ನಿಮ್ಮ ಆಹಾರ ನಿಮಗೆಷ್ಟು ಗೊತ್ತು? –
ಟೊಮೆಟೊ
(ವಾರದ ವಿಶೇಷ ಅಂಕಣ)
ಕನ್ನಡದಲ್ಲಿ ಟೊಮೆಟೊಗೆ ಗೂದೆ ಹಣ್ಣು ಎನ್ನುತ್ತಾರೆ. ಟೊಮೆಟೊ ಪದ ಸ್ಪಾನಿಶ್ ಮೂಲದಿಂದ ಬಂದ ಪದವಾಗಿದೆ. ಟೊಮೆಟೊ ತರಕಾರಿಯೂ ಹೌದು ಹಣ್ಣು ಹೌದು. ಸಸ್ಯ ಶಾಸ್ತ್ರದ ಪ್ರಕಾರ ಟೊಮೆಟೊ ಹಣ್ಣು. ವಿಶ್ವದಲ್ಲಿ 10 ಸಾವಿರ ವಿಧದ ಟೊಮೆಟೋಗಳಿವೆ. ಟೊಮೆಟೊಗಳು ಸದಾ ಕೆಂಪಾಗಿಯೇ ಇರುವುದಿಲ್ಲ. ಹಸಿರು ಹಳದಿ ಬಣ್ಣದ ಟೊಮೊಟೊ ದೊರೆಯುತ್ತವೆ. ಚೀನಾ ದೇಶವು ಟೊಮೆಟೊ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.
ಟೊಮೆಟೊದ ವಿಶೇಷತೆ ಎಂದರೆ ಟೊಮೆಟೊನಲ್ಲಿ ಲೈಕೋಫೇನ್ ಎಂಬ ಆಂಟಿ ಆಕ್ಸಿಡೆಂಟ್ ಹೇರಳವಾಗಿದ್ದು ಇದರಿಂದ ಹೃದಯದ ಸಂಬಂಧಿ ಕಾಯಿಲೆ ಮತ್ತು ಕೆಲವು ಕ್ಯಾನ್ಸರ್ ತಡೆಗಟ್ಟುವ ಗುಣವಿದೆ. ಟೊಮೆಟೊದಲ್ಲಿ ವಿಟಮಿನ್ ಎ ಮತ್ತು ಸಿ, ಬಿ ಮತ್ತು ಇ ವಿಟಮಿನ್ ಅಂಶಗಳ ಜೊತೆಗೆ ಕ್ಯಾಲ್ಶಿಯಮ್ ಮತ್ತು ಪೊಟ್ಯಾಷಿಯಮ್ ಕೂಡ ಇರುತ್ತದೆ. ಈ ಲೈಕೋಫೇನ್ ನಮ್ಮನ್ನು ಅಲ್ಟ್ರಾವಯಲೇಟ್ ಕಿರಣಗಳಿಂದ ರಕ್ಷಿಸುತ್ತದೆ, ನಮ್ಮ ಜೀವಕೋಶಗಳಿಗೆ ಉಂಟಾಗುವ ಹಾನಿಯನ್ನು ತಡೆಯುತ್ತದೆ. ಒಂದು ನೂರು ಗ್ರಾಂ ಟೊಮೆಟೊದಲ್ಲಿ ಕ್ಯಾಲರಿ -18, ನೀರಿನಂಶ 95%,, ಪ್ರೊಟಿನ್ ಅಂಶ 0.9ಗ್ರಾಂ, ಕಾಬೋಹೈಡ್ರೆಡ್ಸ್ 3.9 ಗ್ರಾಂ, ಸಕ್ಕರೆ 2.9 ಗ್ರಾಂ, ಫೈಬರ್ 1.2 ಗ್ರಾಂ, ಮತತ್ತು 0.2 ಗ್ರಾಂ ಕೊಬ್ಬಿನಂಶ ಇರುತ್ತದೆ.
ಟೊಮೆಟೊದಿಂದ ಕ್ಯಾನ್ಸರ್ ತಡೆಗಟ್ಟ ಬಹುದು, ರಕ್ತದೊತ್ತಡ, ಮಧುಮೇಹ ನಿಯಂತ್ರಣದಲ್ಲಿಡಲು ಸಹಾಯಕ, ಹೃದಯ ರೋಗದ ಸಮಸ್ಯೆಗೂ ಉಪಯೋಗಕಾರಿ, ಆಸ್ಟಿರೋ ಆರ್ಥರೈಟಿಸ್‌ನಲ್ಲೂ ಸಹಕಾರಿ. ಟೊಮೆಟೊ ಚರ್ಮದಲ್ಲಿರುವ ಹೆಚ್ಚಿನ ಪ್ರಮಾಣದ ಜಿಡ್ಡನ್ನು ಕಡಿಮೆ ಮಾಡುತ್ತದೆ. ಆದರೆ ನಿಮ್ಮ ಚರ್ಮ ಒಣ ಚರ್ಮವಾಗಿದ್ದರೆ ನಿಮ್ಮ ಮುಖದಲ್ಲಿ ತೇವಾಂಶ ಬರಲೂ ಟೊಮೆಟೊ ಫೇಸ್ ಪ್ಯಾಕ್ ಬಳಸ ಬಹುದಾಗಿದೆ.
ಆದರೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ತಿಂದರೆ ಎದೆಯುರಿ, ಆಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಸಂಸ್ಯೆಯಾಗುವ ಸಂಭವವಿದೆ. ಟೊಮೆಟೊದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿ ಇರುವದಿಲ್ಲ. ಇದನ್ನು ನಾನ್ ಸ್ಟಾರ್ಚ್ ತರಕಾರಿ ಎನ್ನಲಾಗುತ್ತದೆ. ಅಧ್ಯಯನದ ಪ್ರಕಾರ ಒಂದು ಟೊಮೆಟೊ ಮನುಷ್ಯನಿಗೆ ಬೇಕಾದ ವಿಟಮಿನ್ ಸಿಯ ಪ್ರಮಾಣದಲ್ಲಿ ಶೇಕಡಾ 40% ವಿಟಮಿನ್ ಸಿ ಅಂಶ ಹೊಂದಿರುತ್ತದೆ. ಇದರಲ್ಲಿ ವಿಟಮಿನ್ ಕೆ ಕೂಡ ಇರುವುದರಿಂದ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿದೆ. ವಿಟಮಿನ್ ಎ ಮತ್ತು ಪೊಟಾಷಿಯಮ್ ಜೊತೆಗೆ ಕಬ್ಬಣದ ಅಂಶವೂ ಇರುತ್ತದೆ. ಇದರಿಂದ ರಕ್ತ ಸಂಚಲನಕ್ಕೆ ಸಹಕಾರಿ.
ಟೊಮೊಟೊದಲ್ಲಿ ವಿಟಮಿನ್ ಎ ಮತ್ತು ಸಿ ಇರುವುದರಿಂದ ಕೂದಲ ಆರೋಗ್ಯಕ್ಕೂ ಉಪಕಾರಿಯಾಗಿದೆ. ಕುದಲಿನ ಹೆಳಪಿಗೆ ಸಹಕಾರಿಯಾಗುತ್ತದೆ. ಲೈಕೋಫೇನ್ ಇರುವುದರಿಂದ ಟೊಮೊಟೊ ಚರ್ಮದ ಆರೋಗ್ಯಕ್ಕೆ ಸಹಕಾರಿ. ಕೆಂಪಾದ ಕಲೆಗಳನ್ನು ಕಡಿಮೆ ಮಾಡುತ್ತದೆ. ಟೊಮೊಟೊ ಕಪ್ಪು ಕಲೆಗಳನ್ನು ಹೊಗಲಾಡಿಸುವಲ್ಲಿ ಸಹಕಾರಿಯಾಗಿದೆ.
ಕೆಲವೊಂದು ಬಾರಿ ಟೊಮೊಟೊ ಹಾನಿಕಾರಕವೂ . ಯಾವುದೇ ಪದಾರ್ಥವನ್ನು ಇತಿಮಿತಿ ಮತ್ತು ನಮ್ಮ ಪ್ರಕೃತಿಗೆ ಅನುಗುಣವಾಗಿ ಸೇವಿಸಬೇಕು.
ಟೊಮೆಟೊ ಎಲ್ಲ ರೀತಿಯ ಅಡುಗೆಯಲ್ಲಿ ಸ್ವಾದವನ್ನು ನೀಡುವುದರೊಂದಿಗೆ ಆರೋಗ್ಯಕರವಾಗಿದೆ. ಹಸಿಯಾಗಿ ಬೇಯಿಸಿ, ಸಿಹಿ, ಖಾರ, ಪಾನೀಯ ರೂಪ ಎಲ್ಲ ರೀತಿಯಲ್ಲೂ ಬಳಸಬಹುದಾದ ಹಣ್ಣು/ತರಕಾರಿಯಾಗಿದೆ.
–ಮಾಧುರಿ ದೇಶಪಾಂಡೆ, ಬೆಂಗಳೂರು