ರಾಯಚೂರು ಜಿಲ್ಲೆ ತೆಲಂಗಾಣ ವಿಲಿನಕ್ಕೆ ಶಾಸಕ ಅಮರೇಗೌಡ ಬಯ್ಯಾಪುರ ವಿರೋಧ

e – ಕುಷ್ಟಗಿ

ತೆಲಂಗಾಣ ರಾಜ್ಯದಲ್ಲಿ ರಾಯಚೂರು ಜಿಲ್ಲೆ ವಿಲೀನದ ಬಗ್ಗೆ ತೆಲಂಗಾಣ ಸಿಎಂ‌ ಕೆ.ಚಂದ್ರಶೇಖರ ಹೇಳಿಕೆಗೆ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೆಲಂಗಾಣ ಸಿಎಂ ಅವರ ಈ ಹೇಳಿಕೆ ತೀರ ಬಾಲಿಶತನದ್ದು, ಯಾವುದೇ ಕಾರಣಕ್ಕೂ ರಾಯಚೂರು ಜಿಲ್ಲೆ ತೆಲಂಗಾಣ ರಾಜ್ಯಕ್ಕೆ ಸೇರುವ ಪ್ರಶ್ನೆ ಇಲ್ಲ. ಯಾಕೆಂದರೆ ರಾಯಚೂರು ಜಿಲ್ಲೆ ನಿನ್ನೆ ಮೊನ್ನೆಯದಲ್ಲ. ‌ನಿಜಾಮರ್ ಆಡಳಿತ ಕಾಲದಿಂದಲೂ ರಾಯಚೂರು ನಮ್ಮ ರಾಜ್ಯದಲ್ಲಿದ್ದು, ಜಿಲ್ಲೆಯ ಯಾವೊಬ್ಬ ವ್ಯಕ್ತಿ ಕೂಡಾ ತೆಲಂಗಾಣಕ್ಕೆ‌‌ ಸೇರುವ ಬಗ್ಗೆ ಆಸೆ ವ್ಯಕ್ತಪಡಿಸುವುದಿಲ್ಲ.

ಬಿಜೆಪಿ ರಾಜ್ಯ ಸರ್ಕಾರ ಈ ಭಾಗದ ಅಭಿವೃದ್ಧಿ ಕೆಲಸಗಳಿಗೆ ಸ್ಪಂಧಿಸದೇ ಇರುವುದಕ್ಕೆ ಅಲ್ಲಿನ ಶಾಸಕ ಶಿವರಾಜ್ ಪಾಟೀಲ ಬೇಸರ ವ್ಯಕ್ತಪಡಿಸಿದ್ದರೇ ತೆಲಂಗಾಣದಲ್ಲಿ ರಾಯಚೂರು ವಿಲೀನದ ಬಗ್ಗೆ ಪ್ರಸ್ತಾಪ ಆಗಿರಲಿಲ್ಲ. ರಾಯಚೂರು ಜಿಲ್ಲೆಯ ವಿಚಾರವಾಗಿ ತೆಲಂಗಾಣ ಸಿಎಂ ಹೇಳಿಕೆ ಖಂಡಿಸುವುದಾಗಿ ಹೇಳಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ‌ ಮೇಲೆ ಮೊಟ್ಟೆ ಎಸೆದ ಪ್ರಕರಣದ ಬಗ್ಗೆ ಮಾತನಾಡಿ ಬಿಜೆಪಿಯವರೇ ಹತಾಶರಾಗಿ ಈ ರೀತಿ ಮಾಡಿಸುತ್ತಿದ್ದಾರೆ. ಮುಂದೊಂದು ದಿನ ಅವರ ಈ ಕೆಟ್ಟ ಸಂಪ್ರದಾಯ ಅವರಿಗೆ (ಬಿಜೆಪಿ) ಮುಳುವಾಗಲಿದೆ. ಅಂತಹ ದೊಡ್ಡ ವ್ಯಕ್ತಿಗೆ ಈ ರೀತಿ ಮಾಡುವುದು ಬಿಜೆಪಿಯ ಕೆಟ್ಟ ಸಂಸ್ಕೃತಿ ಬಿಂಬಿಸುತ್ತಿದ್ದು ಬಿಜೆಪಿ ನಡೆಯನ್ನು ಖಂಡಿಸುತ್ತೇನೆ ಎಂದರು.

Don`t copy text!