ಶ್ರೀ ಕೃಷ್ಣನ ಜನ್ಮ
ಶ್ರಾವಣದ ಜಿನುಗು ಮಳೆ
ತೋಯಿದು ಹೋಯಿತು ಇಳೆ
ರೊಯ್ಯನೆ ಬೀಸುವ ಗಾಳಿ
ಆಗಾಗ ಬರುವ ಮಿಂಚಿನ ಸುಳಿ
ಪುಟ್ಟ ಕೃಷ್ಣ ಜನಿಸಿದ ಆಗ
ಆ ವಸುದೇವ ದೇವಕಿಗೆ
ಮಾತಾಪಿತರಿಗೆ ಆನಂದವೋ ಆನಂದ
ಭವ ಬಂಧ ಬಿಡಿಸ ಬಂದ ಮುದ್ದು ಕಂದ ll1ll
ದೇವಕಿಗೆ ಸಂತಸವೋ ಸಂತಸ
ನೋಡಿ ಮಗುವಿನ ಮುದ್ದಾದ ಮಂದಹಾಸ
ಮರೇತಳೊ ಕಂಸ ಬಂದಾನೇಂಬ ಶಂಕೆ
ಕಂದನ ಅಪ್ಪಿ ಮುದ್ದಾಡಿದಳೊ ಆಕೆ ll2ll
ನೆನಪಿಸಿ ವಸುದೇವ ಕಂದನ ಕೊಡು ಎನಲು
ಆದರೂ ಆಕೆ ಮಗುವ ಬಿಡಳು
ಹಿಂದಿನ ಮಕ್ಕಳ ವೃತ್ತಾಂತ ನೆನಪಾಗಿ
ಕಣ್ಣೀರ ಸುರಿಸುತ ಕೊಟ್ಟಳು ಕೊನೆಗೆ ll3ll
ಮೆತ್ತನೆ ಹಾಸಿಗೆಯ ಬುಟ್ಟಿಯೊಳು ಹಾಸಿ
ವಸುದೇವ ಇಟ್ಟನು ಮಗುವ ಮೇಳೈಸಿ
ಹೊತ್ತು ನಡೆದನು ಬುಟ್ಟಿಯ ಸೆರೆಯಾದ ಬಾಗಿಲಿಗೆ
ಅದೇನಾಶ್ಚರ್ಯ ಕಳಚಿದವು ಕೊoಡಿ ತಾವಾಗೇ ll4ll
ಹೊತ್ತು ನಡೆದ ಮಗುವ ಯಮುನೆಯೆಡೆಗೆ
ಶೇಷ ಕೊಡೆಯಾಗಿ ರಕ್ಷಿಸಿದ ದೇವಗೆ
ದಾರಿ ಬಿಟ್ಟಳೋ ಯಮುನೇ ವಸದೇವಗೇ
ಕೋಂಡೊಯ್ದ ಮಗುವ ನಂದನ ಮನೆಗೆ ll5ll
ನಸುನಗುತ್ತ ಬಂದ ನಂದ ಕಂಡ ಮುದ್ದು ಕಂದನ
ಕೊಟ್ಟ ಯಶೋದೆಗೆ, ಹಿಗ್ಗಿತವಳ ಮನ
ಕೊಟ್ಟ ದುರ್ಗೆಯ ನಂದ ವಸುದೇವಂಗೆ
ಬಂದ ಮರಳಿ ವಸುದೇವ ಬುಟ್ಟಿ ಹೊತ್ತು ಮಥುರೆಗೆ ll6ll
✍️ರೇಖಾ. ಮುತಾಲಿಕ್
ವಿದ್ಯಾಗಿರಿ
ಬಾಗಲಕೋಟ