ಯಶೋಗೀತೆ
ಭಾರತಮಾತೆಯ ಪ್ರೇಮದ ಕುವರರ|
ಯಶೋಗಾಥೆಯ ಗೀತೆಯಿದು||
ಭಾವೈಕ್ಯದಲಿ ಹಾಡುವ ಬನ್ನಿ |
ಗೆಳೆಯರೆ ಏಳಿರಿ
ಬೇಗಿಂದು||ಪ||
ಸ್ವಾಭಿಮಾನದ ಕಿಚ್ಚನು ಹಚ್ಚಿದ|
ಲಾಲ್ ಬಾಲ್ ಪಾಲರ
ನೆನೆಯುತಲೀ||
ಸೈನ್ಯವ ಕಟ್ಟಿ ಸ್ಥೈರ್ಯವ ತುಂಬಿತಾ|ಮೆರೆದ
ಸುಭಾಷರ ಸ್ಮರಿಸುತಲೀ||
ಹಿಂದೂ ರಾಷ್ಟ್ರದ ಸಂಸ್ಕೃತಿ ಸೊಡರನು
ವಿಶ್ವದ ಎಲ್ಲೆಡೆ ಬೆಳಗೋಣ||
ಬನ್ನಿರಿ ಗೆಳೆಯರೆ
ಹಾಡೋಣ||೧||
ಕಾರಾಗೃಹದ ಕಗ್ಗತ್ತಲಲು ಕುಗ್ಗದ|
ದೇಶಭಕ್ತ ಸಾವರ್ಕರ
ನೆನೆಯುತಲೀ|
ಪರದೇಶಿಗಳ ಕುತಂತ್ರದ ಉರುಳಿಗೆ|
ಸಿಲುಕಿದ ಗುರು ಭಗತರ ಸ್ಮರಿಸುತಲೀ||
ರಾಷ್ಟ್ರೋನ್ನತಿಯ ಧ್ಯೇಯವ ಹೊತ್ತು
ಧೈರ್ಯದಿ ಎದುರಾಳಿಗಳ ಮಣಿಸೋಣ||
ಬನ್ನಿರಿ ಗೆಳೆಯರೆ
ಹಾಡೋಣ||೨||
ಸತ್ಯ ಅಹಿಂಸೆಯ ಘೋಷವಾಕ್ಯವ ಜಪಿಸಿದ ರಾಷ್ಟ್ರಪಿತ
ನ ನೆನೆಯುತಲೀ|
ಜೈ ಜವಾನ್ ಜೈ ಕಿಸಾನ್ ಎಂದು ಸಾರಿದ ನಿಷ್ಕಾಮ ಕರ್ಮಿಯ ಸ್ಮರಿಸುತಲೀ||ಜಾತಿಮತಗಳ ಭೇದವನಳಿಸಿ ಮಾನವಧರ್ಮ ಉಳಿಸೋಣ,ಶಾಂತಿ
ಮಂತ್ರವ ಪಠಿಸೋಣ||
ಬನ್ನಿರಿ ಗೆಳೆಯರೆ
ಹಾಡೋಣ
-ವಸುಧ