೆಲುವು ಮೈದುಂಬಿಕೊಂಡು ನಲಿ ನಲಿಸಿದೆ ಗಗನವನ್ನು
ಮೇಘಗಳ ಬೆಳಕಿನಾಟದ ನೋಟವು ಅದೆಷ್ಟು ಅದ್ಭುತ
ಅದೆಂತಹ ನಿಸರ್ಗ ಮಾಟವದು ಹೆಚ್ಚಿಸಿದೆ ಚೈತನ್ಯವನ್ನು
ಹಬ್ಬಗಳ ಸರತಿಯಲ್ಲಿ ಹೆಣ್ಣುಗಳ ಸಡಗರಕ್ಕೆ ಕೊರತೆಯೆ
ತವರಿನ ಪ್ರೀತಿಯೊಂದು ಹೆಣ್ಣಿಗೆ ಮರೆಸಿದೆ ದುಗುಡವನ್ನು
ತಪ್ಪೊಪ್ಪುಗಳ ನಡುವೆ ಸರಿ ನಡೆಯಲೇನು ಕೊರತೆಯಿದೆ
ಎಲ್ಲರನ್ನು ತಬ್ಬಿಕೊಂಡ ಹಬ್ಬವು ನಿರ್ಮಿಸಿದೆ ನಂದನವನ್ನು
ನನ್ನಷ್ಟೇ ನಾನಿದ್ದು ಸ್ವಾರ್ಥದಲ್ಲಿರೆ ಬೆಳಕು ಬರುವುದುಂಟೆ
ಸಹೃದಯತೆಯ ಶುದ್ಧ ಭಾವವು ಸೃಷ್ಷ್ಠಿಸಿದೆ ಸ್ವರ್ಗವನ್ನು
ಭಾರತದ ವೃಕ್ಷದಲ್ಲಿ ಸಂಬಂಧಗಳ ಬೇರುಗಳು ಗಟ್ಟಿಯಿವೆ
ಈಶ್ವರ ! ಭಾವೈಕ್ಯತೆಯ ಒಲುಮೆ ಬೆಸೆದಿದೆ ಒಗ್ಗಟ್ಟವನ್ನು
– ಈಶ್ವರ ಮಮದಾಪೂರ, ಗೋಕಾಕ.