ರಾಷ್ಟ್ರ ಧ್ವಜವ ಹಾರಿಸಿ

ರಾಷ್ಟ್ರ ಧ್ವಜವ ಹಾರಿಸಿ

 

ಮನೆ ಮನೆಯ ಮಾಳಿಗೆ ಮೇಲೆ ರಾಷ್ಟ್ರದ್ವಜವ ಏರಿಸಿ ಏರಿಸಿ
ಹೆಮ್ಮೆಯಿಂದ ಮನವ ಕುಣಿಸಿ ರಾಷ್ಟ್ರ ಧ್ವಜ ವ ಹಾರಿಸಿ ಹಾರಿಸಿ
ಸಂಧಿ-ಗೊಂದಿ ಮನೆಯ ಮಹಡಿ ದೇಶ ಭಕ್ತಿಯ
ಚಿಮ್ಮಿಸಿ ಚಿಮ್ಮಿಸಿ

ದೇಶ ರಕ್ಷಣೆ ನಮ್ಮ ಕರ್ತವ್ಯ ವಿಷದ ದಳ್ಳುರಿ
ಹೋಗಿಸಿ ಹೋಗಿಸಿ
ಒಡಲ ಸಿಟ್ಟು ದ್ವೇಷ ಬಿಟ್ಟು ಕುಟುಂಬ ಒಂದೇ
ಭಾರತ ಭಾರತ

ಬುದ್ಧ ಬಸವ ಗಾಂಧಿ ಅಂಬೇಡ್ಕರ್ ಹುಟ್ಟಿಬೆಳೆದ ಭಾರತ ಭಾರತ
ಜಾತಿ -ವಿಜಾತಿ ತೊಲಗಿ ಬೆಳಗಿ ಐಕ್ಯಗೂಡು ಕಟ್ಟಲಿ ಕಟ್ಟಲಿ

ನಾಡಮಂದಿ ತಿಳಿದು ನಡೆದು ಮುಂದೆ ಸಾಗಿ
ಸಾಗುತಾ ಸಾಗುತಾ
ಎಲ್ಲರೆದೆಗೆ ಪ್ರೀತಿ ತುಂಬಿ ಬಾಳು ಸುಂದರ
ಗೊಳಿಸುತಾ ಗೊಳಿಸುತಾ

ಮನದಿ ಶಾಂತಿ ನೆಲಸಿ ಮುಂದೆ
ನಿತ್ಯ ನಿಯಮ ಪಾಲಿಸಿ-ಪಾಲಿಸಿ
ತಾಯಿ ಇವಳು ಮಕ್ಕಳೆಂದು ತಪ್ಪು ನಡೆಯನು
ಕ್ಷಮಿಸುತಾ ಕ್ಷಮಿಸುತಾ
ವೀರರೆದೆಗೆ ಗುಂಡು ತಾಗಿ ತಾಯಿ ನೆಲವ
ಉಳಿಸುತಾ ಉಳಿಸುತಾ

ಕೊಟ್ಟರೆಮಗೆ ಭವ್ಯ ಸ್ವಾತಂತ್ರ್ಯ
ರಾಷ್ಟ್ರ ಧ್ವಜವ ಹಾರಿಸಿ ಹಾರಿಸಿ

ಸುರಿದ ನೆತ್ತರು ಜೈಲು ಚಳುವಳಿ ಹೋರಾಟದ
ಕ್ರಾಂತಿಯು ಕ್ರಾಂತಿಯು
ಇಲ್ಲ ನಮಗೆ ಭೇದ ಭಾವ
ನಾವು ತಾಯಿ ಮಕ್ಕಳು ಎಂದು ತಿಳಿದು ಭಾರತ ಭಾರತ

ಶ್ರೀಮತಿ ಸಾವಿತ್ರಿ ಕಮಲಾಪೂರ ಮೂಡಲಗಿ

Don`t copy text!