ಶರಣು ವೀರ ಶರಣ ಮಾಚಿದೇವರಿಗೆ
ಶರಣ ಎನ್ನಲೇ ನಿಮಗೆ
ವೀರ ನಾಯಕ ಎನ್ನಲೇ
ತನುಶುದ್ಧಿಯ ಕಾಯಕದಿ
ಮನಶುದ್ಧಿಯನಿರಿಸಿದಿರಿ
ಮಡಿವಾಳನೆನಿಸಿದರೂ
ಮನದ ಮೈಲಿಗೆಯ
ತೊಳೆದ ಮಹಾತ್ಮರೇ
ಶರಣ ಸಂಕುಲಕೆ
ಮೇರು ಸದೃಶ ನೀವು..
ತನು ಮನಗಳೆಲ್ಲವನು
ಸದಾಚಾರದಲಿ ಮಿಂದು
ಮಡಿಯಾಗಿಸಿದ;
ಬಸವ ತತ್ವಗಳನು
ಮೈಗೂಡಿಸಿಕೊಂಡ
ಕಾಯಕ ಯೋಗಿ ನೀವು..
ವಚನಗಳ ರಕ್ಷಣೆಯ
ಹೊಣೆ ಹೊತ್ತು ಹೋರಾಡಿದ
ವೀರ ಶರಣ ನೀವು
ತಂದೆ ಮಾಚಿದೇವರೇ
ನಿಮಗೆ ನೂರೊಂದು ಶರಣು..
🙏ರಚನೆ: ಹಮೀದಾಬೇಗಂ ದೇಸಾಯಿ ಸಂಕೇಶ್ವರ 🙏