ಜೋಗುಳ ಪದ

ಜೋಗುಳ ಪದ

ತೂಗಿರೆ ರಂಗನ ತೂಗಿರೆ ಕೃಷ್ಣನ
ತೂಗಿರೆ ನಂದಕಿಶೋರನ ಜೊ..ಜೊ

ವಸುದೇವ ಪುತ್ರ ದೇವಕಿ ನಂದನ
ಬಾಲ ಗೋಪಾಲ ಬೆಣ್ಣೆಕಳ್ಳ ತುಂಟನ
ತೂಗಿರೆ ನಂದಕಿಶೋರನ ಜೊ..ಜೊ

ಕಾಳಿಂಗ ಮರ್ದಿಸಿದ ಕಂಸನ ವಧಿಸಿದ
ಗೋಪಿಕೆಯರ ಗೋಳಾಡಿಸಿದ ಗೊಲ್ಲನ
ತೂಗಿರೆ ನಂದಕಿಶೋರನ ಜೊ..ಜೊ

ಗೋವುಗಳ ರಕ್ಷಿಪ ಕೊಳಲು ವಾದಕನ
ಗೋವರ್ಧನ ಗಿರಿ ಎತ್ತಿದ ಗೋಪಾಲನ
ತೂಗಿರೆ ನಂದಕಿಶೋರನ ಜೊ..ಜೊ

ರುಕ್ಮಿಣಿಗೆ ಪತಿ ರಾಧೆಗೆ ಒಲಿದಾತ
ಬಾಯಲಿ ಬ್ರಹ್ಮಾಂಡ ತೋರಿದ ಶ್ಯಾಮನ
ತೂಗಿರೆ ನಂದಕಿಶೋರನ ಜೊ…ಜೊ

ಜಗದೊಡೆಯ ಜಗಪಾಲ ಜಗದೋದ್ದಾರಕನ
ತೂಗಿರೆ ನಂದಕಿಶೋರನ ಜೊ..ಜೊ

ರೋಹಿಣಿ ಯಾದವಾಡ

Don`t copy text!