ಸಾಂಸ್ಕೃತಿಕ ಚಟುವಟಿಕೆ , ಕ್ರೀಡೆ ,ಇಕೋಕ್ಲಬ್ ಉದ್ಘಾಟನೆ
e-ಸುದ್ದಿ ಮೂಡಲಗಿ
ಮೂಡಲಗಿ -ಸಮೀಪದ ಶ್ರೀ ಎಸ್ ಆರ್ ಸಂತಿ ಸರಕಾರಿ ಪದವಿ ಪೂರ್ವ ಕಾಲೇಜು ಹಳ್ಳೂರ ಇಲ್ಲಿ 2022-2023 ನೇ ಸಾಲಿನ ಸಾಂಸ್ಕೃತಿಕ ಚಟುವಟಿಕೆ , ಕ್ರೀಡೆ ,ಇಕೋಕ್ಲಬ್ ‘ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವು ಜರುಗಿತು. ಮೂಡಲಗಿಯ ಶ್ರೇಷ್ಠ ಸಾಹಿತಿಗಳು ಆದ ಸಂಗಮೇಶ ಗುಜಗೊಂಡ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ವಿದ್ಯಾರ್ಥಿಗಳ ಜ್ಞಾನವನ್ನು ಯಾರೂ ಕದಿಯಲಾರರು. ಜ್ಞಾನಕ್ಕೆ ಬೆಲೆ ಕಟ್ಟಲು ಆಗೋದಿಲ್ಲ. ಇವತ್ತಿನ ವಿದ್ಯಾರ್ಥಿಗಳ ಮೊಬೈಲ್ ಬಳಕೆಯಿಂದಾಗಿ ಓದುವ ಆಸಕ್ತಿಯು ತುಂಬಾ ಕಡಿಮೆ ಆಗಿದ್ದು,ಓದುವ ಆಸಕ್ತಿಯನ್ನು ಬೆಳೆಸಿಕೊಂಡು ಆಟಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಬೇಕೆಂದು ಹೇಳಿದರು .
ಭೂದಾನಿಗಳಾದ ಬಸಪ್ಪ ಶಂಕ್ರೆಪ್ಪ ಸಂತಿ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳು ತಂದೆ -ತಾಯಿ ಹಾಗೂ ಗುರುಗಳಿಗೆ ವಿನಯದಿಂದ ನಡೆದುಕೊಂಡು ಕಾಲೇಜು ಹಾಗೂ ಊರಿನ ಹೆಸರನ್ನು ತರಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸಾವಿತ್ರಿ ಮಹದೇವಪ್ಪ ಕಮಲಾಪೂರ ಅಧ್ಯಕ್ಷತೆ ವಹಿಸಿ ಉಪನ್ಯಾಸಕರನ್ನು ಅಭಿನಂದಿಸಿ ಮಾತನಾಡಿ. ವರ್ಷದಿಂದ ವರ್ಷಕ್ಕೆ ನಮ್ಮ ಕಾಲೇಜಿನ ಹಾಜರಾತಿ ಹೆಚ್ಚಾಗುತ್ತಲೇ ಇರುವುದಕ್ಕೆ ಕಾರಣ ಇಲ್ಲಿರುವ ಶಿಸ್ತಿನ ಶಿಕ್ಷಣ. ಮೌಲ್ಯಗಳು ‘ಕಲಿಸುವ ಪದ್ಧತಿ ಕಾಳಜಿ ,ಅನುಕಂಪ ಇವೆಲ್ಲವುಗಳಿಂದ ನಮ್ಮ ಕಾಲೇಜಿನ ಫಲಿತಾಂಶವು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಕಲಾ ವಿಭಾಗದಲ್ಲಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದೆ. ಎಂದರು.
ವಿದ್ಯಾರ್ಥಿಗಳು ಹೆತ್ತ ತಂದೆ-ತಾಯಿಗಳಿಗೆ ಗುರುಗಳಿಗೆ ವಯಸ್ಸಾದವರಿಗೆ ಗೌರವ ಭಾವನೆ ಸಲ್ಲಿಸಬೇಕು .ಇವತ್ತಿನ ಯುವಕರ ಮನಸ್ಸು ಹರೆಯುವ ಹೊಳೆಯಂತೆ ಸದಾ ಹರಿಯುತ್ತಿರುತ್ತಥೆ ಅದಕ್ಕೆ ಗೋಡೆಯನ್ನು ಕಟ್ಟಿ ಚಂಚಲ ಮನಸ್ಸನ್ನು ಹತೋಟಿಯಲ್ಲಿಟ್ಟು ಒಂದು ಮುತ್ತಾಗಿ ಬೆಳಗಬೇಕು ಎಂದರು. ಒಂದು ಮಳೆ ಹನಿಯು ಕಾದ ಕಬ್ಬಿಣದ ಮೇಲೆ ಬಿದ್ದು ಆವಿಯಾಗಿ ಹೋಗುತ್ತದೆ.ಅದೇ ಮಳೆ ಹನಿ ಭೂಮಿಯ ಮೇಲೆ ಬಿದ್ದಾಗ ಇಂಗಿ ಹೋಗುತ್ತದೆ.ಕಮಲದ ಎಲೆಯ ಮೇಲೆ ಬಿದ್ದಾಗ ಉದುರಿ ಹೋಗುತ್ತದೆ.ಅದೇ ಸ್ವಾತಿ ಮಳೆ ಹನಿಯು ಒಂದು ಕಪ್ಪೆ ಚಿಪ್ಪಿನ ಮೇಲೆ ಬಿದ್ದಾಗ ಒಂದು ಮುತ್ತಾಗಿ ಹೊರ ಬರುತ್ತದೆಯೋ ಹಾಗೆ ಒಂದು ಮುತ್ತಾಗಿ ಹೊರ ಬಂದು ಕಾಲೇಜನ್ನು ಬೆಳಗಿಸಬೇಕು ಎಂದು ಹೇಳಿದರು.
ಉಪನ್ಯಾಸಕರಾದ ಭೀಮಪ್ಪಾ ಕುದರಿಮನಿ ಅವರು ವಿದ್ಯಾರ್ಥಿಗಳ ಕುರಿತು ಮಾತನಾಡಿದರು. ಉಪನ್ಯಾಸಕರಾದ ವಾಯ್ ಬಿ ಕಳ್ಳಿಗುದ್ದಿ ಎಮ್ ಎಸ್ ಕುಂಬಾರ ಮೇಸ್ತ್ರಿಸರ್ ಸರಸ್ವತಿ ರಬಕವಿ ಬಿರಾದಾರ್ ಕಾರ್ಯಕ್ರಮ ದಲ್ಲಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು ಹಾಜರಿದ್ದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಎಸ್ ಆಯ್ ಪತ್ತಾರ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.