ಕನ್ನಡದ ಮೇರು ಗಿರಿ…
ಚೂಪು ಹುಬ್ಬಿನ
ತೀಕ್ಷ್ಣ ಕಂಗಳಲಿ
ಸದಾವಕಾಲದಲಿ
ಸತ್ಯ ಹುಡುಕಾಟ..
ಹರಿತ ಕತ್ತಿಯಂಥ
ನೇರ ಮಾತಿನಲೂ
ಶೋಧದ ಹೋರಾಟ
ಆದರೂ ಮೃದು ಹೃದಯಿ…
ನಾಡ ಮೂಲೆ ಮೂಲೆಯಲಿ
ಮಣ್ಣ ಕಣ ಕಣದಲಿ
ಶಿಲಾ ಶಾಸನಗಳಲಿ
ಓಲೆಗರಿಗಳಲಿ ಸದಾ
ಬಸವಣ್ಣನ ಕಾಣ್ವ ಹಂಬಲ…
ಶರಣರಾ ವಚನಗಳ
ಜಗದಗಲ ಹರಡಿ
ಕನ್ನಡದ ಕಂಪನು
ಬೀರಿದ ಮಹಾಮಹಿಮರು…
ಮಾನವ ಧರ್ಮದ ಉಸಿರಾಗಿ
ಸತ್ಯನಿಷ್ಠೆಯ ಕಾಯಕದಲಿ
ಜೀವನವನೇ ತೇಯ್ದು
ಅದಕಾಗೇ ಬಲಿದಾನ ನೀಡಿ
ಅಮರರಾದ ನಿಮಗೆ
ಸಾವಿರದ ಶರಣು..ಶರಣು..!
ಹಮೀದಾ ಬೇಗಂ ದೇಸಾಯಿ ಸಂಕೇಶ್ವರ